ಇಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಆಂತರಿಕ ಬದಲಾವಣೆಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಹೂಡಿಕೆ ಮಾಡಲಿಚ್ಚಿಸುವವರಗೆ ಸ್ವಲ್ಪ ನಿರಾಸೆ ತಂದಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಏರಿಕೆ ಕಂಡಿರುವುದು ವಿಶೇಷವಾಗಿದೆ. ಟ್ರಂಪ್‌ನ 50% ಸುಂಕ ಏರಿಕೆ.ಡಾಲರ್ ಮೌಲ್ಯದಲ್ಲಿ ಕುಸಿತ ಹೀಗೆ ಇತ್ಯಾದಿಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತಕ್ಕಕೆ ಕಾರಣವಾಗಿದೆ. ಹಾಗೇ ಇದು ಚಿನ್ನದ ಹೂಡಿಕೆ ಮಾಡುವವರಿಗೆ ಸ್ವಲ್ಪ ಮಟ್ಟದ ನಿರಾಸೆ ಅನ್ನು ಉಂಟುಮಾಡುತ್ತಿದೆ.
24 ಕ್ಯಾರಟ್ ಚಿನ್ನದ ದರ:
ಇಂದು 24 ಕ್ಯಾರಟ್ (24 CARAT GOLD) ಚಿನ್ನದ ಒಂದು ಗ್ರಾಂ ಬೆಲೆ ₹ 10,331 ಇದೆ. ನಿನ್ನೆ ಇದೇ ದರ ₹10,255ಇದ್ದದ್ದು, ಇಂದಿಗೆ ₹76 ರೂಪಾಯಿ ಏರಿಕೆಯಾಗಿದೆ. 10 ಗ್ರಾಂಗೆ ₹1,03,310 ಮತ್ತು 100 ಗ್ರಾಂಗೆ ₹10,33,100 ದರ ನಿಗದಿಯಾಗಿದ್ದು, ಕ್ರಮವಾಗಿ ₹760 ಮತ್ತು ₹7,600ರೂಪಾಯಿ ಏರಿಕೆ ಕಂಡುಬಂದಿದೆ. ಇದು ಶುದ್ಧ ಚಿನ್ನದ (PURE GOLD) ಹೂಡಿಕೆ ಮಾಡಲಿಚ್ಚಿಸುವವರಿಗೆ ಸ್ಪಲ್ಪ ನಿರಾಸೆ ತಂದಿದೆ.
22 ಕ್ಯಾರಟ್ ಚಿನ್ನದ ದರ:
22 ಕ್ಯಾರಟ್ ಚಿನ್ನವು (22 CARAT GOLD) ದಿನನಿತ್ಯದ ಬಳಕೆಯ ಚಿನ್ನವಾಗಿ ಪರಿಗಣಿಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹9,470 ರೂಪಾಯಿ ಆಗಿದ್ದು, ನಿನ್ನೆಗಿಂತ ₹70 ರೂಪಾಯಿ ಏರಿಕೆ ಕಂಡಿದೆ. (HIGH IN PRICE) 10 ಗ್ರಾಂ ದರ ₹94,700 ಮತ್ತು 100 ಗ್ರಾಂ ದರ ₹9,47,000 ಆಗಿದ್ದು, ಕ್ರಮವಾಗಿ ₹700 ರೂಪಾಯಿ ಮತ್ತು ₹7,000ರೂಪಾಯಿ ಏರಿಕೆ ಕಂಡುಬಂದಿದೆ.
Symbol Premium Men's Wrinkle-Resistant Regular Fit Cotton Formal Shirt
18 ಕ್ಯಾರಟ್ ಚಿನ್ನದ ದರ:
18 ಕ್ಯಾರಟ್ ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹7,749 ಆಗಿದ್ದು ₹58 ರೂಪಾಯಿ ಏರಿಕೆಯಾಗಿದೆ. 10 ಗ್ರಾಂಗೆ ₹77,490 ರೂಪಾಯಿ ಆಗಿದೆ ಹಾಗೂ 100 ಗ್ರಾಂಗೆ ₹7,74,900ದರ ಏರಿಕೆಯು ಕ್ರಮವಾಗಿ ₹580 ಮತ್ತು ₹5,800 ರೂಪಾಯಿ ಏರಿಕೆ ಆಗಿದೆ.
ಬೆಳ್ಳಿ ದರ: ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದರ ಸ್ಥಿರತೆ ಕಂಡಿದೆ
ಇಂದಿನ ಬೆಳ್ಳಿ ಮೌಲ್ಯವು ನಿನ್ನೆಗೂ ಹೋಲಿಸಿದರೆ ಒಂದು ರೂಪಾಯಿ ಏರಿಕೆ ಕಂಡಿದೆ.ನಿನ್ನೆಗೆ ಇಂದಿಗೆ ಹೋಲಿಸಿದರೆ 1 ಗ್ರಾಂ ಬೆಳ್ಳಿಯಲ್ಲಿ ₹117ರೂಪಾಯಿ, 10 ಗ್ರಾಂ ಬೆಳ್ಳಿಯ ಬೆಲೆ ₹1,170 ರೂಪಾಯಿ ಆಗಿದೆ. 1 ಗ್ರಾಂ ಬೆಳ್ಳಿ ₹117, 10 ಗ್ರಾಂ ₹1,170, 100 ಗ್ರಾಂ ₹11,700 ಹಾಗೂ 1 ಕೆ.ಜಿ ಬೆಳ್ಳಿ ₹1,17,000 ಆಗಿದೆ.
ಕೇತಗಾನಹಳ್ಳಿ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಸಲ್ಲಿಯಾಗಿದ್ದ ಅರ್ಜಿ ಮುಂದೂಡಿದ ಹೈಕೋರ್ಟ್
ಇದನ್ನೂ ಓದಿ: ಕೇತಗಾನಹಳ್ಳಿ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಸಲ್ಲಿಯಾಗಿದ್ದ ಅರ್ಜಿ ಮುಂದೂಡಿದ ಹೈಕೋರ್ಟ್
ಆರ್ಥಿಕ ಹಿನ್ನಲೆ ಮತ್ತು ಮಾರುಕಟ್ಟೆಯ ಸ್ಥಿತಿ:
ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬಲದಿಂದ ಚಿನ್ನದ ಬೆಲೆಗೆ ಒತ್ತಡ ಉಂಟಾಗಿದ್ದು, ಜಾಗತಿಕ ರಾಜಕೀಯ ಅಸ್ಥಿರತೆಗಳು ಹೂಡಿಕೆದಾರರನ್ನು ಚಿನ್ನದಿಂದ ದೂರ ಇರಿಸುತ್ತಿವೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಕೂಡ ಈ ಏರಿಕೆಗೆ ಕಾರಣವಾಗಿರುವ ಸಾಧ್ಯತೆ ಇದೆ.
ಹೂಡಿಕೆ ಸಮಯವೇಕೆ?
ಇಂದಿನ ಬೆಲೆ ಏರಿಕೆಯನ್ನು ಗಮನಿಸಿದರೆ, ಚಿನ್ನ ಖರೀದಿಗೆ ತಾತ್ಕಾಲಿಕ ಅವಕಾಶವೆಂಬಂತೆ ಕಂಡುಬರುತ್ತದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಸ್ಥಿತಿ ಮತ್ತು ಜಾಗತಿಕ ಬೆಳವಣಿಗೆಗಳು ಈ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಸಮಚಿತ್ತವಾಗಿ ಹೂಡಿಕೆ ನಿರ್ಧಾರ ಕೈಗೊಳ್ಳುವುದು ಸೂಕ್ತ.