Skip to main content
ವಿಡಿಯೋ
politics

ಸ್ಟಾಲಿನ್‌ಗೆ ಕೈಕೊಟ್ಟ ಕಾಂಗ್ರೆಸ್: ವಿಜಯ್ ಜೊತೆ ಕೈಜೋಡಿಸಿದ ರಾಹುಲ್ ಗಾಂಧಿ!

By prasanna jodidar
ಸ್ಟಾಲಿನ್‌ಗೆ ಕೈಕೊಟ್ಟ ಕಾಂಗ್ರೆಸ್: ವಿಜಯ್ ಜೊತೆ ಕೈಜೋಡಿಸಿದ ರಾಹುಲ್ ಗಾಂಧಿ!

ತಮಿಳುನಾಡು ರಾಜಕೀಯದಲ್ಲಿ ಸಂಚಲನ: ಡಿಎಂಕೆ ಮೈತ್ರಿ ಮುರಿದು ಟಿವಿ ಕೆ (TVK) ಸೇರಿದ ಕಾಂಗ್ರೆಸ್.

ಚೆನ್ನೈ: ಕಾಂಗ್ರೆಸ್ ಪಕ್ಷವು ತನ್ನ ನಂಬಿಕೆದ್ರೋಹದ ಗುಣವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ತಮಿಳುನಾಡು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎಂ.ಕೆ. ಸ್ಟಾಲಿನ್ ಅವರ ಕೈಬಿಟ್ಟು ನಟ ವಿಜಯ್ ಅವರ ಬೆನ್ನಿಗೆ ನಿಂತಿದೆ. ರಾಹುಲ್ ಗಾಂಧಿಯವರು ಒಮ್ಮೆ ತಮ್ಮ "ಹಿರಿಯ ಅಣ್ಣ" ಎಂದು ಕರೆದಿದ್ದ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರೊಂದಿಗೆ ಈ ಚುನಾವಣೆಯಲ್ಲಿ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದೇ ಈ ಸಂಬಂಧ ಮುರಿಯಲಿದೆ ಎಂಬುದಕ್ಕೆ ಸ್ಪಷ್ಟ ಸುಳಿವಾಗಿತ್ತು. Amazon Brand - Myx Women's Pure Cotton Embroidered Short Kurti | Tunic | Short Kurta (Available in Plus Sizes) Regular Fit

ಡಿಎಂಕೆ ಸರ್ಕಾರದ ಮೇಲಿರುವ ಆಡಳಿತ ವಿರೋಧಿ ಅಲೆಯಿಂದ ದೂರವಿರಲು ರಾಹುಲ್ ಗಾಂಧಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ತಮಿಳುನಾಡಿನ ಯುವಜನತೆ ವಿಜಯ್ ಅವರ ಟಿವಿ ಕೆ ಪಕ್ಷದತ್ತ ಒಲವು ತೋರುತ್ತಿರುವುದನ್ನು ಗಮನಿಸಿದ ಕಾಂಗ್ರೆಸ್ ನಾಯಕತ್ವ, ಈ ಹೊಸ ಶಕ್ತಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ತನ್ನ ಪಕ್ಷಕ್ಕೆ ಮರುಜೀವ ನೀಡಲು ಬಯಸಿದೆ.

ಚುನಾವಣೆಯಲ್ಲಿ ವಿಜಯ್ ಅವರ ಟಿವಿ ಕೆ 108 ಸ್ಥಾನಗಳನ್ನು ಗೆದ್ದಿದ್ದು, ಬಹುಮತಕ್ಕೆ ಬೇಕಾದ 118 ಸ್ಥಾನಗಳಿಗಿಂತ ಸ್ವಲ್ಪ ಹಿಂದೆ ಬಿದ್ದಿದೆ. ಈಗ ಕಾಂಗ್ರೆಸ್‌ನ 5 ಸ್ಥಾನಗಳ ಬೆಂಬಲದೊಂದಿಗೆ ಒಟ್ಟು ಸಂಖ್ಯೆ 113ಕ್ಕೇರಿದೆ. ಬಹುಮತಕ್ಕೆ ಇನ್ನು 5 ಸ್ಥಾನಗಳ ಅಗತ್ಯವಿದ್ದು, ಇದಕ್ಕಾಗಿ ಟಿವಿ ಕೆ ಪಕ್ಷವು ಡಿಎಂಕೆಯ ಮಾಜಿ ಮಿತ್ರಪಕ್ಷಗಳಾದ ಸಿಪಿಐ, ಸಿಪಿಎಂ ಮತ್ತು ವಿಸಿಕೆ (VCK) ಜೊತೆ ಮಾತುಕತೆ ನಡೆಸುತ್ತಿದೆ. ಪುಶ್-ಬ್ಯಾಕ್' ಭೀತಿಯಲ್ಲಿ ಬಾಂಗ್ಲಾ ಸರ್ಕಾರ: ಗಡಿ ಕಾಯಲು ಬಿಜಿಬಿಗೆ ಗೃಹ ಸಚಿವರ ಖಡಕ್ ಸೂಚನೆ

ಮೇ 6, 2026 ರಂದು ಕಾಂಗ್ರೆಸ್ ಅಧಿಕೃತವಾಗಿ ಡಿಎಂಕೆಯಿಂದ ಹೊರಬಂದು ವಿಜಯ್ ಅವರಿಗೆ ಷರತ್ತುಬದ್ಧ ಬೆಂಬಲ ಘೋಷಿಸಿತು. ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಬೇಕು ಮತ್ತು ರಾಜ್ಯದಲ್ಲಿ ಮತ್ತೆ 'ಕಾಮರಾಜ್ ಯುಗ'ದಂತಹ ಜಾತ್ಯತೀತ ಆಡಳಿತ ಬರಬೇಕು ಎಂಬ ಷರತ್ತನ್ನು ಕಾಂಗ್ರೆಸ್ ವಿಧಿಸಿದೆ. ಮೇ 7, 2026 ರ ಹೊತ್ತಿಗೆ ವಿಜಯ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸುವ ನಿರೀಕ್ಷೆಯಿದ್ದು, ಹೊಸ ಸಚಿವ ಸಂಪುಟದಲ್ಲಿ ಕಾಂಗ್ರೆಸ್‌ಗೆ ಸ್ಥಾನ ಸಿಗುವ ಸಾಧ್ಯತೆಯಿದೆ. ತುರ್ತು ಪರಿಸ್ಥಿತಿಯ ಹರಿಕಾರರಿಂದ ಪ್ರಜಾಪ್ರಭುತ್ವದ ಪಾಠವೇ?

ಕಾಂಗ್ರೆಸ್‌ನ ಈ ನಡೆಯನ್ನು ಡಿಎಂಕೆ 'ದ್ರೋಹ' ಎಂದು ಕರೆದಿದೆ. ಇದರೊಂದಿಗೆ 2004 ರಿಂದ ನಡೆದುಕೊಂಡು ಬಂದಿದ್ದ ದೀರ್ಘಕಾಲದ ಮೈತ್ರಿ ಕೊನೆಗೊಂಡಿದೆ. ಆದರೆ, ಇತಿಹಾಸವನ್ನು ಗಮನಿಸಿದರೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಪಕ್ಷಗಳು ಪೂರ್ಣವಾಗಿ ನೆಲಕಚ್ಚಿವೆ ಮತ್ತು ಜನಾದೇಶ ಪಡೆಯುವಲ್ಲಿ ವಿಫಲವಾಗಿವೆ. ಈ ಪಾಠವನ್ನು ವಿಜಯ್ ಮತ್ತು ಅವರ ಟಿವಿ ಕೆ ನೆನಪಿನಲ್ಲಿಟ್ಟುಕೊಳ್ಳಬೇಕಿದೆ.