Skip to main content
ವಿಡಿಯೋ
politics

"ಓವೈಸಿ, 1947ಕ್ಕೆ ಕೊಂಡೊಯ್ಯುವ ಕನಸು ಬಿಡು! ಭಾರತದಲ್ಲಿ ಇದ್ದರೆ ಭಾರತೀಯರಾಗು, ಇಲ್ಲದಿದ್ದರೆ ಪ್ಯಾಕ್ ಅಪ್!"

By prasanna jodidar
 "ಓವೈಸಿ, 1947ಕ್ಕೆ ಕೊಂಡೊಯ್ಯುವ ಕನಸು ಬಿಡು! ಭಾರತದಲ್ಲಿ ಇದ್ದರೆ ಭಾರತೀಯರಾಗು, ಇಲ್ಲದಿದ್ದರೆ ಪ್ಯಾಕ್ ಅಪ್!"

"ಸ್ವತಂತ್ರ ಮುಸ್ಲಿಂ ನಾಯಕತ್ವವೇ? ಮುಸ್ಲಿಮರನ್ನು ಶೋಷಿಸುವವರು ನೀವೇ! ಅಕ್ರಮ ವಲಸಿಗರಿಗೆ ದಾರಿ ಮಾಡಿಕೊಡುವ ದುಷ್ಟ ರಾಜಕಾರಣವನ್ನು ಭಾರತ ಸಹಿಸುವುದಿಲ್ಲ, ಓವೈಸಿ!"

ಬಿಜೆಪಿಯನ್ನು ತಡೆಯಲು ಜಾತ್ಯತೀತ ಪಕ್ಷಗಳಿಂದ ಸಾಧ್ಯವಿಲ್ಲ, ಆದ್ದರಿಂದ ಮುಸ್ಲಿಮರು ಸ್ವತಂತ್ರ ನಾಯಕತ್ವವನ್ನು ರೂಪಿಸಿಕೊಳ್ಳಬೇಕು ಎಂದು ಟಿಎಂಸಿ ಸೋಲಿಗೆ ಪ್ರತಿಕ್ರಿಯಿಸುತ್ತಾ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರು ಮುಸ್ಲಿಮರನ್ನು ಕೇವಲ ವೋಟ್ ಬ್ಯಾಂಕ್‌ಗಳಾಗಿ ಬಳಸಿಕೊಳ್ಳುವ ಬದಲು, ಅವರನ್ನು ನಾಗರಿಕರಂತೆ ನಡೆಸಿಕೊಂಡು ಅಭಿವೃದ್ಧಿಯತ್ತ ಗಮನ ಹರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ಸೇರಿಸಿದ್ದಾರೆ. Amazon Brand - Myx Women's Pure Cotton A-Line 3 piece Schiffli Suit Set (Available in Plus Sizes)

ಬಿಜೆಪಿ, ಟಿಎಂಸಿಯನ್ನು ಸೋಲಿಸಿದ ಮರುದಿನವೇ ಓವೈಸಿ ಸ್ವತಂತ್ರ ಮುಸ್ಲಿಂ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಈತ ಒಬ್ಬ ಮೂಲಭೂತವಾದಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆಮ್ ಆದ್ಮಿ ಪಕ್ಷ, ಶಿವಸೇನೆ (ಯುಬಿಟಿ) ಮತ್ತು ಟಿಎಂಸಿ ಪಕ್ಷಗಳು ಈ ಹಿಂದೆ 'ಮೃದು ಹಿಂದುತ್ವ'ದ ಆಟವಾಡಿದ್ದವು ಎಂದು ಓವೈಸಿ ಪ್ರತಿಪಾದಿಸಿದ್ದಾರೆ.

ಅಲ್ಲದೆ, ಟಿಎಂಸಿ ಸೋಲಿಗೆ ಮತದಾರರ ಪಟ್ಟಿಯ ಮಾರ್ಪಾಡು ಮತ್ತು 'ಮುಸ್ಲಿಮರ ಶೋಷಣೆ' ಕಾರಣ ಎಂದು ಆರೋಪಿಸಿದ್ದಾರೆ.ಆದರೆ ವಾಸ್ತವವಾಗಿ ಮುಸ್ಲಿಮರನ್ನು ಶೋಷಿಸುತ್ತಿರುವವರು ಯಾರು? ಸರ್ಕಾರದ ಎಲ್ಲಾ ಸಾಮಾಜಿಕ ಯೋಜನೆಗಳು, ಎಲ್ಲಾ ರೀತಿಯ ಮೀಸಲಾತಿಗಳನ್ನು ಪಡೆದುಕೊಳ್ಳುತ್ತಿದ್ದರೂ ಶೋಷಣೆ ಎನ್ನಲು ಇವರಿಗೆ ಬುದ್ಧಿ ಇದೆಯೇ?

ಇವರ ದುರುದ್ದೇಶ ಸ್ಪಷ್ಟವಾಗಿದೆ. 1947ಕ್ಕಿಂತ ಹಿಂದಿನ ಪರಿಸ್ಥಿತಿಗೆ ನಮ್ಮನ್ನು ಕೊಂಡೊಯ್ಯಲು ಇವರು ಬಯಸುತ್ತಿದ್ದಾರೆ. ಮುಸ್ಲಿಮರಿಗಾಗಿ ಪ್ರತ್ಯೇಕ ರಾಜಕೀಯ ಸಂಸ್ಥೆ ಮತ್ತು ನಾಯಕತ್ವವನ್ನು ಕೇಳುವ ಇವರು ಭಾರತದಲ್ಲೇಕೆ ಇದ್ದಾರೆ? ಅಸ್ಸಾಂ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಬಗ್ಗೆ ಮಾತನಾಡಿದ ಓವೈಸಿ, ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೆ ಮುಸ್ಲಿಮರಿಗೆ 'ಬಲವಾದ ಧ್ವನಿ' ಸಿಗುತ್ತಿತ್ತು ಎಂದಿದ್ದಾರೆ. ಸುಕೇಶ್ ಗ್ಯಾಂಗ್‌ನ 'ಹವಾಲಾ' ಕಿಂಗ್ ಪಿನ್ ಈಗ ದೆಹಲಿ ಪೊಲೀಸರ ಸಂಕೋಲೆಯಲ್ಲಿ!

ಹೌದು, ಅಕ್ರಮ ಬಾಂಗ್ಲಾದೇಶಿಯರನ್ನು ಬರಮಾಡಿಕೊಳ್ಳಲು ನಿಮಗೆ ಅದು ಸುಲಭವಾಗುತ್ತಿತ್ತು ಅಷ್ಟೇ. ಬಂಕಿಮಚಂದ್ರರ ನಾಡಿನಲ್ಲಿ ಹೊಸ ಯುಗದ ಆರಂಭ! ಸೋನಾರ್ ಬಾಂಗ್ಲಾ ನಿರ್ಮಾಣದತ್ತ ದಿಟ್ಟ ಹೆಜ್ಜೆ

ಓವೈಸಿ ಅವರೇ, ನಿಮ್ಮ ಈ ತಜ್ಞರ ಅಭಿಪ್ರಾಯ ಕೇಳಲು ದೇಶದಲ್ಲಿ ಯಾರಿಗೂ ಆಸಕ್ತಿಯಿಲ್ಲ, ಸುಮ್ಮನಿರಿ."