Skip to main content
ವಿಡಿಯೋ
cinema

ಓಡಿ ಹೋಗಿದ್ದು ಯಾಕೆ ಗೊತ್ತಾ? ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ.. ಘಟನೆಯ ಹಿಂದೆ ಕೋಟಿ ಕೋಟಿ ಸಾಲ!

By Ram Chethan
ಓಡಿ ಹೋಗಿದ್ದು ಯಾಕೆ ಗೊತ್ತಾ? ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ.. ಘಟನೆಯ ಹಿಂದೆ ಕೋಟಿ ಕೋಟಿ ಸಾಲ!

ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಇದೀಗ ಹೊರಬಂದು ತಮ್ಮ ಬದುಕಿನ ನಿಜ ಕಥೆಯನ್ನು ಹಂಚಿಕೊಂಡಿದ್ದಾರೆ. ಸಾಲದ ಒತ್ತಡ, ವ್ಯವಹಾರದಲ್ಲಿ ನಷ್ಟ ಮತ್ತು ಸಂಕಷ್ಟದ ದಿನಗಳನ್ನು ಎದುರಿಸಿ, ಇದೀಗ ಹೊಸ ಆರಂಭದತ್ತ ಹೆಜ್ಜೆ ಇಟ್ಟಿದ್ದಾರೆ. ತಮ್ಮಿಂದ ನೋವು ಅನುಭವಿಸಿದ ಎಲ್ಲರಿಗೂ ಅವರು ಮನಪೂರ್ವಕ ಕ್ಷಮೆ ಕೋರಿದ್ದಾರೆ.

ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಹಲವು ವರ್ಷಗಳ ನಂತರ ಮತ್ತೆ ಪತ್ತೆಯಾಗಿದ್ದು, ತಮ್ಮ ನಾಪತ್ತೆಯ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮಿಂದ ಅನೇಕ ಜನರಿಗೆ ತೊಂದರೆ ಉಂಟಾಗಿದೆ ಎಂದು ಒಪ್ಪಿಕೊಂಡು ಎಲ್ಲರಲ್ಲೂ ಕ್ಷಮೆ ಕೇಳಿದರು. ಇಂಜಿನಿಯರಿಂಗ್ ಮುಗಿಸಿ ಸಿನಿಮಾ ಕ್ಷೇತ್ರಕ್ಕೆ ಬಂದ ಅವರು, ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ನಂತರ ದರ್ಶನ್ ಅವರ ಮ್ಯಾನೇಜರ್ ಆಗಿದ್ದರು. ಆದರೆ ಸಿನಿಮಾ ನಿರ್ಮಾಣ, ಡಿಸ್ಟ್ರಿಬ್ಯೂಷನ್ ಮತ್ತು ಹೋಟೆಲ್ ವ್ಯವಹಾರಗಳಲ್ಲಿ ನಷ್ಟ ಅನುಭವಿಸಿ ಸಾಲದ ಬಾಧೆಗೆ ಒಳಗಾದರು.Arayna Women's Cotton Printed Floral Straight Kurta with Palazzo Pants and Dupatta

ಸಾಲ ಹೆಚ್ಚಾದ ಕಾರಣ ಅವರು ಮನಸ್ಸು ಬೇಸತ್ತು ಊರನ್ನು ಬಿಟ್ಟು ಹೋಗಲು ನಿರ್ಧರಿಸಿದರು. ಕುಂದಾಪುರದಿಂದ ಹೊರಟು ಸವದತ್ತಿ, ಕೊಲ್ಲಾಪುರ, ಸೊಲ್ಲಾಪುರ ಸೇರಿದಂತೆ ಹಲವು ನಗರಗಳಲ್ಲಿ ಸುತ್ತಾಡಿ, ಹೋಟೆಲ್ ಮತ್ತು ರೆಸಾರ್ಟ್‌ಗಳಲ್ಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸಿದರು. ಕೆಲವು ಸಮಯ ನೇಪಾಳದಲ್ಲೂ ಇದ್ದು, ತಮ್ಮ ಜೀವಂತವಾಗಿರುವ ವಿಷಯವನ್ನು ಕುಟುಂಬಕ್ಕೆ ಪತ್ರದ ಮೂಲಕ ತಿಳಿಸಿದ್ದರು. ತಂದೆ-ತಾಯಿ ಮೃತಪಟ್ಟಾಗ ಸಹ ಹಾಜರಾಗಲು ಸಾಧ್ಯವಾಗಲಿಲ್ಲ ಎಂಬ ನೋವು ಇಂದಿಗೂ ಕಾಡುತ್ತಿದೆ ಎಂದು ಅವರು ಹೇಳಿದರು.

ಮಲ್ಲಿಕಾರ್ಜುನ ಅವರು ದರ್ಶನ್ ಅವರ ಬಳಿ ಕಷ್ಟದ ಸಮಯದಲ್ಲಿ 1 ಕೋಟಿ ರೂಪಾಯಿ ಸಹಾಯ ಪಡೆದಿದ್ದನ್ನು ಒಪ್ಪಿಕೊಂಡಿದ್ದಾರೆ. ಆದರೆ ನಂತರ ಮತ್ತೆ ಹಣ ಕೇಳಲು ಧೈರ್ಯವಾಗಲಿಲ್ಲ ಎಂದು ಹೇಳಿದ್ದಾರೆ. ತಮ್ಮ ಸಾಲದ ಪ್ರಮಾಣವನ್ನು ದರ್ಶನ್ ಅವರಿಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ ಎಂದೂ ಹೇಳಿದರು. ಅವರ ಮೇಲಿನ ಗೌರವದಿಂದಲೇ ಅವರನ್ನು ಎದುರಿಸಲು ಸಾಧ್ಯವಾಗದೆ ಊರನ್ನು ಬಿಟ್ಟೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಇದನ್ನು ಓದಿ:ಅಕ್ಷಯ್–ಪ್ರಿಯದರ್ಶನ್ ಜೋಡಿ ಮತ್ತೆ ಮ್ಯಾಜಿಕ್! ‘ಭೂತ್ ಬಂಗ್ಲಾ’ ಅಡ್ವಾನ್ಸ್ ಬುಕ್ಕಿಂಗ್ ಎಷ್ಟು ಕೋಟಿ ಗೊತ್ತಾ..?

ಇತ್ತೀಚೆಗೆ ಅವರು ಮರಳಿ ಬಂದು ಸಾಲ ನೀಡಿದ ಎಲ್ಲರನ್ನೂ ಭೇಟಿ ಮಾಡಿ, “ನಾನು ಸೋತಿದ್ದೇನೆ, ಆದರೆ ಸತ್ತಿಲ್ಲ” ಎಂದು ಹೇಳಿಕೊಂಡಿದ್ದಾರೆ. ಹಲವರು ಧೈರ್ಯ ತುಂಬಿದರೆಂದು ಅವರು ತಿಳಿಸಿದ್ದಾರೆ. ಈಗ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಹೊಸ ಜೀವನ ಆರಂಭಿಸಲು ನಿರ್ಧರಿಸಿದ್ದಾಗಿ ಮಲ್ಲಿಕಾರ್ಜುನ ಹೇಳಿದ್ದಾರೆ.