Skip to main content
ವಿಡಿಯೋ
crime

ಟ್ವಿಶಾ ಶರ್ಮಾ ನಿಗೂಢ ಸಾವು: ಕಾನೂನು ಪ್ರಭಾವದ ವಿರುದ್ಧ ತಾಯ್ತಂದೆಯ ಹೋರಾಟ

By prasanna jodidar
ಟ್ವಿಶಾ ಶರ್ಮಾ ನಿಗೂಢ ಸಾವು: ಕಾನೂನು ಪ್ರಭಾವದ ವಿರುದ್ಧ ತಾಯ್ತಂದೆಯ ಹೋರಾಟ

ಆತ್ಮಹತ್ಯೆಯೋ? ವ್ಯವಸ್ಥಿತ ಕೊಲೆಯೋ? ಟ್ವಿಶಾ ಸಾವಿನ ಸುತ್ತ ಸುತ್ತುವ ಅನುಮಾನದ ಹುತ್ತ

ಟ್ವಿಶಾ ಅವರ ಅತ್ತೆ ಗಿರಿಬಾಲಾ ಸಿಂಗ್ ಅವರು ನಿವೃತ್ತ ಸೆಷನ್ಸ್ ನ್ಯಾಯಾಧೀಶರಾಗಿದ್ದರೆ, ಗಂಡ ಸಮರ್ಥ್ ಸಿಂಗ್ ವಕೀಲರಾಗಿದ್ದಾರೆ. ಇಬ್ಬರೂ ಕಾನೂನು ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ಕಾರಣ, ಸ್ಥಳೀಯ ಪೊಲೀಸ್ ತನಿಖೆಯನ್ನು ಹಾದಿ ತಪ್ಪಿಸುತ್ತಿದ್ದಾರೆ ಮತ್ತು ತಮ್ಮ ಅಧಿಕಾರ ಬಳಸಿ ಸಾಕ್ಷ್ಯ ನಾಶಪಡಿಸುತ್ತಿದ್ದಾರೆ ಎಂದು ಟ್ವಿಶಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. RAREISM Regular FIT Plain Shirt

ಘಟನೆಯ ನಂತರ ಪತಿ ನಾಪತ್ತೆ ಮತ್ತು ಬಹುಮಾನ ಘೋಷಣೆ

ಟ್ವಿಶಾ ಅವರ ಸಾವಿನ ಬೆನ್ನಲ್ಲೇ ಪತಿ ಸಮರ್ಥ್ ಸಿಂಗ್ ನಾಪತ್ತೆಯಾಗಿದ್ದಾರೆ. ಅವರ ನಿರಾಕರಣೆ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಪೊಲೀಸರು ಅವರ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದು, ಕಣ್ಣ್ತಪ್ಪಿಸಿ ಓಡಾಡುತ್ತಿರುವ ಆತನ ಬಗ್ಗೆ ಮಾಹಿತಿ ನೀಡಿದವರಿಗೆ 10,000 ಬಹುಮಾನವನ್ನು ಸಹ ಘೋಷಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿನ ಗಾಯದ ಗುರುತುಗಳು

ಏಮ್ಸ್ ಭೋಪಾಲ್ ನೀಡಿದ ವರದಿಯಲ್ಲಿ ಸಾವು ನೇಣು ಹಾಕಿಕೊಂಡಿದ್ದರಿಂದ ಸಂಭವಿಸಿದೆ ಎಂದು ಹೇಳಲಾಗಿದ್ದರೂ, ಆಕೆಯ ದೇಹದ ಮೇಲೆ ಹಲವು ಹಳೆಯ ಮತ್ತು ಇತ್ತೀಚಿನ ರಕ್ತಗಾಯಗಳು ಹಾಗೂ ಬಲವಾದ ಏಟು ಬಿದ್ದಿರುವುದು ಪತ್ತೆಯಾಗಿದೆ. ಆಕೆಯ ತಲೆಬುರುಡೆಯ ಕೆಳಗೆ, ಕುತ್ತಿಗೆ, ಕೈ ಮತ್ತು ಮಣಿಕಟ್ಟಿನ ಮೇಲೆ ಗಾಯದ ಗುರುತುಗಳಿರುವುದು ಸಾವಿನ ಬಗ್ಗೆ ತೀವ್ರ ಅನುಮಾನ ಮೂಡಿಸಿದೆ.

ಚಾರಿತ್ರ್ಯ ಹರಣ ಆರೋಪ

ಟ್ವಿಶಾ ಅವರ ನಿಗೂಢ ಸಾವಿನ ನಂತರ ಆಕೆಯ ಅತ್ತೆ ಗಿರಿಬಾಲಾ ಸಿಂಗ್ ಪತ್ರಿಕಾಗೋಷ್ಠಿ ನಡೆಸಿ, ಟ್ವಿಶಾ ಮಾನಸಿಕ ಅಸ್ವಸ್ಥಳಾಗಿದ್ದಳು ಮತ್ತು ಗಾಂಜಾ ವ್ಯಸನಿಯಾಗಿದ್ದಳು ಎಂದು ಆರೋಪಿಸಿದರು. ಆದರೆ ಟ್ವಿಶಾ ಪೋಷಕರು ಇದನ್ನು ತೀವ್ರವಾಗಿ ಖಂಡಿಸಿದ್ದು, ತಮ್ಮ ಮಗಳ ಸಾವಿನ ತನಿಖೆಯನ್ನು ಹಳ್ಳ ಹಿಡಿಸಲು ಮತ್ತು ಆಕೆಯ ಚಾರಿತ್ರ್ಯ ಹರಣ ಮಾಡಲು ಇಂತಹ ಸುಳ್ಳು ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಪಾಕಿಸ್ತಾನ ಮಾದರಿ ದ್ವಿಪೌರತ್ವ ಪಿಡುಗು ತಡೆಯಲು ಕಠಿಣ ನಿಯಮ! ಗೃಹ ಸಚಿವಾಲಯದ ದೊಡ್ಡ ಹೆಜ್ಜೆ!

ನ್ಯಾಯಾಂಗ ವ್ಯವಸ್ಥೆಯ ಪ್ರಭಾವದ ಭೀತಿ, ಆರೋಪಿಗಳ ಕುಟುಂಬವು ನ್ಯಾಯಾಂಗ ರಂಗದಲ್ಲಿ ದಶಕಗಳ ಕಾಲ ಕೆಲಸ ಮಾಡಿರುವುದರಿಂದ, ಸ್ಥಳೀಯ ಪೊಲೀಸರು ಅವರ ಒತ್ತಡಕ್ಕೆ ಮಣಿಯಬಹುದು ಎಂಬ ಆತಂಕ ಪೋಷಕರಿಗಿದೆ. ಗಿರಿಬಾಲಾ ಸಿಂಗ್ ಅವರು ಘಟನೆ ನಡೆದ ಮರುದಿನವೇ ನ್ಯಾಯಾಂಗ ಕ್ಷೇತ್ರದ ಪ್ರಮುಖರೊಂದಿಗೆ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದರು ಎಂದು ಕುಟುಂಬಸ್ಥರು ಆಪಾದಿಸಿದ್ದಾರೆ.

ಅಪೂರ್ಣ ತನಿಖೆಯ ಅನುಮಾನ, ನೇಣು ಹಾಕಿಕೊಳ್ಳಲು ಬಳಸಲಾದ ವಸ್ತು (ಬೆಲ್ಟ್/ಹಗ್ಗ) ವನ್ನು ಆರಂಭದಲ್ಲಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಸರಿಯಾದ ಸಮಯಕ್ಕೆ ಒಪ್ಪಿಸಿರಲಿಲ್ಲ. ಇಂತಹ ಗಂಭೀರ ಲೋಪಗಳು ತನಿಖೆಯ ದಿಕ್ಕನ್ನು ಬದಲಿಸಬಹುದು ಎಂದು ಕುಟುಂಬ ಭಾವಿಸಿದೆ. ಇ-ಫಾರ್ಮಸಿಗಳ ರಿಯಾಯಿತಿ ದಾಳಿಗೆ ಸಾಂಪ್ರದಾಯಿಕ ಕೆಮಿಸ್ಟ್‌ಗಳು ಮುಷ್ಕರ!

ಸ್ವತಂತ್ರ ತನಿಖೆಯ ಹಠ, ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ತಮಗೆ ನಂಬಿಕೆಯಿಲ್ಲದ ಕಾರಣ, ಕುಟುಂಬಸ್ಥರು ದೆಹಲಿಯ ಏಮ್ಸ್‌ನಲ್ಲಿ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ಸದ್ಯಕ್ಕೆ ಕೋರ್ಟ್ ಆ ಅರ್ಜಿಯನ್ನು ತಿರಸ್ಕರಿಸಿ, ಮೃತದೇಹ ಹಾಳಾಗದಂತೆ ಅಲ್ಟ್ರಾ-ಲೋ ತಾಪಮಾನದಲ್ಲಿ ಸಂರಕ್ಷಿಸಲು ಸೂಚಿಸಿದೆ. ಯಾವುದೇ ಸ್ಥಳೀಯ ರಾಜಕೀಯ ಅಥವಾ ನ್ಯಾಯಾಂಗದ ಪ್ರಭಾವವಿಲ್ಲದೆ ಸತ್ಯ ಹೊರಬರಬೇಕಾದರೆ ಸಿಬಿಐನಂತಹ ಕೇಂದ್ರ ಸಂಸ್ಥೆ ಮಾತ್ರ ಸಾಧ್ಯ ಎಂದು ಪೋಷಕರು ವಾದಿಸುತ್ತಿದ್ದಾರೆ.