Skip to main content
ವಿಡಿಯೋ
1/2
politics

ಅಮೆರಿಕಾ ದಾಳಿಗೆ ಇರಾನ್ ಕೆಂಡಾಮಂಡಲ..!

By Sushmitha R
ಅಮೆರಿಕಾ ದಾಳಿಗೆ ಇರಾನ್ ಕೆಂಡಾಮಂಡಲ..!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದ್ದಾರೆ. ಇರಾನ್‌ನ ಅತಿದೊಡ್ಡ ಸೇತುವೆಯನ್ನು ವಿಮಾನದಾಳಿಯಲ್ಲಿ ನಾಶಪಡಿಸಿದ್ದಾರೆ. ಸೇತುವೆಯ ಪ್ರಮುಖ ಭಾಗಗಳು ಕುಸಿದು ಬೀಳುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಟ್ರಂಪ್ ಅವರು ಸ್ವತಃ ಈ ಹೊಗೆ ಮತ್ತು ಕುಸಿತದ ದೃಶ್ಯಗಳನ್ನು ಪೋಸ್ಟ್ ಮಾಡಿ, ಇರಾನ್‌ನ ಅತಿದೊಡ್ಡ ಸೇತುವೆ ಉರುಳಿದೆ. ಅದನ್ನು ಮತ್ತೆಂದೂ ಬಳಸಲಾಗದು. ಮುಂದೆ ಇನ್ನೂ ಹೆಚ್ಚಿನ ಹಾನಿ ಆಗಲಿದೆ. ಸೇತುವೆಗಳು, ವಿದ್ಯುತ್ ಸ್ಥಾವರಗಳು ಮುಂದಿನ ಗುರಿ.

ಯುದ್ಧ ಕೊನೆಗೊಳಿಸಲು ಇರಾನ್ ಒಪ್ಪಂದಕ್ಕೆ ಬರದಿದ್ದರೆ ಇನ್ನಷ್ಟು ವಿನಾಶ ಸಂಭವಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಮ್ಮ ಸೇನೆ ಇನ್ನೂ ಇರಾನ್‌ನಲ್ಲಿ ನಾಶಪಡಿಸಬೇಕಾದ್ದನ್ನು ಆರಂಭಿಸಿಯೂ ಇಲ್ಲ ಎಂದು ಅವರು ಹೇಳಿದ್ದಾರೆ. ಇರಾನ್ ಪ್ರತೀಕಾರವಾಗಿ ಕುವೈತ್‌ನ ಮಿನಾ ಅಲ್-ಅಹ್ಮದಿ ತೈಲ ಸಂಸ್ಕರಣಾಗಾರದ ಮೇಲೆ ಡ್ರೋನ್ ದಾಳಿ ನಡೆಸಿದೆ.Handmade Silk Thread Metal Bangles Set Zircon Stones Bridal Chuda/Wedding Chuda for Women & Girls (Set of 28)

ಬೆಂಕಿ ಉಂಟಾಗಿದ್ದು, ಅಗ್ನಿಶಾಮಕ ದಳ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಸಾವು-ನೋವು ವರದಿಯಾಗಿಲ್ಲ. ಕುವೈತ್ ತೈಲ ಘಟಕಗಳ ಮೇಲೆ ದಾಳಿ ನಡೆಸುವುದರೊಂದಿಗೆ ಇರಾನ್ ಪಶ್ಚಿಮ ಏಷ್ಯಾ ಮತ್ತು ಕೊಲ್ಲಿ ದೇಶಗಳ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ. ಇರಾನ್ ಮುಂದುವರೆದು 8 ಪ್ರಮುಖ ಸೇತುವೆಗಳನ್ನು ಗುರಿಯಾಗಿಸುವುದಾಗಿ ಬೆದರಿಕೆ ಹಾಕಿದೆ.

ಅವುಗಳು ಕುವೈತ್‌ನ ಶೇಖ್ ಜಾಬರ್ ಅಲ್-ಅಹ್ಮದ್ ಸಮುದ್ರ ಸೇತುವೆ, ಯುಎಇಯ ಶೇಖ್ ಜಾಯೆದ್, ಅಲ್ ಮಕ್ತಾ ಮತ್ತು ಶೇಖ್ ಖಲೀಫಾ ಸೇತುವೆಗಳು, ಸೌದಿ-ಬಹರೇನ್ ಕಿಂಗ್ ಫಹದ್ ಕಾಸ್‌ವೇ, ಜೋರ್ಡಾನ್‌ನ ಕಿಂಗ್ ಹುಸೇನ್, ಡಾಮಿಯಾ ಮತ್ತು ಅಬ್ರೌನ್ ಸೇತುವೆಗಳು.ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಅಬ್ಬರ: ಬಿಜೆಪಿಯ 'ಸಾಲ'ದ ಆರೋಪಕ್ಕೆ ಅಂಕಿ-ಅಂಶಗಳ ಸಮೇತ ಸಿಎಂ ಖಡಕ್ ತಿರುಗೇಟು!

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಫ್ಟಿ ಇದು ಗೊಂದಲದಲ್ಲಿರುವ ಶತ್ರುವಿನ ಸೋಲು ಮತ್ತು ನೈತಿಕ ಕುಸಿತವನ್ನು ತೋರಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.ಇರಾನ್ ಮಾಧ್ಯಮಗಳು ಅಮೆರಿಕದ ಎರಡು ಎಫ್-35 ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು 24 ಗಂಟೆಗಳಲ್ಲಿ ಹೊಡೆದುರುಳಿಸಿರುವುದಾಗಿ ವರದಿ ಮಾಡಿವೆ.

ಒಬ್ಬ ಪೈಲಟ್ ಅನ್ನು ರಕ್ಷಿಸಲಾಗಿದ್ದು, ಇನ್ನೊಬ್ಬರ ಶೋಧ ಮುಂದುವರಿದಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಮೆರಿಕದ ಸೆಂಟ್ರಲ್ ಕಮಾಂಡ್ ಇರಾನ್‌ನ ಈ ಹೇಳಿಕೆಗಳನ್ನು ಸುಳ್ಳು ಎಂದು ಅಲ್ಲಗಳೆದಿದೆ.ಸಾರಾಯಿ ಎಂಬ ಮಹಾಮಾರಿ, ಬಿಹಾರ ಹೆಸರಿನ ಭೀಮಾರಿ: ಮದ್ಯಪಾನ ನಿಷೇಧಿತ ರಾಜ್ಯದಲ್ಲಿ ಮತ್ತೆ ಹರಿದ ಕಳ್ಳಭಟ್ಟಿ - ಐವರು ಬಲಿ, ನಿತೀಶ್ ಸರ್ಕಾರದ ವಿರುದ್ಧ ವಿಪಕ್ಷಗಳ ಕೆಂಗಣ್ಣು!