ತುಮಕೂರು: ತುಮಕೂರು ಜಿಲ್ಲೆಯಲ್ಲಿ ಹಸುವಿನ ಮೇಲೆ ಕ್ರೂರ ಕೃತ್ಯ ನಡೆದಿದ್ದು, ಇದರಿಂದ ಸ್ಥಳೀಯರಲ್ಲಿ ಆಕ್ರೋಶ ಮೂಡಿದೆ. ಚಿಕ್ಕನಾಯಕನಹಳ್ಳಿ ಗ್ರಾಮ ಪಂಚಾಯ್ತಿಯ ಸೂಲಿವಾರ ಗ್ರಾಮದಲ್ಲಿ, ಜೂನ್ 19ರಂದು ಮಧ್ಯಾಹ್ನ ಹಸುವಿನ ಕೆಚ್ಚಲು ಕತ್ತರಿಸಿರುವ ಘಟನೆ ನಡೆದಿದೆ. ಹಸು ಪಕ್ಕದ ಜಮೀನಿನಲ್ಲಿ ಮೇಯಲು ಹೋಗಿದ್ದ ಕಾರಣದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.ಹಸುವಿನ ಮಾಲೀಕ ಮರಿ ಬಸವಯ್ಯ ಅವರು ದೂರು ನೀಡಿದ್ದು, ಪಕ್ಕದ ಜಮೀನಿನ ಗುರು ಸಿದ್ದಪ್ಪ ಎಂಬಾತ ಈ ಕೃತ್ಯಕ್ಕೆ ಹೊಣೆಗಾರರಾಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇವರು ಇಬ್ಬರೂ ಹಲವಾರು ವರ್ಷಗಳಿಂದ ವೈಷಮ್ಯ ಹೊಂದಿದ್ದರು ಎನ್ನಲಾಗಿದೆ.ಮರಿ ಬಸವಯ್ಯ ಅವರು ಗ್ರಾಮದ ಹ