Skip to main content
ವಿಡಿಯೋ
politics

ಪ್ರಜಾಪ್ರಭುತ್ವದ ಸುಧಾರಣೆ ಮತ್ತು 'ಬ್ಯಾಕ್‌ಡೋರ್ ಎನ್‌ಆರ್‌ಸಿ' ಆರೋಪ

By prasanna jodidar
ಪ್ರಜಾಪ್ರಭುತ್ವದ ಸುಧಾರಣೆ ಮತ್ತು 'ಬ್ಯಾಕ್‌ಡೋರ್ ಎನ್‌ಆರ್‌ಸಿ' ಆರೋಪ

12 ರಾಜ್ಯಗಳಲ್ಲಿ 5.58 ಕೋಟಿ ನಕಲಿ ಮತದಾರರ ಹೆಸರು ಡಿಲೀಟ್ - ಉತ್ತರ ಪ್ರದೇಶದಲ್ಲಿ ಶೇ. 13 ರಷ್ಟು ಮತದಾರರ ಇಳಿಕೆ.

ಭಾರತೀಯ ಚುನಾವಣಾ ಆಯೋಗವು,12 ರಾಜ್ಯಗಳಲ್ಲಿ ತನ್ನ ವಿಶೇಷ ತೀವ್ರ ಪರಿಷ್ಕರಣೆಯ ಎರಡನೇ ಹಂತವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಿದೆ. ಶುಕ್ರವಾರ ಉತ್ತರ ಪ್ರದೇಶದ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸುವ ಮೂಲಕ, 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಭೂತಪೂರ್ವವಾದ ಸಂಪೂರ್ಣ ಹೊಸ ಮತದಾರರ ಪಟ್ಟಿಗಳ ತಯಾರಿಕೆ ಪೂರ್ಣಗೊಂಡಿದೆ. Amazon Brand - Myx Women's Schiffli Embroidery Ethnic Dress | Fit and Flare | Knee Length (Available in Plus Sizes)

12 ರಾಜ್ಯಗಳಾದ್ಯಂತ ಬರೋಬ್ಬರಿ 5.58 ಕೋಟಿ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಭಾರತದ ಪ್ರಜಾಪ್ರಭುತ್ವದ ಅಡಿಪಾಯದ ನಿಖರತೆಯ ಬಗ್ಗೆ ಭಾರಿ ರಾಜಕೀಯ ಮತ್ತು ಕಾನೂನು ಚರ್ಚೆಯನ್ನು ಹುಟ್ಟುಹಾಕಿದೆ.

ಉತ್ತರ ಪ್ರದೇಶದಲ್ಲಿ ಮತದಾರರ ಸಂಖ್ಯೆ ಈ ಹಿಂದಿನ 15.44 ಕೋಟಿಯಿಂದ ಈಗ 13.39 ಕೋಟಿಗೆ ಪರಿಷ್ಕರಿಸಲ್ಪಟ್ಟಿದೆ, ಅಂದರೆ ಶೇ. 13.23 ರಷ್ಟು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಪಶ್ಚಿಮ ಬಂಗಾಳದಲ್ಲಿ 7.66 ಕೋಟಿ ಇದ್ದ ಮತದಾರರ ಸಂಖ್ಯೆ ಈಗ 6.77 ಕೋಟಿಗೆ ಇಳಿಕೆಯಾಗಿದ್ದು, ಶೇ. 11.63 ರಷ್ಟು ಕಡಿತವಾಗಿದೆ. ಗುಜರಾತ್ ಮತ್ತು ಅಂಡಮಾನ್‌ನಲ್ಲಿ ಕ್ರಮವಾಗಿ ಶೇ. 13.39 ಮತ್ತು ಶೇ. 16.86 ರಷ್ಟು ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗಿದ್ದು, ಒಟ್ಟಾರೆಯಾಗಿ 12 ರಾಜ್ಯಗಳಲ್ಲಿ ಶೇ. 10.55 ರಷ್ಟು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.

ದೀರ್ಘ ಕಾಲದ ನಂತರ ಎಲ್ಲಾ ಮತದಾರರು ಹೊಸ Enumeration Form ಸಲ್ಲಿಸುವುದು ಕಡ್ಡಾಯವಾಗಿತ್ತು. ಆಯೋಗ ನೀಡಿದ ನೋಟಿಸ್‌ಗಳಿಗೆ ಸ್ಪಂದಿಸದ ಕಾರಣ ಸ್ವಯಂಚಾಲಿತವಾಗಿ ಹೆಸರುಗಳು ಡಿಲೀಟ್ ಆಗಿವೆ. ಸ್ಥಳಾಂತರಗೊಂಡವರು ಅಥವಾ ಅಸ್ತಿತ್ವದಲ್ಲಿಲ್ಲದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ. ನಕಲಿ ಮತ್ತು ಎರಡು ಬಾರಿ ಇದ್ದ ದಾಖಲೆಗಳನ್ನು ಸರಿಪಡಿಸಲಾಗಿದ್ದು, ಇದನ್ನು ವಿರೋಧ ಪಕ್ಷಗಳು 'ಬ್ಯಾಕ್‌ಡೋರ್ ಎನ್‌ಆರ್‌ಸಿ' ಎಂದು ಟೀಕಿಸಿವೆ.

ಟಿಎಂಸಿ (TMC) ಮತ್ತು ಕಾಂಗ್ರೆಸ್ ಪಕ್ಷಗಳು ಕನಿಷ್ಠ 44 ಕ್ಷೇತ್ರಗಳಲ್ಲಿ 2021ರ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿವೆ. ಆದರೆ, ಪಶ್ಚಿಮ ಬಂಗಾಳದ 60 ಲಕ್ಷ 'ವಿವಾದಿತ' ಮತದಾರರ ಪರಿಶೀಲನೆಗೆ ಸುಪ್ರೀಂ ಕೋರ್ಟ್ 700 ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಿತ್ತು. ಏಪ್ರಿಲ್ 9ರ ಅಂಕಿಅಂಶದ ಪ್ರಕಾರ, ಈ ಪೈಕಿ 27 ಲಕ್ಷಕ್ಕೂ ಹೆಚ್ಚು ಮಂದಿ ಅನರ್ಹರೆಂದು ಘೋಷಿಸಲ್ಪಟ್ಟಿದ್ದಾರೆ. ಇದು ಸತ್ಯ ಏನೆಂಬುದನ್ನು ತನ್ನಷ್ಟಕ್ಕೆ ತಾನೇ ವಿವರಿಸುತ್ತದೆ! ಹಳ್ಳ ಹಿಡಿದ ಶಾಂತಿ ಪ್ರಕ್ರಿಯೆ: ಲೆಬನಾನ್‌ನಲ್ಲಿ ಕದನ ವಿರಾಮ ಮತ್ತು ಹಣ ಬಿಡುಗಡೆಗೆ ಇರಾನ್ ಪಟ್ಟು; ವಾಷಿಂಗ್ಟನ್‌ನತ್ತ ಮುಖ ಮಾಡಿದ ಇಸ್ರೇಲ್

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರು ಚುನಾವಣಾ ಆಯೋಗವು ಸಾಂಸ್ಥಿಕ ಪಕ್ಷಪಾತ ಮಾಡುತ್ತಿದೆ ಮತ್ತು ವಿರೋಧ ಪಕ್ಷದ ಬೆಂಬಲಿಗರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಖೇಡಾನಿಗೆ ಬಂದ ಕೇಡುಗಾಲ, ಮಾಡಿದ್ದುಣ್ಣೋ ಮಹಾರಾಯ ಎಂಬ ಪರಿಸ್ಥಿತಿ

ರಾಜಕೀಯ ಪಕ್ಷಗಳು ಯಾವಾಗಲೂ ತಮ್ಮ ಅನುಕೂಲಕ್ಕೆ ತಕ್ಕಂತೆ ಗದ್ದಲ ಎಬ್ಬಿಸುತ್ತವೆ; ಆದರೆ ಮತದಾರರ ಪಟ್ಟಿಯ ಈ ಪರಿಷ್ಕರಣೆಯು ನಮಗೆ ಹೊಸ ಭರವಸೆ ಮತ್ತು ಬಲಿಷ್ಠ ಪ್ರಜಾಪ್ರಭುತ್ವವನ್ನು ನಿರ್ಮಿಸುವ ವಿಶ್ವಾಸವನ್ನು ನೀಡಿದೆ.