Skip to main content
ವಿಡಿಯೋ
1/2
general

ಮೇಲಧಿಕಾರಿ ನೀಡಿದ ಲಂಚದ ಹಣವನ್ನು ಕಾರಿನ ಡಿಕ್ಕಿಯಲ್ಲಿಟ್ಟಿದ್ದ ಚಾಲಕ: ಮನಕಲಕುವ ಪ್ರಕರಣಕ್ಕೆ ಈ ತೀರ್ಫು ನೀಡಿದ ಹೈಕೋರ್ಟ್‌!

By Gireesh Vasishta
ಮೇಲಧಿಕಾರಿ ನೀಡಿದ ಲಂಚದ ಹಣವನ್ನು ಕಾರಿನ ಡಿಕ್ಕಿಯಲ್ಲಿಟ್ಟಿದ್ದ ಚಾಲಕ: ಮನಕಲಕುವ ಪ್ರಕರಣಕ್ಕೆ ಈ ತೀರ್ಫು ನೀಡಿದ ಹೈಕೋರ್ಟ್‌!

ಬೆಸ್ಕಾಂ(BESCOM) ವಿದ್ಯುತ್‌ ಸಂಪರ್ಕವನ್ನು ಕಮರ್ಷಿಯಲ್‌ನಿಂದ ಇಂಡಸ್ಟ್ರೀಸ್‌ ಟಾರಿಫ್‌ಗೆ ಪರಿವರ್ತಿಸಲು ಮೊದಲಿಗೆ 10 ಲಕ್ಷಕ್ಕೆ ಬೇಡಿಕೆ ಇಟ್ಟು, ಆನಂತರ ಅದನ್ನು ₹7.5 ಲಕ್ಷ ಲಂಚಕ್ಕೆ ನಾಗರಾಜು ಇಳಿಕೆ ಮಾಡಿದ್ದರು. ಈ ನಡುವೆ, ದೂರುದಾರ 22-11-2023ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಟ್ರ್ಯಾಪ್‌ ನಡೆದ ದಿನ ನಾಗರಾಜು ಅವರು 23-11-2023ರಂದು ಕಾರು ಚಾಲಕ ಮುರಳಿ ಅವರನ್ನು 3 ಗಂಟೆಗೆ ಕಚೇರಿಗೆ ಬರುವಂತೆ ಸೂಚಿಸಿದ್ದರು.

ಬೆಸ್ಕಾಂ ವಿದ್ಯುತ್ಸಂಪರ್ಕವನ್ನು ಕಮರ್ಷಿಯಲ್ನಿಂದ ಇಂಡಸ್ಟ್ರೀಸ್ಟಾರಿಫ್ಗೆ ಪರಿವರ್ತಿಸಲು ತನ್ನ ಮೇಲಧಿಕಾರಿ ಪಡೆದ ಲಂಚದ ಹಣವನ್ನು ಕಾರಿನಲ್ಲಿ ಇರಿಸಿದ್ದ ಆರೋಪದ ಮೇಲೆ ಚಾಲಕನ ವಿರುದ್ಧ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ಈಚೆಗೆ ವಜಾಗೊಳಿಸಿದ್ದು, ಬಡ ಚಾಲಕ ಪರಿಸ್ಥಿತಿಯ ಸಂತ್ರಸ್ತ ಎಂದು ಹೇಳಿದೆ.

ಗುತ್ತಿಗೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರ್‌. ಮುರಳಿ ಕೃಷ್ಣ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.


ಮೊದಲ ಆರೋಪಿ ಬೆಸ್ಕಾಂನ ಕಾರ್ಯಾಚರಣೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ ನಾಗರಾಜು ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಪಡೆದುಕೊಂಡಿದ್ದಾನೆ ನಂತರ ಬಡ ಚಾಲಕ ಪರಿಸ್ಥಿತಿಯ ಸಂತ್ರಸ್ತನಾಗಿದ್ದಾನೆಎಂದು ನ್ಯಾಯಾಲಯ ಹೇಳಿದೆ.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women

ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 2 ಮತ್ತು 7 ವಿವರಣೆಯನ್ನು ಪ್ರಾಸಿಕ್ಯೂಷನ್ಆಧರಿಸಿದೆ. ತನ್ನ ಮುಂದೆ ನಡೆಯುತ್ತಿರುವ ಹಣದ ವರ್ಗಾವಣೆ ಬಗ್ಗೆ ಗುತ್ತಿಗೆ ಚಾಲಕನಿಗೆ ತಿಳಿದಿಲ್ಲ. ಮುಖ್ಯ ಪ್ರಧಾನ ವ್ಯವಸ್ಥಾಪಕ ನಾಗರಾಜು ಅವರು ಕಾರಿನ ಡಿಕ್ಕಿಯಲ್ಲಿ ಬ್ಯಾಗ್ಇಡುವಂತೆ ಸೂಚಿಸಿರುವುದನ್ನು ಆತ ಪಾಲಿಸಿದ್ದಾನೆ. ಕರೆ ರೆಕಾರ್ಡಿಂಗ್ಅನ್ನು ಪ್ರಾಸಿಕ್ಯೂಷನ್ಆಧರಿಸಿದ್ದು, ಅದು ಮೊದಲ ಆರೋಪಿಗೆ ಸಂಬಂಧಿಸಿದ್ದಾಗಿದ್ದು, ಲಂಚ ಬೇಡಿಕೆ ಮತ್ತು ಪಡೆಯುವುದರಲ್ಲಿ ಅರ್ಜಿದಾರನ ಪಾತ್ರದ ಕುರಿತು ಗಂಭೀರ ಮೌನ ತಾಳಲಾಗಿದೆ. ಘಟನಾ ಸ್ಥಳದಲ್ಲಿ ಕಾರು ಚಾಲಕ ಉಪಸ್ಥಿತನಿದ್ದು, ತನ್ನ ಮೇಲಧಿಕಾರಿಯ ಆಜ್ಞೆ ಪಾಲಿಸಿದ್ದಕ್ಕಾಗಿ ಅಪರಾಧದ ಬಲೆಯಲ್ಲಿ ಸಿಲುಕಿಸಲಾಗಿದೆಎಂದು ನ್ಯಾಯಾಲಯ ಹೇಳಿದೆ.ಇದನ್ನೂ ಓದಿ: ಕಮ್ಯುನಿಸ್ಟ್‌ರಿಂದ ಟಾರ್ಗೆಟ್ ಧರ್ಮಸ್ಥಳ ಸಂಚು: ರಾಜ್ಯ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಿಡಿ!

ಪ್ರಕರಣದ ಹಿನ್ನೆಲೆ:  ಬೆಸ್ಕಾಂ(BESCOM) ವಿದ್ಯುತ್ಸಂಪರ್ಕವನ್ನು ಕಮರ್ಷಿಯಲ್ನಿಂದ ಇಂಡಸ್ಟ್ರೀಸ್ಟಾರಿಫ್ಗೆ ಪರಿವರ್ತಿಸಲು ಮೊದಲಿಗೆ 10 ಲಕ್ಷಕ್ಕೆ ಬೇಡಿಕೆ ಇಟ್ಟು, ಆನಂತರ ಅದನ್ನು ₹7.5 ಲಕ್ಷ ಲಂಚಕ್ಕೆ ನಾಗರಾಜು ಇಳಿಕೆ ಮಾಡಿದ್ದರು. ನಡುವೆ, ದೂರುದಾರ 22-11-2023ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಟ್ರ್ಯಾಪ್ನಡೆದ ದಿನ ನಾಗರಾಜು ಅವರು 23-11-2023ರಂದು ಕಾರು ಚಾಲಕ ಮುರಳಿ ಅವರನ್ನು 3 ಗಂಟೆಗೆ ಕಚೇರಿಗೆ ಬರುವಂತೆ ಸೂಚಿಸಿದ್ದರು. ಅದರಂತೆ ಬಂದು ಕ್ಯಾಬಿನ್ನಲ್ಲಿದ್ದ ಮುರಳಿಯನ್ನು ಕರೆದು ಬ್ಯಾಗ್ಕೊಟ್ಟು ಅದನ್ನು ಕಾರ್ಡಿಕ್ಕಿಯಲ್ಲಿಡಲು ಸೂಚಿಸಿದ್ದರು. ಕಾರು ಚಾಲಕ MURALI ಬ್ಯಾಗ್ಅನ್ನು ಕಾರಿನ ಡಿಕ್ಕಿಯಲ್ಲಿಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಮುರಳಿಯನ್ನು ಬಂಧಿಸಿದ್ದರು. ಇದನ್ನು ಪ್ರಶ್ನಿಸಿ, ಮುರಳಿ ಹೈಕೋರ್ಟ್ಕದತಟ್ಟಿದ್ದರು.