ಸಕ್ಸಸ್ ರುಚಿ ಕಂಡವರಿಗೆ ಸದಾ ಸಕ್ಸಸ್ ಬೆನ್ನು ಹತ್ತಿರುತ್ತದೆ. ಅದೇ ನೀವು ನೋಡಿ ಪ್ಲಾನಿಂಗ್ ಮಾಡುವವರು, ಫೇಲ್ಯೂರ್ ಆಗುವವರನ್ನ, ಅವರು ಬರೀ ಅದರಲ್ಲಿ ಕಾಲ ದೂಡಿರುತ್ತಾರೆ. ಇದಕ್ಕೆ ಸೂಕ್ತ ನಿದರ್ಶನವೂ ಉಂಟು. ೭ ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗೆ ಸಮಾಜ ಪಾಠ ಮಾಡುವ ಶಿಕ್ಷಕರೇ ಕ್ಲಾಸ್ ೪೦ ವಿದ್ಯಾರ್ಥಿಗಳಿಗೂ ಒಂದೇ ರೀತಿ ಪಾಠ ಮಾಡಿ, ನೋಟ್ಸ್ ಕೊಟ್ಟಿರುತ್ತಾರೆ. ಆದರೆ, ಪರೀಕ್ಷಾ ಫಲಿತಾಂಶ ಬಂದಾಗ ಕನಿಷ್ಠ ೧೦ ಜನ ೧೦೦ ಕ್ಕೆ ೯೫ ರ ಮೇಲೆ ಅಂಕ ಪಡೆದಿರುತ್ತಾರೆ. ಅದೇ ಹೇಗೆ ಅಂತಾ ಚಿಂತೆ ಬ್ಯಾಡ . ಕಾರಣ ಇಷ್ಟೇ ಶಿಕ್ಷಕರ ಪಾಠದ ಜೊತೆಗೆ ವಿದ್ಯಾರ್ಥಿ ಆಸಕ್ತಿ, ಶ್ರಮ, ಮನೆ ಪಾಠ ಎಲ್ಲವೂ ಫಲಿತಾಂಶವನ್ನ ಅವಲಂಬಿಸಿರುತ್ತದೆ.ಮತಗಳ್ಳತನ ಆರೋಪಕ್ಕೆ ಸಾಕ್ಷಿ ಕೊಡಬೇಕು..ತಪ್ಪಿದ್ದರೆ ಕಾನೂನು ಕ್ರಮ! ರಾಹುಲ್ ಗಾಂಧಿಗೆ ಚುನಾವಣಾಧಿಕಾರಿಗಳ ಎಚ್ಚರಿಕೆ!
ಹಾಗೇನೆ, ನೀವು ಏನಾದರೂ ಸಾಧನೆ ಮಾಡಬೇಕಾದರೆ ಪ್ರಕೃತಿ ಬೇದ - ಬಾವ ಮಾಡದೇ ಎಲ್ಲರಿಗೂ ಗಾಳಿ, ನೀರು, ಬೆಳಕು ಎಲ್ಲ ಸಾಮಾನ್ಯವಾಗಿ ಸಮಾನವಾಗಿ ನೀಡಿರುತ್ತದೆ. ಅದನ್ನ ಹೇಗೆ ಯಾರ ಬಳಸಿಕೊಂಡು ಗುರಿ ಮುಟ್ಟಿರುತ್ತಾರೆ ಅನ್ನುವುದನ್ನ ಫಲಿತಾಂಶವೇ ಹೇಳುತ್ತದ. ಹಾಗಾದ್ರೇ ಸಕ್ಸಸ್ ಫೇಲ್ ಆಗಲು ಕಾರಣವಾದರೂ ಏನು ಅಂತಾ ನೋಡಿ.
* ಎಲ್ಲರಿಗೂ ಆಗುವುದೇ ನಮಗೂ ಆಗುತ್ತೆ. ಈ ಮಾತು ಕೇಳಿಯೇ ಇರುತ್ತೀರಾ? ಬಸ್‌ನಲ್ಲಿ ಹೋಗುವಾಗ ಆಕ್ಸಿಡೆಂಟ್ ಆಗಿಬಿಟ್ಟರೆ ಹತ್ತು ಜನಕ್ಕೆ ಆಗೊದ್ ನಮಗೂ ಆಗುತ್ತೆ ಬಿಡು ಅಂತಾ ಹೋಗುವವರುಂಟು. ಮತ್ತೊಂದೆಡೆ ರಿಸ್ಕ್ ತಗೊಂಡು ಹೊಸದನ್ನ ಹುಡುಕಲು ಯಾರಿಗೂ ಇಷ್ಟ ಇಲ್ಲ. ಕಾರಣ ಇಷ್ಟೇ , ಈಗಾಗಲೇ ಯಶಸ್ಸು ಕಂಡವರಿಗೆ ದಾರಿ ಗೊತ್ತಿರುತ್ತದೆ. ಅದನ್ನೇ ಫಾಲೋ ಮಾಡಿದರೆ ಆಯ್ತು ಅಂತಾ ಬ್ಲ್ಯಾಕ್ ಆಗಿ ಫಾಲೋ ಮಾಡಿಬಿಡುತ್ತಾರೆ. ಆಗ ಒತ್ತಡ , ಪೈಪೋಟಿ ಹೆಚ್ಚಾಗಿ ಯಶಸ್ಸು ಪೂರ್ಣವಾಗಿ ಸಿಗದೇ ಎಲ್ಲರಿಗೂ ಹಂಚಿ ಹೋಗುತ್ತದೆ. ಹೋಟೆಲ್ ಕಾಸು ಮಾಡುತ್ತಿದ್ದರೇ ಅದೇ ರೋಡ್‌ನಲ್ಲಿ ಮತ್ತಷ್ಟು ಹೋಟೆಲ್ ಮಾಡುವುದು . ಗ್ರಾಹಕರು ಒಂದು ಕಡೆ ಬಾರದೇ ಎಲ್ಲ ಕಡೆ ಹರಿದು ಹಂಚಿಹೋಗಿ ಲಾಭ ಇಳಿಮುಖವಾಗೊದ್ ಪಕ್ಕಾ ಆಗಿದೆ. ಕರ್ನಾಟಕ ಸಿಎಂ ಕಚೇರಿಯ ಕಾಫಿ, ತಿಂಡಿ ಖರ್ಚಿನ ವಿವಾದ: ಸಿ.ಟಿ. ರವಿಯ ಆರೋಪಗಳು..!
*ಶ್ರೀಮಂತರನ್ನೇ ಫಾಲೋ ಮಾಡುವುದು . ಅವರ ನೆಟ್ ವರ್ಕ್ , ಕಂಟೆಕ್ಟ್ , ನೆಟ್ ವರ್ತ್ ಯಾವುದು ಸರಿಯಾಗಿ ತಿಳಿದುಕೊಳ್ಳಲ್ಲ. ಬದಲಾಗಿ ,ಏಕಾ್ಕಿ ಶ್ರೀಮಂತರನ್ನ ಅವರ ಸಾಧನೆಯ ಹಾದಿಯನ್ನ ಹಿಂಬಾಲಿಸುವುದು . ನೆನಪಿರಲಿ ಶ್ರೀಮಂತರರಾಗಲು ಒಂದು ಅವಶ್ಯಕ ಅಂಶ , ಪರಿಸ್ಥಿತಿ ಸಹಕರಿಸದಿದ್ದರೆ ಇದ್ದ ಸ್ಥಿತಿಗಿಂತ ಕೆಳಗೆ ಇಳಿಯೊದಾದ್ರಲಿ ಅನುಮಾನವೇ ಬ್ಯಾಡ.
ಯಶಸ್ಸು ಬೇಕಾದರೇ ಮೊದಲು ಗುರಿ ಸೆಟ್ ಮಾಡಿಕೊಳ್ಳಿ. ಆ ದಾರಿಯಲ್ಲಿ ಯಾರು ಯಶಸ್ವಿಯಾಗಿದ್ದಾರೆ ಎನ್ನುವುದನ್ನ ಕೇಳಿ ಸಾಧ್ಯವಾದರೆ ಅವರಿಂದ ಕಷ್ಟದ ಬಗ್ಗೆಯೇ ಹೆಚ್ಚು ತಿಳಿದುಕೊಳ್ಳಿ, ಪರಿಹಾರವನ್ನು ಕೇಳಿ ಅರ್ಥ ಮಾಡಿಕೊಳ್ಳಿರಿ. ಸಂಬಂಧಿತ ಪುಸ್ತಕಗಳನ್ನ ಅಧ್ಯಯನ ಮಾಡಿ , ಗುರು-ಹಿರಿಯರನ್ನ ಕೇಳಿ ತಿಳಿದುಕೊಳ್ಳಿ.ತುಮಕೂರು: ನಿಗೂಢವಾಗಿ 20 ನವಿಲುಗಳ ಸಾವು, ತನಿಖೆಗೆ ಆದೇಶ
ನಿನ್ನ ಸೋಲುಗಳಿಗೆ ಹೆದರಬೇಡ - ಪದೇ ಪದೇ ಪ್ರಯತ್ನಿಸಿ ಯಶಸ್ವಿಯಾಗಿ. ತಪ್ಪುಗಳ ಬಗ್ಗೆ ಚರ್ಚಿಸಿ ಪಾಠ ಕಲಿಯಿರಿ. ಆದರೆ ಸಮಯ ವ್ಯರ್ಥ ಮಾಡುವ ಮೈಗಳರಾಗಬೇಡಿ. ದುಡ್ಡು ಸಂಪಾದಿಸಬೇಕಾದರೆ ನಿರಂತರ ಶ್ರಮ ಬೇಕಿದೆ. ಪ್ರಕೃತಿಯಂತೂ ಬೇದ- ಬಾವ ಮಾಡದೇ ಎಲ್ಲ ನೀಡುತ್ತಿದೆ .ಉಪಯೋಗಿಸಿ ಸಿರಿವಂತರಾಗಿ.