ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಸಿಬ್ಬಂದಿಯ ನೇಮಕಕ್ಕೆ ಸಂಬಂಧಿಸಿದಂತೆ ಮೇ 2, 2026 ರಂದು ನಡೆದ ವಿಶೇಷ ವಿಚಾರಣೆಯಲ್ಲಿ ಭಾರತದ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮುಕ್ತ ಅವಕಾಶ ನೀಡಿದೆ. ಮೇ 4 ರಂದು ನಿಗದಿಯಾಗಿರುವ ಮತ ಎಣಿಕೆಗೆ ಕೇವಲ 48 ಗಂಟೆಗಳ ಮೊದಲು ಈ ತೀರ್ಪು ಬಂದಿದ್ದು, ಚುನಾವಣಾ ಆಯೋಗದ ಸುತ್ತೋಲೆಯನ್ನು ಪ್ರಶ್ನಿಸಿ ಟಿಎಂಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. Stylum Women's Solid & Embroidered Cotton Tiered Dress
ಸಾಂಪ್ರದಾಯಿಕವಾಗಿ ರಾಜ್ಯ ಸರ್ಕಾರದ ಸಿಬ್ಬಂದಿಯನ್ನು ಬಳಸುವ ಬದಲಿಗೆ, ಕೇಂದ್ರ ಸರ್ಕಾರದ ಉದ್ಯೋಗಿಗಳನ್ನು ಮತ ಎಣಿಕೆ ಮೇಲ್ವಿಚಾರಕರು ಮತ್ತು ಮೈಕ್ರೋ-ಅಬ್ಸರ್ವರ್‌ಗಳನ್ನಾಗಿ ನಿಯೋಜಿಸಲು ಚುನಾವಣಾ ಆಯೋಗ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಟಿಎಂಸಿ ನ್ಯಾಯಾಲಯದ ಮೊರೆ ಹೋಗಿತ್ತು. ಈ ತೀರ್ಪು ಬಿಜೆಪಿಗೆ ದೊಡ್ಡ ಸಮಾಧಾನ ತಂದಿದ್ದರೆ, ಚುನಾವಣಾ ಆಯೋಗಕ್ಕೆ ದೊಡ್ಡ ಬಲ ನೀಡಿದೆ.
"ಚುನಾವಣಾ ಆಯೋಗವು ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ಹೊಂದಿರುವ ಸಾಂವಿಧಾನಿಕ ಸಂಸ್ಥೆಯಾಗಿದೆ. ಪ್ರಕ್ರಿಯೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲು ತನ್ನ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂಪೂರ್ಣ ಹಕ್ಕು ಆಯೋಗಕ್ಕಿದೆ" ಎಂದು ನ್ಯಾಯಪೀಠ ತಿಳಿಸಿದೆ.
ವಿಶೇಷವಾಗಿ ತೀವ್ರ ಪೈಪೋಟಿ ಇರುವ ಪ್ರದೇಶಗಳಲ್ಲಿ ತಟಸ್ಥತೆಯನ್ನು ಕಾಪಾಡಿಕೊಳ್ಳಲು ಕೇಂದ್ರದ ಸಿಬ್ಬಂದಿಯನ್ನು ಬಳಸುವುದು ಸರಿಯಾದ ಆಡಳಿತಾತ್ಮಕ ನಿರ್ಧಾರ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಬರಿದಾಗುತ್ತಿದೆ ಪಾಕಿಸ್ತಾನದ ಜೀವನದಿ! ಹನಿ ಹನಿಗೂ ಪರದಾಡುವ ಸ್ಥಿತಿ
ಕೇಂದ್ರ ಸರ್ಕಾರದ ಸಿಬ್ಬಂದಿಯನ್ನು ಬಳಸುವುದರಿಂದ ದಕ್ಷಿಣ 24 ಪರಗಣ ಮತ್ತು ಬಿರ್ಭೂಮ್‌ನಂತಹ ಜಿಲ್ಲೆಗಳಲ್ಲಿ ಸ್ಥಳೀಯ ರಾಜಕೀಯ ಬೆದರಿಕೆ ಅಥವಾ ಪಕ್ಷಪಾತದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಆಯೋಗವು ವಾದಿಸಿತ್ತು. 26/11 ಪ್ರಕರಣದ ಅನ್ಸಾರಿಗೆ ಆಟೋ ಚಾಲನಾ ಪರವಾನಗಿ ನಿರಾಕರಿಸಿದ ಹೈಕೋರ್ಟ್!
ರಾಜ್ಯ ಸರ್ಕಾರಿ ನೌಕರರ ಮೇಲೆ ನಂಬಿಕೆ ಇಲ್ಲ ಎಂಬ ಟಿಎಂಸಿಯ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಇದು ಕೇವಲ ಚುನಾವಣಾ ಪಾರದರ್ಶಕತೆಯ ಕ್ರಮ ಎಂದು ಹೇಳಿದೆ. ಕಳೆದ ಕೆಲವು ವಾರಗಳಿಂದ ಟಿಎಂಸಿ ಮತ್ತು ಕೇಂದ್ರದ ನಡುವೆ ನಡೆಯುತ್ತಿರುವ ಸಂಘರ್ಷದ ಸರಣಿಯಲ್ಲಿ ಇದು ಹೊಸ ಬೆಳವಣಿಗೆಯಾಗಿದೆ.