Skip to main content
ವಿಡಿಯೋ
politics

ಯುದ್ಧವಲ್ಲ, ಸಂವಾದವೇ ದಾರಿ ಎಂಬ ನಿಲುವಿಗೆ ಬೆಂಬಲ; ಆದರೆ ನೆರೆಯ ರಾಷ್ಟ್ರದ ಭಯೋತ್ಪಾದನಾ ಇತಿಹಾಸ ಮರೆಯಲು ಸಾಧ್ಯವೇ?

By prasanna jodidar
ಯುದ್ಧವಲ್ಲ, ಸಂವಾದವೇ ದಾರಿ ಎಂಬ ನಿಲುವಿಗೆ ಬೆಂಬಲ; ಆದರೆ ನೆರೆಯ ರಾಷ್ಟ್ರದ ಭಯೋತ್ಪಾದನಾ ಇತಿಹಾಸ ಮರೆಯಲು ಸಾಧ್ಯವೇ?

ಬ್ರಿಕ್ಸ್ ಶೃಂಗಸಭೆಯ ನಡುವೆ ರಾಜತಾಂತ್ರಿಕ ಸಂಚಲನ! ದತ್ತಾತ್ರೇಯ ಹೊಸಬಾಳೆ ಕರೆಗೆ ಕಾಶ್ಮೀರಿ ನಾಯಕನ ಸಾಥ್

ಒಂದು ಅಚ್ಚರಿಯ ರಾಜಕೀಯ ಬೆಳವಣಿಗೆಯಲಿ, ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವಂತೆ ನೀಡಿದ ಕರೆಗೆ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೇ 14, 2026 ರಂದು ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. W for Woman Floral Printed Rayon Straight Kurta

ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ, "ಆರ್‌ಎಸ್‌ಎಸ್ ನಾಯಕರು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು ಎಂದು ಹೇಳಿರುವುದು ಬಹಳ ದೊಡ್ಡ ಹೆಜ್ಜೆ. ಮಾಜಿ ಸೇನಾ ಮುಖ್ಯಸ್ಥ ನರವಣೆಯವರು ಕೂಡ ಇದನ್ನು ಬೆಂಬಲಿಸಿದ್ದಾರೆ.

ಯುದ್ಧವು ಯಾವುದಕ್ಕೂ ಪರಿಹಾರವಲ್ಲ ಎಂದು ಯಾರೋ ಒಬ್ಬರು ಈಗ ಆಲೋಚಿಸುತ್ತಿರುವುದು ನನಗೆ ಸಂತೋಷ ತಂದಿದೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಮಾತುಕತೆಯೇ ಏಕೈಕ ಮಾರ್ಗ," ಎಂದು ಹೇಳಿದ್ದಾರೆ.

ಪಾಕಿಸ್ತಾನದ ರಾಜಕೀಯ ಮತ್ತು ಸೇನಾ ನಾಯಕತ್ವವು ಭಾರತದ ವಿಶ್ವಾಸವನ್ನು ಕಳೆದುಕೊಂಡಿರಬಹುದು, ಆದರೆ ಉಭಯ ದೇಶಗಳ ಜನರ ನಡುವಿನ ಸಂಪರ್ಕ ಮತ್ತು ನಾಗರಿಕ ಸಮಾಜದ ಸಹಭಾಗಿತ್ವವು ಮತ್ತೆ ವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಿಂದೂಗಳ ಮೇಲೆ ಬಾಂಗ್ಲಾ ಮೌಲ್ವಿಯ ಕಣ್ಣು! 'ಒತ್ತೆಯಾಳು' ತಂತ್ರದ ಮೂಲಕ ಬೆದರಿಕೆ ಹಾಕಿದ ಅಬ್ಬಾಸಿ

ಆದರೆ, ಪಾಕಿಸ್ತಾನದ ಮೂಲಭೂತವಾದ ಮತ್ತು ಭಯೋತ್ಪಾದನೆಯ ಇತಿಹಾಸವನ್ನು ಗಮನಿಸಿದರೆ, ಈ ಮಾತುಕತೆ ಎಷ್ಟು ಸುರಕ್ಷಿತ ಎಂಬ ಆತಂಕವೂ ಇದೆ. ಭಾರತದ ರಾಜತಾಂತ್ರಿಕ ಶಕ್ತಿಗೆ ಜಾಗತಿಕ ಮನ್ನಣೆ! ಪೋರ್ಚುಗಲ್ ನೆಲದಿಂದ ಉಗ್ರರ ಪೋಷಕನ ಎಳೆತಂದ ಎನ್‌ಐಎ

ಈ ಹಿಂದೆ ದತ್ತಾತ್ರೇಯ ಹೊಸಬಾಳೆಯವರು, ಸಾಂಸ್ಕೃತಿಕ ಮತ್ತು ನಾಗರಿಕ ಸಂಬಂಧಗಳಿಗೆ ಒತ್ತು ನೀಡುವ ಮೂಲಕ ಮಾತುಕತೆಯ ಕಿಟಕಿಯನ್ನು ತೆರೆದಿಡಬೇಕು ಎಂದು ಸೂಚಿಸಿದ್ದರು.