Skip to main content
ವಿಡಿಯೋ
1/2
technology

AI ಯುಗದಲ್ಲಿ ಬದುಕಲು, ಅದನ್ನು ಕಲಿಯುವುದು ಮಾತ್ರ ಮಾರ್ಗ!

By Varsha T M
AI ಯುಗದಲ್ಲಿ ಬದುಕಲು, ಅದನ್ನು ಕಲಿಯುವುದು ಮಾತ್ರ ಮಾರ್ಗ!

ಇಂದು ನಾವು “ಡಿಜಿಟಲ್ ಯುಗ” ಎಂದು ಕರೆಯುವ ಕಾಲದಲ್ಲಿ ಬದುಕುತ್ತಿದ್ದೇವೆ. ಆದರೆ ಈ ಡಿಜಿಟಲ್ ಯುಗವನ್ನು ಇನ್ನೂ ವೇಗವಾಗಿ, ಬದಲಾವಣೆಗಳಿಂದ ತುಂಬಿದ AI ಯುಗ (Artificial Intelligence Era) ಕಡೆಗೆ ತಳ್ಳುತ್ತಿರುವುದು ನಮ್ಮ ಕಾಲದ ದೊಡ್ಡ ವಾಸ್ತವ. AI ಈಗ ಕೇವಲ ತಂತ್ರಜ್ಞಾನ ಜಗತ್ತಿನ ಉಪಕರಣವಲ್ಲ ಅದು ನಮ್ಮ ಉದ್ಯೋಗ, ಜೀವನಶೈಲಿ, ವ್ಯವಹಾರ, ಶಿಕ್ಷಣ, ವೈದ್ಯಕೀಯ ಮತ್ತು ಕಲೆಗಳವರೆಗೂ ವ್ಯಾಪಿಸಿಕೊಂಡಿರುವ ಶಕ್ತಿ.

ಇಂದು ನಾವು “ಡಿಜಿಟಲ್ ಯುಗ” ಎಂದು ಕರೆಯುವ ಕಾಲದಲ್ಲಿ ಬದುಕುತ್ತಿದ್ದೇವೆ. ಆದರೆ ಈ ಡಿಜಿಟಲ್ ಯುಗವನ್ನು ಇನ್ನೂ ವೇಗವಾಗಿ, ಬದಲಾವಣೆಗಳಿಂದ ತುಂಬಿದ AI ಯುಗ (Artificial Intelligence Era) ಕಡೆಗೆ ತಳ್ಳುತ್ತಿರುವುದು ನಮ್ಮ ಕಾಲದ ದೊಡ್ಡ ವಾಸ್ತವ. AI ಈಗ ಕೇವಲ ತಂತ್ರಜ್ಞಾನ ಜಗತ್ತಿನ ಉಪಕರಣವಲ್ಲ ಅದು ನಮ್ಮ ಉದ್ಯೋಗ, ಜೀವನಶೈಲಿ, ವ್ಯವಹಾರ, ಶಿಕ್ಷಣ, ವೈದ್ಯಕೀಯ ಮತ್ತು ಕಲೆಗಳವರೆಗೂ ವ್ಯಾಪಿಸಿಕೊಂಡಿರುವ ಶಕ್ತಿ.

ಆದರೆ, AI ಶಕ್ತಿಯ ಬೆಳವಣಿಗೆಯೊಂದಿಗೆ ಒಂದು ಭಯವೂ ಬೆಳೆದಿದೆ “ನಮ್ಮ ಕೆಲಸಗಳನ್ನು AI ಕಸಿದುಕೊಳ್ಳಬಹುದೇ?” ಎಂಬುದು. ಹೌದು, ಕೆಲಸಂದರ್ಭಗಳಲ್ಲಿ ಇದು ಸತ್ಯ. 2023–2025 ಅವಧಿಯಲ್ಲಿ ವಿಶ್ವದ ಹಲವು ಕಂಪನಿಗಳು, ವಿಶೇಷವಾಗಿ ತಂತ್ರಜ್ಞಾನ ಕ್ಷೇತ್ರದವು, ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆರವುಗೊಳಿಸಿದ್ದವು. ಉದಾಹರಣೆಗೆ, TCS ಸೇರಿದಂತೆ ಭಾರತದ ಪ್ರಮುಖ ಐಟಿ ಕಂಪನಿಗಳು ಕಾರ್ಯಾಚರಣಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು AI, Automation, Machine Learning ಬಳಸುವ ದಿಸೆಯಲ್ಲಿ ಮರುಸಂರಚನೆ ಮಾಡಿವೆ. ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಮೊದಲಾದ ಜಾಗತಿಕ ದೈತ್ಯಗಳು ಸಹ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ಬಿಡಿಸಿರುವ ಉದಾಹರಣೆಗಳು ನಮಗೆ ಗೊತ್ತಿವೆ.

Samsung Galaxy M36 5G (Velvet Black, 6 GB RAM, 128 GB Storage)| Circle to Search| Google Gemini| Corning Gorilla Glass Victus+| 7.7mm Slim| AI Enhanced 50 MP OIS Triple Camera| Unmatched Nightography

ಈ ಬದಲಾವಣೆಯ ಹಿಂದೆ ಒಂದು ಮುಖ್ಯ ಕಾರಣವೆಂದರೆ ಪುನರಾವರ್ತಿತ, ನಿಯಮಿತ ಮತ್ತು ಸುಲಭವಾಗಿ ಸ್ವಯಂಕ್ರಿಯಗೊಳಿಸಬಹುದಾದ ಕೆಲಸಗಳನ್ನು AI ಹೆಚ್ಚು ವೇಗವಾಗಿ, ಕಡಿಮೆ ವೆಚ್ಚದಲ್ಲಿ ಮಾಡಬಲ್ಲದು. ಉದಾಹರಣೆಗೆ, ಡೇಟಾ ಎಂಟ್ರಿ, ಸರಳ ಕೋಡ್ ಬರೆಯುವುದು, ಮೂಲಭೂತ ಗ್ರಾಹಕ ಬೆಂಬಲ(Customer Support) ಮುಂತಾದ ಕಾರ್ಯಗಳನ್ನು ಈಗ AI ಸುಲಭವಾಗಿ ನಿರ್ವಹಿಸುತ್ತದೆ. ಇದರ ಪರಿಣಾಮವಾಗಿ, ಈ ಕೆಲಸಗಳನ್ನು ನಿರ್ವಹಿಸುತ್ತಿದ್ದ ಹಲವರಿಗೆ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಆದರೆ ಇಲ್ಲಿ ಒಂದು ಮುಖ್ಯ ಪಾಠವಿದೆ AI ಅನ್ನು ಭಯಪಡುವುದರಿಂದ ಉದ್ಯೋಗ ಉಳಿಯುವುದಿಲ್ಲ, ಅದನ್ನು ಕಲಿಯುವುದರಿಂದ ಮಾತ್ರ ಭವಿಷ್ಯ ಸುರಕ್ಷಿತವಾಗುತ್ತದೆ. AI ಅನ್ನು ಬಳಸುವ, ನಿಯಂತ್ರಿಸುವ ಮತ್ತು ಅದರಿಂದ ಹೊಸ ಉತ್ಪನ್ನ–ಸೇವೆಗಳ ಅಭಿವೃದ್ಧಿ ಮಾಡುವ ಕೌಶಲ್ಯ ಹೊಂದಿರುವವರು ಯಾವಾಗಲೂ ಬೇಡಿಕೆಯಲ್ಲಿರುತ್ತಾರೆ.

AI ಕಲಿಯುವುದರಿಂದ ಹಲವು ಲಾಭಗಳಿವೆ: ಹೊಸ ಉದ್ಯೋಗಾವಕಾಶಗಳು – AI, Data Science, Cloud Computing, Cybersecurity ಮುಂತಾದ ಕ್ಷೇತ್ರಗಳಲ್ಲಿ ಹೊಸ ಹೊಸ ಹುದ್ದೆಗಳು ಪ್ರತಿದಿನ ಬರುತ್ತಿವೆ. ಉದ್ಯಮ ಆರಂಭಿಸುವ ಅವಕಾಶ – AI ಉಪಕರಣಗಳನ್ನು ಬಳಸಿ ಸ್ವಂತ ವ್ಯವಹಾರ, ಫ್ರೀಲಾನ್ಸ್ ಸೇವೆಗಳು, ಡಿಜಿಟಲ್ ಮಾರ್ಕೆಟಿಂಗ್ ಮುಂತಾದಲ್ಲಿ ವೇಗವಾಗಿ ಬೆಳೆಯಬಹುದು.

ಬ್ಲ್ಯಾಕ್ ಹೋಲ್: ಬ್ರಹ್ಮಾಂಡದ ಅತೀ ಕತ್ತಲೆಯ ಬಾಗಿಲು, ಅಲ್ಲಿ ಕಾಲ ಮತ್ತು ಸ್ಥಳ ಕಾಣೆಯಾಗುತ್ತವೆ!

ಉದ್ಯೋಗದಲ್ಲಿ ಮುಂಚೂಣಿ – ಈಗಾಗಲೇ ಕೆಲಸ ಮಾಡುತ್ತಿರುವವರು AI ಕೌಶಲ್ಯ ಕಲಿತರೆ, ತಮ್ಮ ತಂಡದಲ್ಲಿ ತಾಂತ್ರಿಕ ನಾಯಕತ್ವ ಪಡೆಯಲು ಸಾಧ್ಯ. ಆರ್ಥಿಕ ಸ್ವಾತಂತ್ರ್ಯ – AI ಆಧಾರಿತ ಸೇವೆಗಳು ಕಡಿಮೆ ವೆಚ್ಚದಲ್ಲಿ ಹೆಚ್ಚು ಜನರಿಗೆ ತಲುಪುವಂತಾಗಿರುವುದರಿಂದ, ವೈಯಕ್ತಿಕ ಆದಾಯದ ಮಾರ್ಗಗಳು ಹೆಚ್ಚುತ್ತವೆ.

TCSಯಲ್ಲಿಯೇ ಕೆಲಸ ಮಾಡುವ ಕೆಲವರು AI Automation ಪ್ರಾಜೆಕ್ಟ್‌ಗಳಲ್ಲಿ ತಮ್ಮನ್ನು ತಾವು ಅಪ್‌ಸ್ಕಿಲ್ ಮಾಡಿಕೊಂಡರು. Automation, AI Model Development ಮತ್ತು Data Analysis ಕೌಶಲ್ಯಗಳನ್ನು ಕಲಿತ ಅವರು, ಕಂಪನಿಯೊಳಗೆ ಮತ್ತಷ್ಟು ಮುಖ್ಯ ಹುದ್ದೆಗಳಿಗೆ ಬದಲಾಗುವ ಅವಕಾಶ ಪಡೆದರು. ಇದರಿಂದ ಅವರು layoffಗೆ ಒಳಗಾಗದೆ, ತಮ್ಮ ವೇತನವನ್ನೂ ಹೆಚ್ಚಿಸಿಕೊಂಡರು.

AI ಯುಗವು ಒಂದು ಭಯಾನಕ ಅಲೆ ಅಲ್ಲ; ಅದು ಹೊಸ ಅವಕಾಶಗಳ ಅಲೆ. ಈ ಅಲೆಯಲ್ಲಿ ತೇಲಲು ನಾವು ಕಲಿಯಬೇಕು, ಹೊಂದಿಕೊಳ್ಳಬೇಕು, ಬೆಳಿಯಬೇಕು. AI ನಿಮ್ಮ ಕೆಲಸವನ್ನು ತೆಗೆದುಕೊಳ್ಳಬಹುದಾದರೂ, AI ಜೊತೆ ಕೆಲಸ ಮಾಡುವ ಕೌಶಲ್ಯ ಹೊಂದಿದರೆ, ನೀವು ಭವಿಷ್ಯವನ್ನು ಮಾತ್ರ ಉಳಿಸಿಕೊಳ್ಳುವುದಲ್ಲ ಅದನ್ನು ನಿರ್ಮಿಸುವವರಲ್ಲೊಬ್ಬರಾಗಬಹುದು.