ವಿಶ್ವದಾದ್ಯಂತ, ವಿಶೇಷವಾಗಿ ಅಮೆರಿಕಕ್ಕೆ ಫೆಂಟಾನಿಲ್, ಮೆತ್ ಮತ್ತು ಕೊಕೇನ್‌ನಂತಹ ಮಾದಕ ದ್ರವ್ಯಗಳನ್ನು ಸಾಗಿಸುವಲ್ಲಿ ಮೆಕ್ಸಿಕೋದ ಸಿನಾಲೋವಾ ಕಾರ್ಟೆಲ್ ಮತ್ತು ಜಲಿಸ್ಕೋ ನ್ಯೂ ಜನರೇಷನ್ ಕಾರ್ಟೆಲ್ (CJNG) ಅತ್ಯಂತ ಶಕ್ತಿಶಾಲಿ ಗುಂಪುಗಳಾಗಿವೆ. ಗಲ್ಫ್ ಕಾರ್ಟೆಲ್, ಜುವಾರೆಜ್ ಕಾರ್ಟೆಲ್ ಮತ್ತು ಈಶಾನ್ಯ ಕಾರ್ಟೆಲ್‌ಗಳು ಇತರ ಪ್ರಮುಖ ಹೆಸರುಗಳಾಗಿವೆ. Amazon Brand - Myx Women's Pure Cotton A-Line 3 piece Schiffli Suit Set (Available in Plus Sizes)
ಇತ್ತೀಚೆಗೆ 'ಜಲಿಸ್ಕೋ ನ್ಯೂ ಜನರೇಷನ್ ಕಾರ್ಟೆಲ್ಗೆ ದೊಡ್ಡ ಹೊಡೆತ ಬಿದ್ದಿದ್ದು, ಅದರ ಅತ್ಯಂತ ಶಕ್ತಿಶಾಲಿ ಕಮಾಂಡರ್‌ಗಳಲ್ಲಿ ಒಬ್ಬನಾದ ಆಡಿಯಾಸ್ ಫ್ಲೋರೆಸ್ ಸಿಲ್ವಾ (ಅಲಿಯಾಸ್ "ಎಲ್ ಜಾರ್ಡಿನೆರೊ" ಅಥವಾ "ದಿ ಗಾರ್ಡನರ್") ನನ್ನು ಮೆಕ್ಸಿಕನ್ ನೌಕಾಪಡೆಯು ಏಪ್ರಿಲ್ 27, ಸೋಮವಾರದಂದು ಯಶಸ್ವಿಯಾಗಿ ಬಂಧಿಸಿದೆ.
ನಾಯರಿಟ್ ರಾಜ್ಯದಲ್ಲಿ ನಡೆದ ಈ ಕಾರ್ಯಾಚರಣೆಯು ಒಂದು 'ಸರ್ಜಿಕಲ್ ಸ್ಟ್ರೈಕ್'ನಂತಿತ್ತು. ಸಂಘಟಿತ ಅಪರಾಧದ ವಿರುದ್ಧ ಮೆಕ್ಸಿಕೋ ನಡೆಸುತ್ತಿರುವ ಹೋರಾಟದಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ. ಆರು ಹೆಲಿಕಾಪ್ಟರ್‌ಗಳು ಮತ್ತು ಹಲವಾರು ಸ್ಕೌಟಿಂಗ್ ವಿಮಾನಗಳ ಬೆಂಬಲದೊಂದಿಗೆ ಸುಮಾರು 500 ಕ್ಕೂ ಹೆಚ್ಚು ಸೈನಿಕರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸೈನ್ಯವು ಹತ್ತಿರ ಬರುತ್ತಿದ್ದಂತೆ, ಸಿಲ್ವಾನ ಅಂಗರಕ್ಷಕರು ದಿಕ್ಕುತಪ್ಪಿಸಲು ಬೇರೆ ಬೇರೆ ಕಡೆ ಓಡಿಹೋದರು. ಆದರೆ ವೈಮಾನಿಕ ಕಣ್ಗಾವಲು ಆತನನ್ನು ಪತ್ತೆಹಚ್ಚಿತು. ಆತ ಚರಂಡಿಯೊಂದರಲ್ಲಿ ಅಡಗಿದ್ದಾಗ ಸಿಕ್ಕಿಬಿದ್ದಿದ್ದಾನೆ. ಮತಾಂತರ ದಂಧೆಯ ಮಾಸ್ಟರ್ ಮೈಂಡ್ ನಿದಾ ಖಾನ್‌ಗಾಗಿ ಪೊಲೀಸರ ಬಲೆ: 'ಹನಿಯಾ' ಹೆಸರಿನಲ್ಲಿ ನಡೆಯುತ್ತಿತ್ತು ಭೀಕರ ಸಂಚು!
ಯಾವುದೇ ಗುಂಡಿನ ಚಕಮಕಿ ಅಥವಾ ಸಾವು-ನೋವುಗಳಿಲ್ಲದೆ ಅತ್ಯಂತ ನಿಖರವಾಗಿ ಈ ಬಂಧನ ನಡೆದಿದೆ ಎಂದು ನೌಕಾಪಡೆ ತಿಳಿಸಿದೆ. ಇದೇ ವೇಳೆ 'ಎಲ್ ಜಾರ್ಡಿನೆರೊ'ನ ಆರ್ಥಿಕ ವಹಿವಾಟುಗಳನ್ನು ನೋಡಿಕೊಳ್ಳುತ್ತಿದ್ದ ಸೀಸರ್ ಅಲೆಜಾಂಡ್ರೊನನ್ನೂ ಬಂಧಿಸಲಾಗಿದೆ. ಬಂಗಾಳದ ರಣಕಣ: ಇದು ದಬ್ಬಾಳಿಕೆಯ ಅಂತ್ಯವೇ?
ಫೆಬ್ರವರಿ 2026 ರಲ್ಲಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಹತನಾದ ಸಿಜೆಎನ್‌ಜಿ ನಾಯಕ "ಎಲ್ ಮೆಂಚೊ" ನಂತರ ಸಿಲ್ವಾ ಈ ಗುಂಪಿನ ಉತ್ತರಾಧಿಕಾರಿಯಾಗಿದ್ದನು. ಜಾಗತಿಕ ಮಟ್ಟದಲ್ಲಿ ಮಾದಕ ದ್ರವ್ಯ ಜಾಲವನ್ನು ನಿಯಂತ್ರಿಸುತ್ತಿದ್ದ ಈತನ ಬಂಧನವು ಮೆಕ್ಸಿಕೋಗೆ ಸಿಕ್ಕ ಅತಿ ದೊಡ್ಡ ಯಶಸ್ಸಾಗಿದೆ.