Skip to main content
ವಿಡಿಯೋ
politics

ಇಸ್ಲಾಮಾಬಾದ್ ಒಪ್ಪಂದದ ಪತನ: ಅಮೆರಿಕದ ಕೈಗೊಂಬೆಯಾದ ಪಾಕಿಸ್ತಾನದ ವಿರುದ್ಧ ಇರಾನ್ ಆಕ್ರೋಶ!

By prasanna jodidar
ಇಸ್ಲಾಮಾಬಾದ್ ಒಪ್ಪಂದದ ಪತನ: ಅಮೆರಿಕದ ಕೈಗೊಂಬೆಯಾದ ಪಾಕಿಸ್ತಾನದ ವಿರುದ್ಧ ಇರಾನ್ ಆಕ್ರೋಶ!

ಪಾಕಿಸ್ತಾನದ ‘ಡಬಲ್ ಗೇಮ್’ ಬಯಲು: ಇರಾನ್ ಬೆನ್ನಿಗೆ ಚೂರಿ ಹಾಕಿದರೇ ಆಸಿಮ್ ಮುನೀರ್?

ತೆಹ್ರಾನ್: ರಾಜಕೀಯ ತಜ್ಞರು ಮೊದಲೇ ಊಹಿಸಿದಂತೆ, ಪಾಕಿಸ್ತಾನವು ಮತ್ತೊಮ್ಮೆ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದ್ದು, ನಂಬಿಕೆದ್ರೋಹಿ ಮತ್ತು ಅವಕಾಶವಾದಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಪಾಕಿಸ್ತಾನವು ಅಮೆರಿಕದ ನೀತಿಗಳಿಗೆ ಬೆಂಬಲ ನೀಡುತ್ತಾ, ಇರಾನ್ ಪರವಾಗಿರುವಂತೆ ನಟಿಸುವ ಮೂಲಕ 'ಡಬಲ್ ಗೇಮ್' ಆಡುತ್ತಿದೆ ಎಂದು ಇರಾನ್ ಈಗ ಅಧಿಕೃತವಾಗಿ ಆರೋಪಿಸಿದೆ. Amazon Brand - Myx Women's Schiffli Embroidery Ethnic Dress | Fit and Flare | Knee Length (Available in Plus Sizes)

ಇಸ್ಲಾಮಾಬಾದ್ ಒಪ್ಪಂದದ ವೈಫಲ್ಯ ಮತ್ತು ಕದನ ವಿರಾಮದ ಅಂತ್ಯಕ್ಕೆ ಇರಾನ್ ಈಗ ನೇರವಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಮತ್ತು ಅಮೆರಿಕದ ಜೆ.ಡಿ. ವ್ಯಾನ್ಸ್ ಅವರನ್ನು ಗುರಿಯಾಗಿಸಿದೆ. ಏಪ್ರಿಲ್ 22, 2026 ರಂದು ಇರಾನ್ ಸರ್ಕಾರಿ ಸ್ವಾಮ್ಯದ 'ಸ್ಟೂಡೆಂಟ್ ನ್ಯೂಸ್ ನೆಟ್‌ವರ್ಕ್' (SNN), ಪಾಕಿಸ್ತಾನದ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಗಂಭೀರ ಅಪನಂಬಿಕೆಯನ್ನು ವ್ಯಕ್ತಪಡಿಸಿದೆ.

ಅಮೆರಿಕದೊಂದಿಗೆ ಮಾತುಕತೆ ನಡೆಸಲು ನಾವು 10 ಅಂಶಗಳ ಬೇಡಿಕೆಯನ್ನು ಆಸಿಮ್ ಮುನೀರ್ ಅವರಿಗೆ ನೀಡಿದ್ದೆವು, ಆದರೆ ಮುನೀರ್ ನಮ್ಮ ಬೇಡಿಕೆಗಳನ್ನು ಹೂತುಹಾಕಿ, ಬದಲಿಗೆ ಅಮೆರಿಕ ಸಿದ್ಧಪಡಿಸಿದ 15 ಹೊಸ ಬೇಡಿಕೆಗಳನ್ನು ನಮಗೆ ನೀಡಿದ್ದಾರೆ ಎಂದು ಇರಾನ್ ಪ್ರತಿಪಾದಿಸಿದೆ. ಪಾಕಿಸ್ತಾನವು ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಿದೆ ಎಂಬುದು ಇರಾನ್ ಆರೋಪ.

ಪಾಕಿಸ್ತಾನವು ಇನ್ನು ಮುಂದೆ ತಟಸ್ಥ ಮತ್ತು ಸ್ಥಿರ ಮಧ್ಯಸ್ಥಿಕೆದಾರನಾಗಿ ಉಳಿದಿಲ್ಲ ಎಂದು ಇರಾನ್ ವಿಶ್ಲೇಷಕರು ಹೇಳಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಡೊನಾಲ್ಡ್ ಟ್ರಂಪ್ ಅವರ 'ಟ್ರೂತ್ ಸೋಶಿಯಲ್' ಪೋಸ್ಟ್ ಅನ್ನು ಅವರು ಉಲ್ಲೇಖಿಸಿದ್ದಾರೆ. ಕದನ ವಿರಾಮ ವಿಸ್ತರಣೆಗೆ ವಿನಂತಿಸಿದ್ದಕ್ಕಾಗಿ ಮುನೀರ್ ಮತ್ತು ಶರೀಫ್ ಅವರಿಗೆ ಟ್ರಂಪ್ ಧನ್ಯವಾದ ಅರ್ಪಿಸಿರುವುದು, ಇಸ್ಲಾಮಾಬಾದ್ ಮಧ್ಯಸ್ಥಿಕೆದಾರನ ಬದಲು ಅಮೆರಿಕದ ಏಜೆಂಟ್‌ನಂತೆ ವರ್ತಿಸುತ್ತಿದೆ ಎಂಬುದನ್ನು ಪುಷ್ಟೀಕರಿಸುತ್ತದೆ. ರಾಹುಲ್ ಗಾಂಧಿಯವರ '16'ರ ಒಗಟಿಗೆ ಪ್ರಲ್ಹಾದ್ ಜೋಶಿ ವ್ಯಂಗ್ಯದ ತಿರುಗೇಟು: ಕಾಂಗ್ರೆಸ್ ಶೂನ್ಯವಾಗಿರುವ 16 ರಾಜ್ಯಗಳ ನೆನಪು!

ಯುದ್ಧದ ಇಂತಹ ನಿರ್ಣಾಯಕ ಸಮಯದಲ್ಲಿ ಮೌನವು ಮಾರಕವಾಗಬಹುದು. ತಮ್ಮ 10 ಅಂಶಗಳ ಯೋಜನೆಗೆ ಯಾವುದೇ ಪ್ರತಿಕ್ರಿಯೆ ಸಿಗದಿರುವುದು ಇರಾನ್‌ನ ಕೆರಳಿಸಿದೆ. ಅಮೆರಿಕ ಮತ್ತು ಇಸ್ರೇಲ್ ತಂತ್ರಗಾರಿಕೆಯ ಒತ್ತಡವನ್ನು ಹೇರಲು ಪಾಕಿಸ್ತಾನವು ಈ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಇರಾನ್ ನಂಬಿದೆ.

ಕದನ ವಿರಾಮ ಇಂದು ಕೊನೆಗೊಳ್ಳುತ್ತಿದೆ. ಪೂರ್ವ ಯೋಜನೆಯಂತೆ ಜೆ.ಡಿ. ವ್ಯಾನ್ಸ್ ಇಸ್ಲಾಮಾಬಾದ್‌ಗೆ ತಲುಪಬೇಕಿತ್ತು ಮತ್ತು ಶಾಂತಿ ಮಾತುಕತೆ ಪುನರಾರಂಭಿಸಲು ಇರಾನ್‌ನ ಮೊಹಮ್ಮದ್ ಬಾಗೇರ್ ಗಾಲಿಬಾಫ್ ಅವರನ್ನು ಭೇಟಿಯಾಗಬೇಕಿತ್ತು. ಆದರೆ ಈಗ ಇರಾನ್‌ಗೆ ಅಮೆರಿಕ ಅಥವಾ ಪಾಕಿಸ್ತಾನ ಎರಡೂ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ಬಂಗಾಳದ ಚುನಾವಣಾ ದುರಂತ: ಅಬ್ದುಲ್ಲಾ ಅವರೇ, ಕಾಶ್ಮೀರಕ್ಕೆ ಈಗಲೂ ಸ್ವಾಯತ್ತತೆ ಬೇಕೇ?

ಇದರೊಂದಿಗೆ, ಅಮೆರಿಕದ ನೌಕಾ ದಿಗ್ಬಂಧನ ಮತ್ತು ಅಧ್ಯಕ್ಷ ಟ್ರಂಪ್ ಅವರ ಪರಮಾಣು ದಾಳಿಯ ಎಚ್ಚರಿಕೆಯು ಇರಾನ್ ಅನ್ನು ಆತಂಕಕ್ಕೀಡುಮಾಡಿದೆ. ಸಾಮಾನ್ಯ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನವು ಅಮೆರಿಕದ ಸಂದೇಶವನ್ನು ಇರಾನ್‌ಗೆ ತಿಳಿಸಬೇಕಿತ್ತು, ಆದರೆ ಇಸ್ಲಾಮಾಬಾದ್‌ನ ಮೌನವು ಇರಾನ್ ಅನ್ನು ಮತ್ತಷ್ಟು ಹತಾಶೆಗೊಳಿಸಿದೆ. ಜೆ.ಡಿ. ವ್ಯಾನ್ಸ್ ಮತ್ತು ಆಸಿಮ್ ಮುನೀರ್ ಮಾತುಕತೆಯಲ್ಲಿ ವಿಫಲರಾಗಿದ್ದಾರೆ ಎಂದು ಅಮೆರಿಕ ಭಾವಿಸಿ, ಇಂದಿನಿಂದಲೇ ಮತ್ತೆ ಯುದ್ಧ ಆರಂಭಿಸಬಹುದು ಎಂಬ ಭೀತಿ ಇರಾನ್ ಅನ್ನು ಕಾಡುತ್ತಿದೆ.