Skip to main content
ವಿಡಿಯೋ
politics

ಅತಂತ್ರ ಸ್ಥಿತಿಯಲ್ಲಿ ಇರಾನ್-ಅಮೆರಿಕ ಕದನ ವಿರಾಮ: ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿ!

By prasanna jodidar
ಅತಂತ್ರ ಸ್ಥಿತಿಯಲ್ಲಿ ಇರಾನ್-ಅಮೆರಿಕ ಕದನ ವಿರಾಮ: ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿ!

ತೈಲ ಮತ್ತು ಯುರೇನಿಯಂ ರಾಜಕೀಯ: ಕದನ ವಿರಾಮದ ನಡುವೆಯೂ ರಕ್ತಪಾತ!

ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮವು ಏಪ್ರಿಲ್ 8 ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಆದರೆ, ಇಸ್ರೇಲ್ ನಿರಾಕರಣೆಯು ಒಪ್ಪಂದವನ್ನು ಸಂಕೀರ್ಣಗೊಳಿಸಿದೆ. ಅಮೆರಿಕವು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೂ ಸಹ, ಇಸ್ರೇಲ್ ಯಾವುದೇ ರೀತಿಯ ಕದನ ವಿರಾಮಕ್ಕೆ ಒಪ್ಪುತ್ತಿಲ್ಲ. ಕದನ ವಿರಾಮವು ಲೆಬನಾನ್ಗೆ ಅನ್ವಯಿಸುವುದಿಲ್ಲ ಎಂದು ಇಸ್ರೇಲ್ ಅಧಿಕೃತವಾಗಿ ಘೋಷಿಸಿದೆ ಮತ್ತು ಲೆಬನಾನ್ ಹಿಜ್ಬುಲ್ಲಾ ಸಂಘಟನೆಯ ಮೇಲೆ ತನ್ನ ದಾಳಿಯನ್ನು ಮುಂದುವರಿಸಿದೆ. Skechers Women Summits Sneakers

ಬುಧವಾರ ಮತ್ತು ಗುರುವಾರ, ಇಸ್ರೇಲ್ ಬೈರೂತ್ ಮತ್ತು ದಕ್ಷಿಣ ಲೆಬನಾನ್ನಲ್ಲಿ ಹಿಜ್ಬುಲ್ಲಾ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭೀಕರ ದಾಳಿ ನಡೆಸಿತು. ಇಸ್ರೇಲ್ ತೀವ್ರ ದಾಳಿಯಿಂದ ಕಳೆದ 24 ಗಂಟೆಗಳಲ್ಲಿ ಹಿಜ್ಬುಲ್ಲಾದ 250 ಜನರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಹಿಜ್ಬುಲ್ಲಾ ಉತ್ತರ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದು, ಇಸ್ರೇಲ್ ಪಡೆಗಳು (IDF) ಕದನ ವಿರಾಮವನ್ನು ಉಲ್ಲಂಘಿಸಿವೆ ಎಂದು ಆರೋಪಿಸಿದೆ.

ಇಸ್ರೇಲ್ನಲ್ಲಿ ಬೆಂಜಮಿನ್ ನೆತನ್ಯಾಹು ಅವರು ತೀವ್ರ ಆಂತರಿಕ ಒತ್ತಡವನ್ನು ಎದುರಿಸುತ್ತಿದ್ದಾರೆ. ಕದನ ವಿರಾಮವು ಇಸ್ರೇಲ್ಗೆ ಮಾರಕ ಎಂದು ಅಲ್ಲಿನ ಜನರು ಭಾವಿಸಿದ್ದಾರೆ. ವಿರೋಧ ಪಕ್ಷದ ನಾಯಕ ಯೈರ್ ಲ್ಯಾಪಿಡ್, ಇಸ್ರೇಲ್ ಕದನ ವಿರಾಮದಿಂದ ಹಿಂದೆ ಸರಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆನ್ನಲ್ಲೇ ವಿಡಿಯೋ ಬಿಡುಗಡೆ ಮಾಡಿರುವ ನೆತನ್ಯಾಹು, ಇಸ್ರೇಲ್ ಯಾವುದೇ ಕ್ಷಣದಲ್ಲಿ ಯುದ್ಧಕ್ಕೆ ಮರಳಲು ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಿಜ್ಬುಲ್ಲಾವನ್ನು ನಿಶ್ಯಸ್ತ್ರಗೊಳಿಸುವುದು ಮತ್ತು ಇರಾನ್ ಪರಮಾಣು ಸಾಮರ್ಥ್ಯವನ್ನು ತಡೆಯುವ ಮಿಲಿಟರಿ ಗುರಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅವರು ಹೇಳಿದ್ದಾರೆ. ಒಡಿಶಾದಲ್ಲಿ ಕೈಗಾರಿಕಾ ಕ್ರಾಂತಿ: ₹40,811 ಕೋಟಿ ಹೂಡಿಕೆಯೊಂದಿಗೆ ಹೊಸ ಯುಗದ ಆರಂಭ!

ಇತ್ತ ಇರಾನ್ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಕ್ತಗೊಳಿಸಿದ್ದರೂ, ಇಸ್ರೇಲ್ ಲೆಬನಾನ್ ಮೇಲೆ ದಾಳಿ ಮುಂದುವರಿಸಿದರೆ ಅದನ್ನು ಮತ್ತೆ ಮುಚ್ಚುವುದಾಗಿ ಎಚ್ಚರಿಸಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು, ಲೆಬನಾನ್ ಒಪ್ಪಂದದ ಭಾಗವಾಗಲಿದೆ ಎಂದು ಅಮೆರಿಕ ಎಂದಿಗೂ ಭರವಸೆ ನೀಡಿಲ್ಲ, ಇರಾನ್ ಒಪ್ಪಂದದ ಷರತ್ತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಹೇಳಿದ್ದಾರೆ. ಇನ್ಸುಲಿನ್ ಮಾರುಕಟ್ಟೆಯಲ್ಲಿ ಜಾಗತಿಕ ನಾಯಕತ್ವದತ್ತ ಬಯೋಕಾನ್ ಹೆಜ್ಜೆ

ಯುರೇನಿಯಂ ಮತ್ತು ತೈಲ ಸಂಪನ್ಮೂಲಗಳ ಮೇಲಿನ ಅಮೆರಿಕದ ಹಪಾಹಪಿ ಹಾಗೂ ಇರಾನ್ ಭಯವೇ ಕದನ ವಿರಾಮದ ಹಿಂದಿನ ಅಸಲಿ ಕಾರಣ ಎನ್ನಲಾಗುತ್ತಿದೆ.