ಜಮ್ಮು ಕಾಶ್ಮೀರದ ಉಧಂಪುರದ ಬಳಿ ಸೇನಾ ವಾಹನವೊಂದು ಕಣಿವೆಗೆ ಬಿದ್ದು ಭಾರಿ ಅಪಘಾತ ಸಂಭವಿಸಿದೆ. ಸಿಆರ್‌ಪಿಎಫ್ ಯೋಧರಿದ್ದಂತಹ ವಾಹನವು ಧರೆಗುರುಳಿ ಯೋಧರು ಹುತಾತ್ಮರಾಗಿರುವುದಾಗಿ ಸುದ್ದಿಯಾಗಿದೆ. ವಾಹನ ಅಪಘಾತಕ್ಕೀಡಾದ ಸಂದರ್ಭದಲ್ಲಿ, ವಾಹನದಲ್ಲಿನ ಇತರ 15 ಸೈನಿಕರಿಗೆ ಗಂಭೀರ ಗಾಯವಾಗಿವೆ ಮತ್ತು ಮೂವರು ಸೈನಿಕರು ವೀರಮರಣ ಹೊಂದಿರುವುದಾಗಿ ತಿಳಿದು ಬಂದಿದೆ.
ಈ ಸಂಬಂಧ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆಂದು ತಿಳಿಸಲಾಗಿದೆ. ಇಂದು ಬೆಳಗ್ಗೆ 10.30 ರ ಸಮಯಕ್ಕೆ ಅಲ್ಲಿನ ಕಂಡ್ವದಿಂದ ಬಸಂತ್‌ಗಢಕ್ಕೆ ಹೋಗುತ್ತಿದ್ದ 187ನೇ ಬೆಟಾಲಿಯನ್ ಸೈನಿಕರಿದ್ದ ವಾಹನ ಅಪಘಾತಕ್ಕೀಡಾಗಿದ್ದು, 18 ಸೈನಿಕರು ಪ್ರಯಾಣಿಸುತ್ತಿದ್ದರು ಎಂದು ವಿವರಗಳು ಹೇಳುತ್ತಿವೆ. ಕಂದಕಕ್ಕೆ ಸಿಲುಕಿದ ಸೈನಿಕರನ್ನು ಕಾಪಾಡುವಲ್ಲಿ ಸ್ಥಳೀಯ ಜನರು ಸಹಕರಿಸಿದ್ದಾರೆ ಎನ್ನಲಾಗಿದೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಮೃತರಿಗೆ ಸಂತಾಪ ಸೂಚಿಸಿ, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದಿದ್ದಾರೆ. ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ದೆಹಲಿಯ ನಿವಾಸದಲ್ಲಿ ಸುಟ್ಟ ನೋಟುಗಳ ಪ್ರಕರಣ: ಸುಪ್ರೀಂ ಕೋರ್ಟ್‌ನಿಂದ ಜಸ್ಟೀಸ್ ಯಶವಂತ್ ವರ್ಮಾ ಅರ್ಜಿ ವಜಾ
ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಲಾಗಿದೆ, ಸೂಕ್ತ ಕ್ರಮಗಳನ್ನು ವಹಿಸಿಕೊಳ್ಳುಂತೆ ಅಧಿಕಾರಿಗಳಿಗೆ ತಿಳಿಸಿಲಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.