ವಿಶ್ವ ಶಾಂತಿ ಮತ್ತು ತಿಳುವಳಿಕೆ ದಿನದ ಉದ್ದೇಶ ಹಾಗೂ ಇತಿಹಾಸ: ವಿಶ್ವ ಶಾಂತಿ ಮತ್ತು ತಿಳುವಳಿಕೆ ದಿನವನ್ನು ಪ್ರತೀ ವರ್ಷ ಫೆಬ್ರವರಿ 23ರಂದು ಆಚರಿಸಲಾಗುತ್ತದೆ. ಈ ದಿನದ ಉದ್ದೇಶವು ಜಗತ್ತಿನಾದ್ಯಂತ ಶಾಂತಿ, ಸಹಾನುಭೂತಿ ಹಾಗೂ ಸಾಂಸ್ಕೃತಿಕ ಸಹಭಾವವನ್ನು ಉತ್ತೇಜಿಸುವುದಾಗಿದೆ.1905 ರ ಫೆಬ್ರವರಿ 23ರಂದು ಸ್ಥಾಪನೆಯಾದ ರೋಟರಿ ಇಂಟರ್ನ್ಯಾಷನಲ್ ಎಂಬ ಜಾಗತಿಕ ಮಾನವ ಸೇವಾ ಸಂಸ್ಥೆಯ ಸ್ಥಾಪನೆಯ ದಿನದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ರೋಟರಿ ಸಂಸ್ಥೆಯ ಪ್ರಮುಖ ಉದ್ದೇಶಗಳಲ್ಲಿ ಜಗತ್ತಿನಲ್ಲಿ ಶಾಂತಿ, ಸ್ನೇಹ ಮತ್ತು ಒಗ್ಗಟ್ಟನ್ನು ಬೆಳೆಸುವುದು ಕೂಡ ಪ್ರಮುಖವಾದುದು.ಈ ದಿನವು ವಿವಿಧ ದೇಶಗಳು ಮತ್ತು ಸಮಾಜ