ಅಮೆರಿಕ - ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (TRUMP) ಸುಂಕ ಏರಿಕೆ ಪ್ರಸ್ತಾಪಕ್ಕೆ ಸ್ವದೇಶದಲ್ಲೇ ವಿರೋಧದ ಅಪಸ್ವರ ಎದ್ದಿದೆ. ಹೌದು , ಅಮೆರಿಕಾ (AMERICA) ಮಾಜಿ ಉಪಾಧ್ಯಕ್ಷ ಮೈಕ್ ಪೆನ್ಸ್ , ಟ್ರಂಪ್ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ.
ಭಾರತದ ಸರಕುಗಳ ಮೇಲೆ ಶೇ. 50 ರಷ್ಟು ಸುಂಕ ಏರಿಕೆ ಅಮೆರಿಕದ ಕಂಪನಿ (COMPANY) ಹಾಗೂ ಗ್ರಾಹಕರಿಗೆ (CUSTOMERS) ಹಾನಿಕಾರಕ ಎಂದು ಟೀಕಿಸಿದ್ದಾರೆ.ಇದೇ ವೇಳೆ ಪೋರ್ಡ್ನ ಆರ್ಥಿಕ ನಷ್ಟವನ್ನ ಉದಾಹರಿಸಿ , ಸುಂಕಗಳು ಅಭಿವೃದ್ಧಿ ಬದಲಾಗಿ ನಷ್ಟಕ್ಕೆ ದಾರಿ ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ.
X ಖಾತೆಯಲ್ಲಿ ಏನಿದೆ ಎಂದು ನೋಡಿ!
ಬೆಲೆಯೇರಿಕೆಯಿಂದ 'ಅಮೆರಿಕದ ಕಂಪನಿಗಳು ಮತ್ತು ಗ್ರಾಹಕರೇ ಸುಂಕಗಳ ಬೆಲೆಯನ್ನು ಭರಿಸುತ್ತಿದ್ದಾರೆ' ಎಂದು ಪೋಸ್ಟ್ ಹಾಕಿದ್ದಾರೆ.
ಲೇಖನ ಒಂದರ ಪ್ರಕಾರ ಫೋರ್ಡ್ ಮೋಟಾರ್ ಕಂಪನಿಯು ಅಮೆರಿಕದಲ್ಲಿ ತನ್ನ ಹೆಚ್ಚಿನ ಕಾರುಗಳನ್ನು ತಯಾರಿಸಿದರೂ, 2025ರ ಎರಡನೇ ತ್ರೈಮಾಸಿಕದಲ್ಲಿ ಸುಂಕ-ಸಂಬಂಧಿತ ವೆಚ್ಚಗಳಿಗಾಗಿ $800 ಮಿಲಿಯನ್ ಪಾವತಿಸಿದೆ ಎಂದಿದೆ.
ಇದನ್ನೂ ಓದಿ: ಹಬ್ಬದ ಹಿನ್ನೆಲೆ ಎಲ್ಲಾ ವಸ್ತುಗಳು ಅಗ್ಗ ಅಗ್ಗ..! ಖರೀದಿ ಜೋರು..
ಫೋರ್ಡ್ ನ ವಾಣಿಜ್ಯ ಸಮಸ್ಯೆ ಹೀಗಿದೆ.
ಬ್ಲೂಮ್ಬರ್ಗ್ ವರದಿಯ ಪ್ರಕಾರ, ಫೋರ್ಡ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಮ್ ಫಾರ್ಲೆ, ಕಂಪನಿಯು ಸುಂಕಗಳನ್ನು ಕಡಿಮೆ ಮಾಡಲು ಟ್ರಂಪ್ ಆಡಳಿತದೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಫೋರ್ಡ್, ಅಮೆರಿಕದಲ್ಲಿ 1.8 ಮಿಲಿಯನ್ ಕಾರುಗಳನ್ನು ತಯಾರಿಸಿ, 57,000 ಉದ್ಯೋಗಿಗಳನ್ನು ಹೊಂದಿದ್ದರೂ, ಸುಂಕಗಳಿಂದಾಗಿ $3 ಬಿಲಿಯನ್ ವಾರ್ಷಿಕ ಲಾಭದ ನಷ್ಟವನ್ನು ಎದುರಿಸುವ ಸಾಧ್ಯತೆಯಿದೆ ಎಂದು ಕಂಪನಿ ಅಂದಾಜಿಸಿದೆ.
Calvin Klein Men's Solid Regular Fit Polo T-Shirt
ಈ ಬೆಳವಣಿಗೆ ಜೀವಂತ ತಾಜಾ ನಿದರ್ಶನವನ್ನ ಆಧಾರವಾಗಿಸಿ ಟ್ರಂಪ್ ತನ್ನ ಸುಂಕ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಸ್ವದೇಶದಲ್ಲೇ ಪರೋಕ್ಷ ಒತ್ತಡ ಹೆಚ್ಚಾಗಿದೆ.