Skip to main content
ವಿಡಿಯೋ
politics

ಇರಾನ್‌ನ ನೈಜ ಶಕ್ತಿ ಕೇಂದ್ರವಾಗಿ ಅಹಮದ್ ವಾಹಿದಿ ಉದಯ: ಅಜ್ಞಾತವಾಸದಲ್ಲಿ ಮೊಜ್ತಬಾ ಖಮೇನಿ?

By prasanna jodidar
ಇರಾನ್‌ನ ನೈಜ ಶಕ್ತಿ ಕೇಂದ್ರವಾಗಿ ಅಹಮದ್ ವಾಹಿದಿ ಉದಯ: ಅಜ್ಞಾತವಾಸದಲ್ಲಿ ಮೊಜ್ತಬಾ ಖಮೇನಿ?

ಇರಾನ್ ಮಿಲಿಟರಿ ಶ್ರೇಣಿಯಲ್ಲಿ ವಾಹಿದಿ ಪರ್ವ: ಹಿರಿಯ ನಾಯಕರ ನಾಪತ್ತೆಯ ನಡುವೆ ದೇಶದ ರಕ್ಷಣಾ ಸೂತ್ರ ಹಿಡಿದ ಕಠಿಣ ನಿರ್ಧಾರಗಳ ಸರದಾರ

ಕೊನೆಗೂ ಇರಾನ್ ಸಂಪೂರ್ಣ ಜವಾಬ್ದಾರಿ ಯಾರ ಕೈಯಲ್ಲಿದೆ ಎಂಬುದು ಬಹಿರಂಗವಾಗಿದೆ. ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಕಳೆದ ಮೂರು ದಿನಗಳ ಘಟನಾವಳಿಗಳು ಅಹಮದ್ ವಾಹಿದಿ ಅವರೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿವೆ.

ಲಾರಿಜಾನಿ ಅವರ ನಿರ್ಗಮನದ ನಂತರ, ಇರಾನ್ ಮಿಲಿಟರಿ ಶ್ರೇಣಿಯಲ್ಲಿ ಒಂದು ರೀತಿಯ ಶೂನ್ಯತೆ ಸೃಷ್ಟಿಯಾಗಿತ್ತು. ಮೊಜ್ತಬಾ ಖಮೇನಿ ಅವರು ಪರಮಾಧಿಕಾರಿಯಾಗಿದ್ದರೂ, ಫೆಬ್ರವರಿ 28 ರಿಂದ ಯಾರೂ ಅವರನ್ನು ನೋಡಿಲ್ಲ. ಫೆಬ್ರವರಿ 28 ರಂದೇ ಮೊಜ್ತಬಾ ಅವರೂ ಕೂಡ ಹತರಾಗಿರಬಹುದು ಎಂಬ ವ್ಯಾಪಕ ಊಹಾಪೋಹಗಳು ಹರಿದಾಡುತ್ತಿವೆ. Amazon Brand - Myx Women's Schiffli Embroidery Ethnic Dress | Fit and Flare | Knee Length (Available in Plus Sizes)

ಪೆಜೆಶ್ಕಿಯಾನ್ ಇರಾನ್ ಅಧ್ಯಕ್ಷರಾಗಿದ್ದರೂ, ನಿನ್ನೆ ಅಮೆರಿಕದ ನಾಗರಿಕರಿಗೆ ಬರೆದ ಪತ್ರವನ್ನು ಹೊರತುಪಡಿಸಿ ಅವರಿಂದ ಹೆಚ್ಚಿನ ಚಟುವಟಿಕೆಗಳು ಕಂಡುಬಂದಿಲ್ಲ. ಇರಾನ್ ತಾತ್ಕಾಲಿಕವಾಗಿ ತನ್ನ ನಾಯಕತ್ವವನ್ನು ಕಳೆದುಕೊಂಡಂತೆ ಕಂಡರೂ, ಈಗ ಅಹಮದ್ ವಾಹಿದಿ ಅವರೇ ಸರ್ವಸ್ವವಾಗಿದ್ದಾರೆ. ಕಳೆದ ಮೂರು ದಿನಗಳ ಎಲ್ಲಾ ಆಕ್ರಮಣಕಾರಿ ಹೇಳಿಕೆಗಳು ಮತ್ತು ನಿರ್ಧಾರಗಳನ್ನು ವಾಹಿದಿ ಅವರೇ ನೀಡಿದ್ದಾರೆ.

ವಾಹಿದಿ ಅವರು ಪ್ರಸ್ತುತ ಅಧಿಕೃತವಾಗಿ ಇರಾನ್ 'ಪರಿವರ್ತನೆ ಮತ್ತು ಭದ್ರತಾ ಮಂಡಳಿ' ಮುಖ್ಯಸ್ಥರಾಗಿದ್ದಾರೆ. ಇವರು ಇರಾನ್ ಮಾಜಿ ಗೃಹ ಸಚಿವರಾಗಿದ್ದವರು ಮತ್ತು ಐಆರ್ಜಿಸಿ (IRGC) ಕಮಾಂಡರ್ ಸ್ಥಾನವನ್ನೂ ವಹಿಸಿದ್ದರು. ಮೊಜ್ತಬಾ ಖಮೇನಿ ಅವರು ಸುಪ್ರೀಂ ಲೀಡರ್ ಎಂಬ ಹೆಸರನ್ನು ಹೊಂದಿದ್ದರೂ, ವಾಹಿದಿ ಅವರು ಇರಾನ್ ಆಂತರಿಕ ಮತ್ತು ಪ್ರಾದೇಶಿಕ ರಕ್ಷಣೆಯಕಾರ್ಯಾಚರಣಾ ಉಸ್ತುವಾರಿಯಾಗಿ  ಕೆಲಸ ಮಾಡುತ್ತಿದ್ದಾರೆ.

ದೇಶದೊಳಗಿನ ಭಿನ್ನಮತವನ್ನು ತಡೆಯುವ ಮತ್ತು ಅಮೆರಿಕ ಹಾಗೂ ಗಲ್ಫ್ ರಾಷ್ಟ್ರಗಳ ಹಿತಾಸಕ್ತಿಗಳ ಮೇಲೆ 'ಪ್ರತಿಕಾರ' ದಾಳಿಗಳನ್ನು ಸಂಘಟಿಸುವ ಜವಾಬ್ದಾರಿಯನ್ನು ಇವರಿಗೆ ವಹಿಸಲಾಗಿದೆ.

ಕುದ್ಸ್ ಫೋರ್ಸ್ ಮಾಜಿ ಕಮಾಂಡರ್ ಆಗಿ ಅವರಿಗೆ ಹೆಜ್ಬೊಲ್ಲಾ ಮತ್ತು ಹೌತಿಗಳಂತಹ 'ಪ್ರತಿರೋಧದ ಅಕ್ಷ' ಗುಂಪುಗಳೊಂದಿಗೆ ಆಳವಾದ ಸಂಬಂಧವಿದೆ. ಅವರು ಇರಾಕ್ ಮತ್ತು ಸಿರಿಯಾದ ಮಿಲಿಟರಿ ಗುಂಪುಗಳೊಂದಿಗೂ ಸಂಪರ್ಕದಲ್ಲಿದ್ದಾರೆ. ಮಾಜಿ ಗೃಹ ಸಚಿವರಾಗಿ ಅವರು ಪ್ರಾದೇಶಿಕ ಗವರ್ನರ್ಗಳು ಮತ್ತು ಪೊಲೀಸ್ ಪಡೆಗಳನ್ನು ನಿಯಂತ್ರಿಸುತ್ತಿದ್ದರು. "ಬಂಗಾಳದಲ್ಲಿ ಜಂಗಲ್ ರಾಜ್: ನ್ಯಾಯಾಂಗ ಅಧಿಕಾರಿಗಳನ್ನೇ ಒತ್ತೆಯಾಳಾಗಿರಿಸಿದ ದುಷ್ಕರ್ಮಿಗಳು - ಅರೆಸೇನಾ ಪಡೆ ನಿಯೋಜನೆಗೆ ಸುಪ್ರೀಂ ಕೋರ್ಟ್ ಸೂಚನೆ."

ಕಾರಣದಿಂದಾಗಿ, ಕರಾಜ್ ಸೇತುವೆಯ ಮೇಲಿನ ದಾಳಿ ಮತ್ತು ಸುಪ್ರೀಂ ಲೀಡರ್ ಅಲಿ ಖಮೇನಿ ಅವರ ಮರಣದ ನಂತರ ದೇಶದಲ್ಲಿ ಸುವ್ಯವಸ್ಥೆಯನ್ನು ಕಾಪಾಡುವ ಸಾಮರ್ಥ್ಯವಿರುವ ಏಕೈಕ ವ್ಯಕ್ತಿ ಅವರಾಗಿದ್ದಾರೆ.

ಅತಿ ಮುಖ್ಯವಾಗಿ, ವಾಹಿದಿ ಅವರು ವ್ಯವಹಾರಕ್ಕಿಂತ ಹೆಚ್ಚಾಗಿ 'ಬಲಿದಾನ'ವನ್ನು ನಂಬುವ ಕಟ್ಟರ್ ಇರಾನಿ ನಾಯಕ. ಗಲ್ಫ್ ಏಳು ಪ್ರಮುಖ ಸೇತುವೆಗಳನ್ನು ಸ್ಫೋಟಿಸುವ ಅಧಿಕೃತ ಹೇಳಿಕೆಯೂ ವಾಹಿದಿ ಅವರಿಂದಲೇ ಬಂದಿದೆ. ಪಾಕಿಸ್ತಾನಕ್ಕೆ ರಾಜನಾಥ್‌ ಸಿಂಗ್‌ ಕಠಿಣ ಎಚ್ಚರಿಕೆ: ಯಾವುದೇ ದುಸ್ಸಾಹಸಕ್ಕೆ ೨೨ ನಿಮಿಷದಲ್ಲಿ ತಕ್ಕ ಶಾಸ್ತಿ!

 

ಬೆಳವಣಿಗೆಗಳ ಕುರಿತು ಅಮೆರಿಕ ಮತ್ತು ಇಸ್ರೇಲ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.