Skip to main content
ವಿಡಿಯೋ
1/2
crime

ಕಚೇರಿಯಲ್ಲೇ ಡಿಜಿಪಿ ರಾಮಚಂದ್ರರಾವ್ ರಾಸಲೀಲೆ; ಖಾಕಿ ಗೌರವಕ್ಕೆ ಧಕ್ಕೆ ತಂದ ವೈರಲ್ ವಿಡಿಯೋ..!

By Sushmitha R
ಕಚೇರಿಯಲ್ಲೇ ಡಿಜಿಪಿ ರಾಮಚಂದ್ರರಾವ್ ರಾಸಲೀಲೆ; ಖಾಕಿ ಗೌರವಕ್ಕೆ ಧಕ್ಕೆ ತಂದ ವೈರಲ್ ವಿಡಿಯೋ..!

ಸಾರ್ವಜನಿಕ ಸೇವೆಯಲ್ಲಿರುವ ಅತ್ಯನ್ನತ ಶ್ರೇಣಿಯ ಅಧಿಕಾರಿಗಳು ನೈತಿಕತೆ ಮತ್ತು ಶಿಸ್ತಿನ ಪ್ರತಿರೂಪವಾಗಿರಬೇಕು ಎಂಬುದು ಸಾರ್ವಜನಿಕರ ಅಪೇಕ್ಷೆ.

ಸಾರ್ವಜನಿಕ ಸೇವೆಯಲ್ಲಿರುವ ಅತ್ಯನ್ನತ ಶ್ರೇಣಿಯ ಅಧಿಕಾರಿಗಳು ನೈತಿಕತೆ ಮತ್ತು ಶಿಸ್ತಿನ ಪ್ರತಿರೂಪವಾಗಿರಬೇಕು ಎಂಬುದು ಸಾರ್ವಜನಿಕರ ಅಪೇಕ್ಷೆ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಡಿಜಿಪಿ ರಾಮಚಂದ್ರರಾವ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಕ್ಷೇಪಾರ್ಹ ವಿಡಿಯೋಗಳು ಪೊಲೀಸ್ ಇಲಾಖೆ ಹಾಗೂ ಆಡಳಿತ ವಲಯದಲ್ಲಿ ತೀವ್ರ ಮುಜುಗರ ಮತ್ತು ಚರ್ಚೆಗೆ ಕಾರಣವಾಗಿವೆ.

ವೈರಲ್ ಆಗಿರುವ ವಿಡಿಯೋಗಳಲ್ಲಿ ಡಿಜಿಪಿ ರಾಮಚಂದ್ರರಾವ್ ಅವರು ತಮ್ಮ ಅಧಿಕೃತ ಕಚೇರಿಯಲ್ಲಿಯೇ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ ಎಂಬ ಆರೋಪ ಕೇಳಿಬಂದಿದೆ.The Shopoholic Analog Luxury Dial in Square Case Ston Studded Brecelet Strap Combo Wrist Watches for Women's Girls Ladies

"ಆನ್ ಡ್ಯೂಟಿ" ಅಂದರೆ ಕರ್ತವ್ಯದ ಅವಧಿಯಲ್ಲಿಯೇ, ಸಮವಸ್ತ್ರದಲ್ಲಿರುವಾಗಲೇ ಇಂತಹ ಕೃತ್ಯ ನಡೆದಿದೆ ಎನ್ನಲಾಗಿರುವುದು ಘಟನೆಯ ಗಂಭೀರತೆಯನ್ನು ಹೆಚ್ಚಿಸಿದೆ. ಕೇವಲ ಒಬ್ಬ ಮಹಿಳೆ ಮಾತ್ರವಲ್ಲದೆ, ಓರ್ವ ಮಾಡೆಲ್ ಸೇರಿದಂತೆ ಹಲವು ಯುವತಿಯರ ಜೊತೆಗಿನ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ.

ಪೊಲೀಸ್ ಇಲಾಖೆಯ ಅತ್ಯುನ್ನತ ಸ್ಥಾನದಲ್ಲಿ ಕುಳಿತು, ಸಮಾಜಕ್ಕೆ ರಕ್ಷಣೆ ಮತ್ತು ಮಾರ್ಗದರ್ಶನ ನೀಡಬೇಕಾದ ಅಧಿಕಾರಿಯೇ ಇಂತಹ ರಾಸಲೀಲೆಯಲ್ಲಿ ತೊಡಗಿದ್ದಾರೆ ಎಂಬ ಸುದ್ದಿ ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ಮೂಡಿಸಿದೆ. ಸರ್ಕಾರಿ ಕಚೇರಿಯನ್ನು ಇಂತಹ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ವ್ಯವಸ್ಥೆಯ ವಿಪರ್ಯಾಸ ಎಂದು ಜನರು ಟೀಕಿಸುತ್ತಿದ್ದಾರೆ.ಇದನ್ನು ಓದಿ: ಜಿಬಿಎ ಚುನಾವಣೆ ಬ್ಯಾಲೆಟ್‌ ಪೇಪರ್‌ನಲ್ಲಿಯೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದ ಚುನಾವಣಾ ಆಯೋಗ!

ಒಂದು ವೇಳೆ ಈ ವಿಡಿಯೋಗಳು ನಿಜವಾಗಿದ್ದಲ್ಲಿ, ಇದು ಕರ್ತವ್ಯ ಲೋಪ ಮಾತ್ರವಲ್ಲದೆ, ಇಡೀ ಪೊಲೀಸ್ ಪಡೆಯ ಗೌರವಕ್ಕೆ ಕುಂದು ತರುವ ವಿಷಯವಾಗಿದೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಉನ್ನತ ಮಟ್ಟದ ತನಿಖೆಗೆ ಒತ್ತಾಯ ಕೇಳಿಬರುತ್ತಿದ್ದು, ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ.ಇದನ್ನು ಓದಿ: ರಾಷ್ಟ್ರಪತಿ ಭವನದ ಔತಣಕೂಟಕ್ಕೆ ಕನ್ನಡಿಗನಿಗೆ ಬುಲಾವ್: ಯುವ ಉದ್ಯಮಿ ಕೌಶಿಕ್ ಮುದ್ದಾಗೆ ಅಪರೂಪದ ಗೌರವ