ಬೆಂಗಳೂರು : ಹಳೇ ದ್ವೇಷದ ಹಿನ್ನಲೆ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ ಘಟನೆ ಹೆಚ್ ಎ ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ನಹೀಮ್ ಎಂಬಾತನ ಮೇಲೆ ಹಲ್ಲೆ ನಡೆದಿದ್ದು, ಮೇ 17 ರ ಮಧ್ಯರಾತ್ರಿ ಹಳೇ ದ್ವೇಷದ ಕಾರಣಕ್ಕಾಗಿ ಅಟ್ಟಾಡಿಸಿಕೊಂಡು ಲಾಂಗ್ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.ಈ ಕೃತ್ಯ ಎಸಗಿದವರನ್ನು ಮತ್ತೆ ಹಚ್ಛಲಾಗಿದ್ದು, ಅವರನ್ನು ಶಪೀಕ್, ಇಮ್ರಾನ್, ಸದ್ದಾಂ ಎಂದು ಖಚಿತಪಡಿಸಿಕೊಳ್ಳಲಾಗಿದೆ.ಹಲ್ಲೆಗೊಳಗಾದ ನಹೀಮ್ ಎರಡು ವರ್ಷದ ಹಿಂದೆ ಶಪೀಕ್ ಮೇಲ್ ಅಟ್ಯಾಕ್ ಮಾಡಿದ್ದ. ನಂತರ ಆ ಘಟನೆ ಬಳಿಕ ಹೆಚ್ ಎ ಎಲ್ ಬಿಟ್ಟು, ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿ