Skip to main content
ವಿಡಿಯೋ
crime

ಐಟಿ ವಲಯದಲ್ಲಿ ನಡುಕ ಹುಟ್ಟಿಸಿದ ಘಟನೆ: ಹಿಂದೂ ಯುವತಿಯರ ಮತಾಂತರ ಜಾಲ ಪತ್ತೆ, ಎಸ್‌ಐಟಿ (SIT) ತನಿಖೆ ಚುರುಕು.

By prasanna jodidar
ಐಟಿ ವಲಯದಲ್ಲಿ ನಡುಕ ಹುಟ್ಟಿಸಿದ ಘಟನೆ: ಹಿಂದೂ ಯುವತಿಯರ ಮತಾಂತರ ಜಾಲ ಪತ್ತೆ, ಎಸ್‌ಐಟಿ (SIT) ತನಿಖೆ ಚುರುಕು.

ನಾಸಿಕ್ ಟಿ.ಸಿ.ಎಸ್‌ನಲ್ಲಿ 'ಕಾರ್ಪೊರೇಟ್ ಜಿಹಾದ್' ಆತಂಕ: ಮತಾಂತರ ಮತ್ತು ಲೈಂಗಿಕ ಕಿರುಕುಳದ ಆರೋಪದಡಿ ಏಳು ಮಂದಿ ಬಂಧನ!

ಇದು ಲವ್ ಜಿಹಾದ್ ಅಲ್ಲ, ಲ್ಯಾಂಡ್ ಜಿಹಾದ್ ಅಲ್ಲ, ಆಹಾರದ ಮೇಲೆ ಉಗುಳುವ ಜಿಹಾದ್ ಕೂಡ ಅಲ್ಲ; ಇದು ಈಗಿನ ಹೊಸ ರೂಪ 'ಕಾರ್ಪೊರೇಟ್ ಜಿಹಾದ್'. ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಂಪನಿಯಲ್ಲಿ ಧಾರ್ಮಿಕ ಮತಾಂತರ ಮತ್ತು ಲೈಂಗಿಕ ಕಿರುಕುಳದ ಆರೋಪಗಳಿಗೆ ಸಂಬಂಧಿಸಿದಂತೆ ಏಳು ವ್ಯಕ್ತಿಗಳನ್ನು ಬಂಧಿಸಿರುವುದು ಒಂದು ಗಂಭೀರ ಘಟನೆಯಾಗಿದೆ. Amazon Brand - Myx Women's Schiffli Embroidery Ethnic Dress | Fit and Flare | Knee Length (Available in Plus Sizes)

ಬಂಧಿತ ಏಳು ವ್ಯಕ್ತಿಗಳಲ್ಲಿ ಆರು ಪುರುಷರು ಮತ್ತು ಒಬ್ಬ ಮಹಿಳೆ ಸೇರಿದ್ದಾರೆ. ಆಸಿಫ್ ಅನ್ಸಾರಿ, ಶಫಿ ಶೇಖ್, ಶಾಹ್ರುಖ್ ಖುರೇಷಿ, ರಜಾ ಮೆಮನ್, ತೌಸಿಫ್ ಅತ್ತರ್ ಮತ್ತು ದಾನಿಶ್ ಶೇಖ್ ಬಂಧಿತ ಪುರುಷರು. ಬಂಧಿತ ಮಹಿಳೆ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (HR) ಆಗಿದ್ದು, ಈಕೆ ಸಂತ್ರಸ್ತೆಯರ ಪುನರಾವರ್ತಿತ ದೂರುಗಳನ್ನು ನಿರ್ಲಕ್ಷಿಸುವ ಮೂಲಕ ಕಿರುಕುಳಕ್ಕೆ ಬೆಂಬಲ ನೀಡಿದ ಆರೋಪ ಎದುರಿಸುತ್ತಿದ್ದಾಳೆ. ಮಹಿಳೆ ಹಿಂದೂ ಹುಡುಗಿಯರನ್ನು ಆರು ಮಂದಿ ಪುರುಷರ ಬಲೆಗೆ ಬೀಳಿಸುತ್ತಿದ್ದಳು ಎಂಬ ಗಂಭೀರ ಆರೋಪವಿದೆ. ಆರು ಮಂದಿ ಪುರುಷರು ಹಿಂದೂ ಹುಡುಗಿಯರಿಗೆ ಚಿತ್ರಹಿಂಸೆ ನೀಡುವುದು, ಬಲವಂತವಾಗಿ ಗೋಮಾಂಸ ತಿನ್ನಿಸುವುದು ಮತ್ತು ನಮಾಜ್ ಮಾಡುವಂತೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಸಂತ್ರಸ್ತೆಯರಿಗೆ ಆರ್ಥಿಕ ಆಮಿಷ ಅಥವಾ ಉದ್ಯೋಗದ ಭರವಸೆಯನ್ನು ನೀಡಲಾಗುತ್ತಿತ್ತು. ಖಾಸಗಿ ಫೋಟೋಗಳು ಮತ್ತು ವೀಡಿಯೊಗಳನ್ನು ಬಳಸಿ ಬ್ಲ್ಯಾಕ್ಮೇಲ್ ಮಾಡುವ ಮೂಲಕ ದೊಡ್ಡ ಮಟ್ಟದ "ದಂಧೆ" ನಡೆಸಲಾಗುತ್ತಿತ್ತು ಎಂಬ ಸಂಶಯವಿದೆ.

ಏಪ್ರಿಲ್ 12, 2026 ರಂದು ಎಂಟು ಮಹಿಳಾ ಉದ್ಯೋಗಿಗಳು ತಮಗೆ ದೀರ್ಘಕಾಲದವರೆಗೆ ಬಲವಂತದ ಧಾರ್ಮಿಕ ಮತಾಂತರ, ಮಾನಸಿಕ ಕಿರುಕುಳ ಮತ್ತು ಲೈಂಗಿಕ ಶೋಷಣೆ ನೀಡಲಾಗುತ್ತಿದೆ ಎಂದು ಅಧಿಕೃತ ದೂರು ದಾಖಲಿಸಿದ್ದಾರೆ.

ಬಾಸ್ಟರ್‌ನಲ್ಲಿ 'ರೂಪಿ' ಅಂತ್ಯ: ಅಮಿತ್ ಶಾ ಅವರ ನಕ್ಸಲ್ ವಿರೋಧಿ ಸಂಕಲ್ಪಕ್ಕೆ ಮತ್ತೊಂದು ಯಶಸ್ಸು.

ಸಂತ್ರಸ್ತೆಯರ ದೂರು ಮತ್ತು ಗುಪ್ತಚರ ಮಾಹಿತಿಯ ನಂತರ, ನಾಸಿಕ್ ನಗರ ಪೊಲೀಸ್ ಕಮಿಷನರ್ ಅವರು ತಕ್ಷಣದ ಕಾರ್ಯಾಚರಣೆಗೆ ಆದೇಶಿಸಿದರು. ಪ್ರಕರಣದ ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ. ಆರು ಮಂದಿ ಪುರುಷರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಮಹಿಳಾ ಆರೋಪಿಯ ಪತ್ತೆಗಾಗಿ ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಸಂಗ್ರಹದ ವೇಳೆ ಪೋಲೀಸರ ಮೇಲೆ ದಾಳಿ ನಡೆಸಿದ ಆರೋಪಿ ವೆಂಕಟೇಶ್; ತಪ್ಪಿಸಿಕೊಳ್ಳಲು ಯತ್ನಿಸಿದವನ ಮೇಲೆ ಗುಂಡಿನ ದಾಳಿ

ಟಿ.ಸಿ.ಎಸ್ ಕಂಪನಿಯು ಆಂತರಿಕ ತನಿಖೆಗೆ ಆದೇಶಿಸಿದೆಯಾದರೂ, ಪೊಲೀಸರು ಟಿ.ಸಿ.ಎಸ್ ಇತರ ಶಾಖೆಗಳಲ್ಲೂ ಇಂತಹ ಕೃತ್ಯಗಳು ನಡೆಯುತ್ತಿರುವ ಬಗ್ಗೆ ಶಂಕಿಸಿದ್ದಾರೆ. ಹಿನ್ನೆಲೆಯಲ್ಲಿ ಇತರ ಶಾಖೆಗಳ ತನಿಖೆಯೂ ನಡೆಯುತ್ತಿದೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಘಟನೆಯನ್ನು "ಅತ್ಯಂತ ಗಂಭೀರ" ಮತ್ತು ವೃತ್ತಿಪರ ಕಾರ್ಪೊರೇಟ್ ಪರಿಸರಕ್ಕೆ "ಘಾತಕ" ಎಂದು ಕರೆದಿದ್ದಾರೆ. ಇಂತಹ ಚಟುವಟಿಕೆಗಳನ್ನು ರಾಜ್ಯದಲ್ಲಿ ಸಹಿಸುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ಬಿಜೆಪಿ ನಾಯಕ ನಿತೇಶ್ ರಾಣೆ ಪ್ರಕರಣವನ್ನು "ಕಾರ್ಪೊರೇಟ್ ಜಿಹಾದ್" ಎಂದು ಬಣ್ಣಿಸಿದ್ದಾರೆ.