ಡೊನಾಲ್ಡ್ ಟ್ರಂಪ್ ಮತ್ತೆ ತಮ್ಮ ಹಳೆಯ ಸಾರಿನ ಪ್ರತಿಪಾದನೆಗಳನ್ನು ಆರಂಭಿಸಿದ್ದಾರೆ! ಆದರೆ ಅವರು ಹೇಳಿಕೆ ನೀಡುವ ಮೊದಲು ವಾಸ್ತವವನ್ನು ಪರಿಶೀಲಿಸಬಾರದೇ? ಇಸ್ರೇಲ್ ಯುದ್ಧ ಮಾಡುತ್ತಿರುವುದು ಲೆಬನಾನ್ ದೇಶದ ವಿರುದ್ಧವಲ್ಲ, ಬದಲಾಗಿ ಭಯೋತ್ಪಾದಕ ಸಂಘಟನೆಯಾದ 'ಹಿಜ್ಬುಲ್ಲಾ' ವಿರುದ್ಧ. ಹಿಜ್ಬುಲ್ಲಾ ಒಂದು ಸರ್ಕಾರವಲ್ಲ, ಅದು ಕೇವಲ ಒಂದು ಉಗ್ರಗಾಮಿ ಗುಂಪು. ಈ ಇಸ್ರೇಲ್-ಹಿಜ್ಬುಲ್ಲಾ ಯುದ್ಧಕ್ಕೂ ಲೆಬನಾನ್ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. Amazon Brand - Myx Women's Schiffli Embroidery Ethnic Dress | Fit and Flare | Knee Length (Available in Plus Sizes)
ಆದರೂ, ಏಪ್ರಿಲ್ 16, 2026 ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಮತ್ತು ಲೆಬನಾನ್ ನಡುವೆ 10 ದಿನಗಳ ಕದನ ವಿರಾಮವನ್ನು ಘೋಷಿಸಿದ್ದಾರೆ. ಇದನ್ನು ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಯಲ್ಲಿ ಒಂದು ಪ್ರಮುಖ ರಾಜತಾಂತ್ರಿಕ ಮೈಲಿಗಲ್ಲು ಎಂದು ಅವರು ಕರೆದಿದ್ದಾರೆ. ಈ 10 ದಿನಗಳ "ಅಧಿಕೃತ ಕದನ ವಿರಾಮ" ಏಪ್ರಿಲ್ 16 ರಂದು ಸಂಜೆ 5:00 ಗಂಟೆಗೆ ಆರಂಭವಾಗಿದೆ.
ತಮ್ಮ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ಟ್ರಂಪ್, "ವಿಶ್ವದಾದ್ಯಂತ 9 ಯುದ್ಧಗಳನ್ನು ನಿಲ್ಲಿಸಿದ ಗೌರವ ನನಗಿದೆ, ಇದು ನನ್ನ 10 ನೇ ಯಶಸ್ಸು" ಎಂದು ಹೇಳಿಕೊಂಡಿದ್ದಾರೆ. ಇದಕ್ಕೂ ಮುನ್ನ ಜನವರಿ 2026 ರ ದಾವೋಸ್ ಶೃಂಗಸಭೆಯಲ್ಲಿ, 2025 ರ ಭಾರತ-ಪಾಕಿಸ್ತಾನ ಮಿಲಿಟರಿ ಬಿಕ್ಕಟ್ಟು ಸೇರಿದಂತೆ ಎಂಟು ಸಂಘರ್ಷಗಳನ್ನು ತಾವು ಬಗೆಹರಿಸಿರುವುದಾಗಿ ಅವರು ಹೇಳಿಕೊಂಡಿದ್ದರು. ಕರುನಾಡಿಗೆ ಬಿಸಿಲ ಶಾಕ್: ಉತ್ತರ ಕರ್ನಾಟಕದಲ್ಲಿ 45°C ಧಗಧಗ - ಕರಾವಳಿಯಲ್ಲಿ ಹ್ಯೂಮಿಡಿಟಿ ಕಾಟ!
ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರನ್ನು ಶ್ವೇತಭವನಕ್ಕೆ ನೇರ ಮಾತುಕತೆಗೆ ಆಹ್ವಾನಿಸಿದ್ದಾರೆ. 1983 ರ ನಂತರ ನಡೆಯುತ್ತಿರುವ ಇಂತಹ ಮೊದಲ ಹೈ-ವೋಲ್ಟೇಜ್ ಸಭೆ ಇದಾಗಿದೆ. ಅಮೆರಿಕ-ಇಟಲಿ ದೋಸ್ತಿ ಕಟ್: 'ಖಾಲಿ ಇರುವ ಮಿತ್ರನ ಸ್ಥಾನಕ್ಕೆ ನಮ್ಮ ಅರ್ಜಿ ಪರಿಗಣಿಸಿ' ಎಂದ ಇರಾನ್!
ನೆತನ್ಯಾಹು ಅವರು ಶಾಶ್ವತ ಶಾಂತಿಗಾಗಿ ಹಿಜ್ಬುಲ್ಲಾವನ್ನು ಸಂಪೂರ್ಣವಾಗಿ ವಿಸರ್ಜಿಸಬೇಕು ಎಂದು ಪ್ರತಿಪಾದಿಸಿದರೆ, ದಕ್ಷಿಣ ಲೆಬನಾನ್‌ನಿಂದ ಇಸ್ರೇಲ್ ಸೈನ್ಯ ಹಿಂದೆ ಸರಿಯದ ಹೊರತು ಒಪ್ಪಂದ ಸಾಧ್ಯವಿಲ್ಲ ಎಂದು ಹಿಜ್ಬುಲ್ಲಾ ಸೂಚಿಸಿದೆ. ಈ ಕದನ ವಿರಾಮವು ಅಮೆರಿಕ-ಇರಾನ್ ನಡುವಿನ ವ್ಯಾಪಕ ಶಾಂತಿ ಮಾತುಕತೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.