ಬೆಂಗಳೂರು: ದಿನಬೆಳಗಾಗುತ್ತಿದ್ದಂತೆ ಕೊಲೆ ಸುಲಿಗೆ ರಕ್ತಪಾತ ಹೀಗೆ ಇತ್ಯಾದಿ ರೀತಿಯಾಗಿ ದಾಖಲಾಗುತ್ತಲೇ ಇರುತ್ತವೆ. ಅದೇ ರೀತಿಯಾಗಿ ಮೊನ್ನೆ ರಾತ್ರಿ ಒಂದು ಪ್ರಕರಣ ದಾಖಲಾಗಿದೆ. ನಿನ್ನೆ ತಡರಾತ್ರಿ 10 ಗಂಟೆಯ ಸುಮಾರಿಗೆ ಬೆಂಗಳೂರಲ್ಲಿ (Bengalore) ರಾಬರ್ಸ್ ಗಳಿಂದ ಯುವಕನ ಬರ್ಬರ ಹತ್ಯೆ ( Murder) ನಡೆದಿದೆ. ಯುವಕನನ್ನು ಕುಡಿದ ಮತ್ತಿನಲ್ಲಿ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ.
ನಿನ್ನೆ ತಡರಾತ್ರಿ ಬ್ಯಾಡರಹಳ್ಳಿ ಪೋಲಿಸ್ ಠಾಣಾ (Police Station) ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. ಕಾರ್ ಗ್ಯಾರೇಜ್ ನಲ್ಲಿ ಕೆಲಸ ಮಾಡ್ತಿದ್ದ ಪ್ರೇಮ್ ಎಂಬ ಯುವಕನನ್ನ ಅಡ್ಡ ಗಟ್ಟಿ ಸುಲಿಗೆಗೆ ಯತ್ನ ಮಾಡಿದ್ದಾರೆ. ಮಧ್ಯಪಾನ ಮಾಡಿ ಸುಲಿಗೆಗೆ ಈ ಗ್ಯಾಂಗ್ ಇಳಿದಿತ್ತು. ಹತ್ತು ಜನ ಸೇರಿಕೊಂಡು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ದುಡ್ಡು ಕೊಡು ಎಂದು ಗ್ಯಾಂಗ್ ಗಲಾಟೆ ಮಾಡಿತ್ತು. ಊಟ ಮಾಡಿಕೊಂಡು ಮನೆಗೆ ತೆರಳುತ್ತಿದ್ದ ಪ್ರೇಮ್ ( Prem) ಎಂಬ ಯುವಕನ ಮೇಲೆ ಎರಗಿದ ಗ್ಯಾಂಗ್ ಏಕಾಯಕಿ ಅಟ್ಯಾಕ್ ಮಾಡಿದ್ದಾರೆ.
ಇದನ್ನೂ ಓದಿ: ಜಮ್ಮು ಕಣಿವೆಯಲ್ಲಿ ಸೇನಾ ವಾಹನ ಅಪಘಾತ: ಮೂವರು ಸೈನಿಕರು ಹುತಾತ್ಮ.!
ಈ ಘಟನೆಯನ್ನು ಮುಂದಿಟ್ಟುಕೊಂಡು ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮುಂದೆ ದೊಡ್ಡ ಹೈಡ್ರಾಮಾವೇ ನಡೆದಿದೆ. ಮೃತದೇಹವನ್ನು ಮುಂದಿಟ್ಟುಕೊಂಡು ನ್ಯಾಯಕ್ಕಾಗಿ ಆಗ್ರಹ ಮಾಡಿದ್ದಾರೆ ಮನೆಯ ಕುಟುಂಭಸ್ಥರು ಮತ್ತು ಸ್ನೇಹಿತರು.
ಪಾಪಿಗಳು ಚಾಕುವಿನಿಂದ ಚುಚ್ಚಿದ ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಕೃತ್ಯದ ನಡೆದ ಮೇಲೆ ಸರಿಯಾದ ಕ್ರಮ ತೆಗೆದುಕೊಂಡಿಲ್ಲ ಅಂತ ಪೊಲೀಸ್ ಮೇಲೆ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಠಾಣೆ ಮುಂದೆ ಮೃತದೇಹ ಇಟ್ಟು ಪೋಲಿಸರ ಮೇಲೆ ಆರೋಪ ಮಾಡುತ್ತಿರುವ ಪೋಷಕರು.
ಪ್ರಕರಣ ಸಂಬಂಧ ಸದ್ಯ ಬ್ಯಾಡರಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ತಡರಾತ್ರಿ ರೌಡಿಗಳಿಗೆ ಹಣ (Money) ಕೊಡಲಿಲ್ಲ ಅಂತ ಯುವಕನ ಕೊಲೆ ಮಾಡಿದ್ದಾರೆ. ಬೆಂಗಳೂರಿನ ಪುಡಿ ರೌಡಿಗಳು ತಡರಾತ್ರಿ ಅಟ್ಟಹಾಸ ಮೆರೆದಿದ್ದಾರೆ. ರೌಡಿ (Rowdy sheeter ) ಶೀಟರ್ ಗಳಾದ ನವೀನ್ ಅಲಿಯಾಸ್ ಕುಳ್ಳಮಿಂಡ್ರಿ ವಿಶಾಲ್ ನಿಂದ ಪ್ರೇಮ್ ಎಂಬ ಯುವಕನನ್ನ ಕೊಲೆ ನಡೆದಿರುವುದು ತಿಳಿದುಬಂದಿದೆ.
Symbol Premium Men's Wrinkle-Resistant Regular Fit Cotton Formal Shirt
ಬ್ಯಾಡರಹಳ್ಳಿ ಪೊಲೀಸ್ ಠಾಣೆವ್ಯಾಪ್ತಿಯ ತಿಗಳರಪಾಳ್ಯ ಖಾಸಗಿ ಶಾಲೆ ಬಳಿ ಪ್ರೇಮ್ ಸ್ಬೇಹಿತರ ಜೊತೆಗೆ ಬರ್ತಿದ್ದಾಗ ಘಟನೆ ನಡೆದಿದೆ. ಬೈಕ್ ನಲ್ಲಿ ಬರ್ತಿದ್ದ ನವೀನ, ವಿಶಾಲ್. ಪ್ರೇಮ ಬಳಿ ಹಣ ಕೇಳಿದ್ದು ಗಲಾಟೆ ತೆಗೆದಿದ್ದಾರೆ. ಹಣ ನೀಡಲು ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ಕೃತ್ಯ ನಡೆಸಿದ್ದಾರೆ. ಪ್ರೇಮ್ ಜೊತೆಗಿದ್ದ ಇನ್ನೋಬ್ಬ ಸ್ಬೇಹಿತನಿಗೂ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.