Skip to main content
ವಿಡಿಯೋ
politics

ಕರ್ನಾಟಕ ಉಪಚುನಾವಣೆ 2026: ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್‌ ಶಾಮನೂರು, ಬಾಗಲಕೋಟೆಯಲ್ಲಿ ಉಮೇಶ್‌ ಮೇಟಿ ಮುನ್ನಡೆ

By Bhavana Gowda
ಕರ್ನಾಟಕ ಉಪಚುನಾವಣೆ 2026: ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್‌ ಶಾಮನೂರು, ಬಾಗಲಕೋಟೆಯಲ್ಲಿ ಉಮೇಶ್‌ ಮೇಟಿ ಮುನ್ನಡೆ

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಇಲ್ಲಿ 23 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಒಟ್ಟು 14 ಟೇಬಲ್‌ಗಳನ್ನು ಅಳವಡಿಸಲಾಗಿದೆ.

ದಾವಣಗೆರೆ/ ಬಾಗಲಕೋಟೆ: ರಾಜ್ಯದ ಕುತೂಹಲ ಕೆರಳಿಸಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ದಾವಣಗೆರೆ ದಕ್ಷಿಣ: ಸಮರ್ಥ್‌ ಶಾಮನೂರು ಮುನ್ನಡೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಮತ ಎಣಿಕೆ ಕಾರ್ಯವು ನಗರದ ಡಿಆರ್‌ಆರ್‌ ಕಾಲೇಜಿನಲ್ಲಿ ನಡೆಯುತ್ತಿದೆ. ಇಲ್ಲಿ ಒಟ್ಟು 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, 21 ಸುತ್ತುಗಳಲ್ಲಿ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

9ನೇ ಸುತ್ತಿನ ಅಂತ್ಯಕ್ಕೆ: ಕಾಂಗ್ರೆಸ್‌ನ ಸಮರ್ಥ್‌ ಶಾಮನೂರು ಅವರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್‌ ದಾಸಕರಿಯಪ್ಪ ವಿರುದ್ಧ 2,000 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.

ಪಡೆದ ಮತಗಳು: ಸಮರ್ಥ್‌ ಶಾಮನೂರು 27,878 ಮತಗಳನ್ನು ಪಡೆದರೆ, ಶ್ರೀನಿವಾಸ್‌ ದಾಸಕರಿಯಪ್ಪ 25,878 ಮತಗಳನ್ನು ಪಡೆದಿದ್ದಾರೆ.

ಬಾಗಲಕೋಟೆ: ಉಮೇಶ್‌ ಮೇಟಿ ಭರ್ಜರಿ ಮುನ್ನಡೆ

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಇಲ್ಲಿ 23 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಒಟ್ಟು 14 ಟೇಬಲ್‌ಗಳನ್ನು ಅಳವಡಿಸಲಾಗಿದೆ.

ಪ್ರಸ್ತುತ ಸ್ಥಿತಿ: ಕಾಂಗ್ರೆಸ್‌ನ ಉಮೇಶ್‌ ಮೇಟಿ ಅವರು ಬಿಜೆಪಿಯ ವೀರಣ್ಣ ಚರಂತಿಮಠ್‌ ವಿರುದ್ಧ 9,555 ಮತಗಳ ಬೃಹತ್‌ ಅಂತರ ಕಾಯ್ದುಕೊಂಡಿದ್ದಾರೆ.

ಪಡೆದ ಮತಗಳು: ಉಮೇಶ್‌ ಮೇಟಿ 60,977 ಮತಗಳನ್ನು ಗಳಿಸಿದ್ದರೆ, ವೀರಣ್ಣ ಚರಂತಿಮಠ್‌ 51,422 ಮತಗಳನ್ನು ಪಡೆದಿದ್ದಾರೆ.

ಚುನಾವಣೆಗೆ ಕಾರಣವೇನು?

ಬಾಗಲಕೋಟೆಯಲ್ಲಿ ಹಿರಿಯ ಕಾಂಗ್ರೆಸ್‌ ಶಾಸಕ ಎಚ್‌. ವೈ. ಮೇಟಿ ಅವರ ನಿಧನ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಈ ಎರಡು ಕ್ಷೇತ್ರಗಳು ತೆರವಾಗಿದ್ದವು. ಈ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯ ಅಂತಿಮ ಫಲಿತಾಂಶ ಇಂದು ಮಧ್ಯಾಹ್ನದ ವೇಳೆಗೆ ಪೂರ್ಣವಾಗಿ ಹೊರಬೀಳಲಿದೆ.