Skip to main content
ವಿಡಿಯೋ
1/2
science

ಬ್ಲ್ಯಾಕ್ ಹೋಲ್: ಬ್ರಹ್ಮಾಂಡದ ಅತೀ ಕತ್ತಲೆಯ ಬಾಗಿಲು, ಅಲ್ಲಿ ಕಾಲ ಮತ್ತು ಸ್ಥಳ ಕಾಣೆಯಾಗುತ್ತವೆ!

By Varsha T M
ಬ್ಲ್ಯಾಕ್ ಹೋಲ್: ಬ್ರಹ್ಮಾಂಡದ ಅತೀ ಕತ್ತಲೆಯ ಬಾಗಿಲು, ಅಲ್ಲಿ ಕಾಲ ಮತ್ತು ಸ್ಥಳ ಕಾಣೆಯಾಗುತ್ತವೆ!

ಬ್ಲ್ಯಾಕ್ ಹೋಲ್‌ಗಳು ಕೇವಲ ಭಯ ಹುಟ್ಟಿಸುವ ಬ್ರಹ್ಮಾಂಡದ ವಸ್ತುಗಳಲ್ಲ; ಅವು ಗುರತ್ವ ಆಕರ್ಷಣೆಯ ಅತೀ ತೀವ್ರತೆಯನ್ನು ತೋರಿಸುವ ಮತ್ತು ಬ್ರಹ್ಮಾಂಡದ ಮೂಲಭೂತ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಅದ್ಭುತ ಬಾಹ್ಯಾಕಾಶ ಘಟನೆಗಳಾಗಿವೆ.

ಬ್ಲ್ಯಾಕ್ ಹೋಲ್ ಎಂಬ ಪದ ಕೇಳುತ್ತಿದ್ದಂತೆಯೇ ನಮ್ಮ ಮನಸ್ಸಿನಲ್ಲಿ ಒಂದು ಅತೀವ ರಹಸ್ಯಮಯ ಹಾಗೂ ಭಯಾನಕ ದೃಶ್ಯ ಮೂಡುತ್ತದೆ. ಇದು ಬ್ರಹ್ಮಾಂಡದ ಅತ್ಯಂತ ದಟ್ಟ ಮತ್ತು ಗಾಢವಾದ ವಸ್ತು. ಭೌತಶಾಸ್ತ್ರದ ಪ್ರಕಾರ, ಬ್ಲ್ಯಾಕ್ ಹೋಲ್‌ಗಳು ಅಷ್ಟು ಬಲವಾದ ಗುರುತ್ವ ಆಕರ್ಷಣ ಶಕ್ತಿ ಹೊಂದಿರುತ್ತವೆ, ಅಲ್ಲಿ ಏನೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಬೆಳಕೂ ಸಹ!

Xiaomi Pad 7 |Qualcomm Snapdragon 7+ Gen 3 |28.35cm(11.16") Display |8GB, 128GB |3.2K CrystalRes Display |HyperOS 2 |68 Billion+ Colours |Dolby Vision Atmos |Quad Speakers |Wi-Fi 6 |Graphite Grey Brand: Xiaomi

ಬ್ಲ್ಯಾಕ್ ಹೋಲ್ ಹೇಗೆ ಉಂಟಾಗುತ್ತದೆ?

ಬ್ಲ್ಯಾಕ್ ಹೋಲ್ ಸಾಮಾನ್ಯವಾಗಿ ಭಾರವಾದ ನಕ್ಷತ್ರಗಳ ಸಾವಿನಿಂದ ಉಂಟಾಗುತ್ತದೆ. ಒಂದು ನಕ್ಷತ್ರ ತನ್ನ ಇಂಧನವನ್ನು ಬಳಸಿ ಮುಗಿಸಿದಾಗ, ಅದು ತನ್ನ ಭಾರದಿಂದ ಕುಸಿದು ಸಿಂಗ್ಯುಲಾರಿಟಿ (Singularity) ಎಂಬ ಅತೀ ಚಿಕ್ಕ, ಅನಂತ ಗಾತ್ರದ ದಟ್ಟ ಬಿಂದುವಾಗಿ ಮಾರ್ಪಡುತ್ತದೆ. ಇದರ ಸುತ್ತಲಿರುವ ಪ್ರದೇಶವನ್ನು ಈವೆಂಟ್ ಹೋರೈಸನ್ (Event Horizon) ಎಂದು ಕರೆಯುತ್ತಾರೆ. ಈವೆಂಟ್ ಹೋರೈಸನ್ ದಾಟಿದರೆ, ಬೆಳಕು ಸಹ ಹಿಂತಿರುಗಲಾರದು.

ISRO ರಾಕೆಟ್ ಎಂಜಿನಿಯರಿಂಗ್: ಭಾರತದ ಹೆಮ್ಮೆ. By Varsha T M

ಐನ್‌ಸ್ಟೈನ್ ಅವರ ಸಾಮಾನ್ಯ ಆಪೇಕ್ಷಿಕತೆಯ ಸಿದ್ಧಾಂತ(General Theory of Relativity) ಪ್ರಕಾರ, ಬ್ಲ್ಯಾಕ್ ಹೋಲ್‌ಗಳ ಹತ್ತಿರ ಕಾಲ ನಿಧಾನಗತಿಯಲ್ಲಿ ಸಾಗುತ್ತದೆ. ಒಂದು ವ್ಯಕ್ತಿ ಬ್ಲ್ಯಾಕ್ ಹೋಲ್‌ಗೆ ಹತ್ತಿರ ಹೋದರೆ, ಅವನಿಗೆ ಕಾಲ ನಿಧಾನವಾಗುತ್ತಿರುವ ಅನುಭವವಾಗುತ್ತದೆ, ಆದರೆ ದೂರದಿಂದ ನೋಡುತ್ತಿರುವವರಿಗೆ ಅವನು ಸಮಯದಲ್ಲಿ "ಹೊರಟಂತೆ" ಕಾಣುತ್ತಾನೆ.

Interstellar ಚಿತ್ರದ ವೈಜ್ಞಾನಿಕ ನೈಜತೆ

ಕ್ರಿಸ್ಟಫರ್ ನೋಲನ್ ಅವರ Interstellar ಚಿತ್ರದಲ್ಲಿ ಬ್ಲ್ಯಾಕ್ ಹೋಲ್ "ಗಾರ್ಗಾಂಟುವಾ" (Gargantua) ಪ್ರಮುಖ ಪಾತ್ರವಹಿಸುತ್ತದೆ. ಚಿತ್ರದಲ್ಲಿನ ಒಂದು ಪ್ರಸಿದ್ಧ ದೃಶ್ಯದಲ್ಲಿ, ನಾಯಕ ಗಾರ್ಗಾಂಟುವಾ ಬ್ಲ್ಯಾಕ್ ಹೋಲ್ ಹತ್ತಿರದ ಒಂದು ಗ್ರಹಕ್ಕೆ ಹೋಗುತ್ತಾರೆ. ಅಲ್ಲಿ ಅವರು ಕೇವಲ 3 ಗಂಟೆ ಕಳೆದರೂ, ಭೂಮಿಯ ಮೇಲೆ 27 ವರ್ಷಗಳು ಕಳೆದಿರುತ್ತವೆ.

ಇದು ನಿಜಕ್ಕೂ ಆಪೇಕ್ಷಿಕತೆಯ ಸಿದ್ಧಾಂತಕ್ಕೆ ಹೊಂದಿಕೆಯಾಗುತ್ತದೆ. ಬ್ಲ್ಯಾಕ್ ಹೋಲ್‌ನ ಭಾರವಾದ ಗುರ್ತುವಿಕೆಯಿಂದಾಗಿ, ಆ ಗ್ರಹದಲ್ಲಿ ಕಾಲ ನಿಧಾನವಾಗಿ ಹರಿಯುತ್ತದೆ, ಇದನ್ನು Time Dilation ಎಂದು ಕರೆಯುತ್ತಾರೆ.

ನೋಲನ್, ಈ ದೃಶ್ಯವನ್ನು ನಿಖರವಾಗಿ ತೋರಿಸಲು, ಭೌತಶಾಸ್ತ್ರಜ್ಞ ಕಿಪ್ ಥೋನ್(Kip Stephen Thorne) ಅವರ ಸಲಹೆ ಪಡೆದಿದ್ದರು. ಗಾರ್ಗಾಂಟುವಾ ಬ್ಲ್ಯಾಕ್ ಹೋಲ್‌ನ ದೃಶ್ಯ Interstellar ಸಿನಿಮಾದಲ್ಲಿ ವಿಜ್ಞಾನಕ್ಕೆ ಅತ್ಯಂತ ನಿಖರವಾದ ದೃಶ್ಯಚಿತ್ರಣವೆಂದು ಪರಿಗಣಿಸಲಾಗಿದೆ.

ಬ್ಲ್ಯಾಕ್ ಹೋಲ್‌ಗಳು ಕೇವಲ ಭಯ ಹುಟ್ಟಿಸುವ ವಸ್ತುಗಳಲ್ಲ; ಅವು ಬ್ರಹ್ಮಾಂಡದ ಮೂಲಭೂತ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಸಾಧನಗಳಾಗಿವೆ. ಸಿಂಗ್ಯುಲಾರಿಟಿಯೊಳಗೆ, ನಮಗೆ ತಿಳಿದಿರುವ ಭೌತಶಾಸ್ತ್ರದ ನಿಯಮಗಳು ಕಾರ್ಯನಿರ್ವಹಿಸುವುದಿಲ್ಲ. ಇದರಿಂದ, ಭವಿಷ್ಯದಲ್ಲಿ ಕ್ವಾಂಟಂ ಗ್ರಾವಿಟಿ (Quantum Gravity) ಹಾಗೂ ಇತರ ನೂತನ ಸಿದ್ಧಾಂತಗಳನ್ನು ಕಂಡುಹಿಡಿಯಲು ಸಾಧ್ಯವಾಗಬಹುದು.

ಬ್ಲ್ಯಾಕ್ ಹೋಲ್ ಎಂದರೆ ಬ್ರಹ್ಮಾಂಡದ ಅತೀ ಕತ್ತಲೆಯ ಬಾಗಿಲು, ಅಲ್ಲಿ ಕಾಲ ಮತ್ತು ಸ್ಥಳದ ಅರ್ಥವೇ ಮಾಯವಾಗುತ್ತದೆ. Interstellar ಚಿತ್ರದಂತೆ, ವಿಜ್ಞಾನ ಮತ್ತು ಕಲ್ಪನೆಯ ಸಂಯೋಜನೆ ನಮಗೆ ಈ ಅಸಾಧ್ಯ ಲೋಕವನ್ನು ನೋಡುವ ಒಂದು ಕಿಟಕಿಯನ್ನು ನೀಡುತ್ತದೆ. ಇಂದಿಗೂ, ಬ್ಲ್ಯಾಕ್ ಹೋಲ್‌ಗಳ ರಹಸ್ಯವನ್ನು ಸಂಪೂರ್ಣವಾಗಿ ಪರಿಹರಿಸಲಾಗಿಲ್ಲ, ಆದರೆ ಪ್ರತಿ ಹೊಸ ಕಂಡುಹಿಡಿಯುವಿಕೆ ನಮ್ಮನ್ನು ಬ್ರಹ್ಮಾಂಡದ ಸತ್ಯದತ್ತ ಒಂದು ಹೆಜ್ಜೆ ಹತ್ತಿರ ಕರೆದೊಯ್ಯುತ್ತದೆ.