ದರ್ಶನ್ ತೂಗುದೀಪ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಹಲವು ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇದ್ದರು. 2018ರಿಂದ ಅವರು ನಾಪತ್ತೆಯಾಗಿದ್ದು, ಸಾಲ ಹಾಗೂ ವಂಚನೆ ಆರೋಪಗಳೂ ಕೇಳಿಬಂದಿದ್ದವು. ಅವರ ವಿರುದ್ಧ ಲುಕೌಟ್ ನೋಟಿಸ್ ಕೂಡ ಜಾರಿಯಾಗಿತ್ತು. ಇದೀಗ ಹಠಾತ್ತನೆ ಸುದ್ದಿಗೋಷ್ಠಿ ನಡೆಸಿದ ಮಲ್ಲಿಕಾರ್ಜುನ, ತಮ್ಮ ವೈಯಕ್ತಿಕ ಜೀವನ, ಹಣಕಾಸಿನ ಸಮಸ್ಯೆಗಳು ಹಾಗೂ ನಾಪತ್ತೆಯಾಗಿದ್ದಕ್ಕೆ ಕಾರಣಗಳ ಬಗ್ಗೆ ಮಾತನಾಡಿದ್ದಾರೆ.Arayna Women's Cotton Printed Floral Straight Kurta with Palazzo Pants and Dupatta
ಈ ವೇಳೆ ‘ಪ್ರೇಮಬರಹ’ ಸಿನಿಮಾದ ಹಳೆಯ ವಿವಾದದ ಕುರಿತು ಕೂಡ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಟ ಅರ್ಜುನ್ ಸರ್ಜಾ ನಿರ್ಮಿಸಿ ನಿರ್ದೇಶಿಸಿದ್ದ ಈ ಸಿನಿಮಾವನ್ನು ಮಲ್ಲಿಕಾರ್ಜುನ ವಿತರಣೆ ಮಾಡಿದ್ದರು. ವಿತರಣೆಗೆ ಸಂಬಂಧಿಸಿದ ಲೆಕ್ಕಪತ್ರಗಳಲ್ಲಿ ತಪ್ಪು ನಡೆದಿದೆ ಎಂದು ಅವರು ಹೇಳಿದ್ದಾರೆ. ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ಸಂಸ್ಥೆಯ ಅಕೌಂಟೆಂಟ್ ನೀಡಿದ ಲೆಕ್ಕವನ್ನು ಸರಿಯಾಗಿ ಪರಿಶೀಲಿಸದೇ ಅರ್ಜುನ್ ಸರ್ಜಾ ಅವರಿಗೆ ನೀಡಿದ್ದೇ ಸಮಸ್ಯೆಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ.
ಆದರೆ ಈ ಆರೋಪವನ್ನು ಅಕೌಂಟೆಂಟ್ ದೀಪಕ್ ತಳ್ಳಿ ಹಾಕಿದ್ದಾರೆ. ಸಂಸ್ಥೆಯ ಎಲ್ಲಾ ಕೆಲಸಗಳನ್ನು ಮಲ್ಲಿಕಾರ್ಜುನ ಅವರೇ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಅವರು ಹೇಳಿದಂತೆ ತಾನು ಲೆಕ್ಕ ಬರೆಯುತ್ತಿದ್ದೆ, ಆದರೆ ತಪ್ಪು ಲೆಕ್ಕ ತಾನೇ ಮಾಡಿದ್ದೇನೆ ಎನ್ನುವುದು ಸತ್ಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೀಪಕ್ ಹೇಳುವಂತೆ, ತಾವು 2013ರಿಂದ 2018ರವರೆಗೆ ತೂಗುದೀಪ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿದ್ದರು. ಆ ಅವಧಿಯಲ್ಲಿ ಎಲ್ಲಾ ವ್ಯವಹಾರಗಳನ್ನೂ ಮಲ್ಲಿಕಾರ್ಜುನ ಅವರೇ ನೋಡಿಕೊಳ್ಳುತ್ತಿದ್ದರು. ಸಿಬ್ಬಂದಿ ಎಲ್ಲರೂ ಅವರ ಸೂಚನೆಯಂತೆ ಕೆಲಸ ಮಾಡಬೇಕಾಗಿತ್ತು ಎಂದು ತಿಳಿಸಿದ್ದಾರೆ.ಪ್ರಕಾಶ್ ರಾಜ್ ರಾಮಾಯಣದ ಈ ವಿಷಯದ ಬಗ್ಗೆ ಮಾತನಾಡಿದ್ದಕ್ಕೆ ಬಿತ್ತು ಕೇಸ್..!ಇಲ್ಲಿದೆ ಮಾಹಿತಿ
‘ಪ್ರೇಮಬರಹ’ ಸಿನಿಮಾದ ವಿತರಣೆಯಲ್ಲಿ ಮೋಸ ನಡೆದಿದೆ ಎಂಬ ಆರೋಪದ ಮೇರೆಗೆ ಅರ್ಜುನ್ ಸರ್ಜಾ ಅವರು ಮಲ್ಲಿಕಾರ್ಜುನ ವಿರುದ್ಧ ದೂರು ನೀಡಿದ್ದರು. ಇದೇ ಪ್ರಕರಣದ ಹಿನ್ನೆಲೆಯಲ್ಲಿ ಲುಕೌಟ್ ನೋಟಿಸ್ ಕೂಡ ಹೊರಡಿಸಲಾಗಿತ್ತು. ಈಗ ಮಲ್ಲಿಕಾರ್ಜುನ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.