ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಕುಸಿತ ಕಂಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುತ್ತಿರುವ ಅಸ್ಥಿರತೆಗಳ ಕಾರಣದಿಂದಾಗಿ ಈ ಬದಲಾವಣೆ ಚಿನ್ನದ ಬೆಲೆಯನ್ನು ಬದಲುಗೊಳಿಸುತ್ತಿರುವುದು ಕಾರಣವಾಗಿದೆ. ಈ ಬದಲಾವಣೆ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆ ಮೂಡಿಸಲಿದೆ. ಇದು ಚಿನ್ನವನ್ನು ಕೊಳ್ಳುವವರಿಗೂ ಸ್ವಲ್ಪ ಉತ್ಸಾಹ ತರಲಿದೆ. ಹಾಗಾಗಿ ಗ್ರಾಹಕರ ಸ್ವಲ್ಪ ನಿರಾಳತೆಯಿಂದ ಚಿನ್ನ ಕೊಳ್ಳಬಹುದಾಗಿದೆ.
24 ಕ್ಯಾರಟ್ ಚಿನ್ನದ ದರ:
ಇಂದು 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ₹ 10,304 ಇದೆ. ನಿನ್ನೆ ಇದೇ ದರ ₹10,331 ಇದ್ದದ್ದು, ಇಂದಿಗೆ ₹27 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂಗೆ ₹1,03,040ಮತ್ತು 100 ಗ್ರಾಂಗೆ ₹10,30,400ದರ ನಿಗದಿಯಾಗಿದ್ದು, ಕ್ರಮವಾಗಿ ₹270 ಮತ್ತು ₹2700 ರೂಪಾಯಿ ಇಳಿಕೆ ಕಂಡುಬಂದಿದೆ. ಇದು ಶುದ್ಧ ಚಿನ್ನದ ಹೂಡಿಕೆ ಮಾಡಲಿಚ್ಚಿಸುವವರಿಗೆ ಸ್ಪಲ್ಪ ಚೇತರಿಕೆ ತಂದಿದೆ.
22 ಕ್ಯಾರಟ್ ಚಿನ್ನದ ದರ:
22 ಕ್ಯಾರಟ್ ಚಿನ್ನವು ದಿನನಿತ್ಯದ ಬಳಕೆಯ ಚಿನ್ನವಾಗಿ ಪರಿಗಣಿಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹9,445 ರೂಪಾಯಿ ಆಗಿದ್ದು, ನಿನ್ನೆಗಿಂತ ₹25 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ದರ ₹94,450 ಮತ್ತು 100 ಗ್ರಾಂ ದರ ₹9,44,500ಆಗಿದ್ದು, ಕ್ರಮವಾಗಿ ₹250 ರೂಪಾಯಿ ಮತ್ತು ₹2500ರೂಪಾಯಿ ಇಳಿಕೆ ಕಂಡುಬಂದಿದೆ.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಮೂರ್ಖರ ಪಕ್ಷ : ಬಿ.ವೈ ವಿಜಯೇಂದ್ರ
18 ಕ್ಯಾರಟ್ ಚಿನ್ನದ ದರ:
18 ಕ್ಯಾರಟ್ ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹7,728 ಆಗಿದ್ದು ₹21 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂಗೆ ₹77,280ರೂಪಾಯಿ ಆಗಿದೆ ಹಾಗೂ 100 ಗ್ರಾಂಗೆ ₹7,72,800 ದರ ಏರಿಕೆಯು ಕ್ರಮವಾಗಿ ₹210 ಮತ್ತು ₹2100 ರೂಪಾಯಿ ಇಳಿಕೆ ಆಗಿದೆ.
Titan Edge Squircle Mens 45 x 4.45 x 38.10 mm Black Dial Ceramic Analog Watch - 1841NC01
ಬೆಳ್ಳಿ ದರ: ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದರ ಸ್ಥಿರತೆ ಕಂಡಿದೆ
ಇಂದಿನ ಬೆಳ್ಳಿ ಮೌಲ್ಯವು ನಿನ್ನೆಗೂ ಹೋಲಿಸಿದರೆ ಬೆಳ್ಳಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ನಿನ್ನೆಗೆ ಇಂದಿಗೆ ಹೋಲಿಸಿದರೆ 1 ಗ್ರಾಂ ಬೆಳ್ಳಿಯಲ್ಲಿ ₹117 ರೂಪಾಯಿ, 10 ಗ್ರಾಂ ಬೆಳ್ಳಿಯ ಬೆಲೆ ₹1,170 ರೂಪಾಯಿ ಆಗಿದೆ. 1 ಗ್ರಾಂ ಬೆಳ್ಳಿ ₹117, 10 ಗ್ರಾಂ ₹1,170, 100 ಗ್ರಾಂ ₹11,700 ಹಾಗೂ 1 ಕೆ.ಜಿ ಬೆಳ್ಳಿ ₹1,17,000 ಆಗಿದೆ.
ಆರ್ಥಿಕ ಹಿನ್ನಲೆ ಮತ್ತು ಮಾರುಕಟ್ಟೆಯ ಸ್ಥಿತಿ:
ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬಲದಿಂದ ಚಿನ್ನದ ಬೆಲೆಗೆ ಒತ್ತಡ ಉಂಟಾಗಿದ್ದು, ಜಾಗತಿಕ ರಾಜಕೀಯ ಅಸ್ಥಿರತೆಗಳು ಹೂಡಿಕೆದಾರರನ್ನು ಚಿನ್ನದಿಂದ ದೂರ ಇರಿಸುತ್ತಿವೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಕೂಡ ಈ ಇಳಿಕೆಗೆ ಕಾರಣವಾಗಿರುವ ಸಾಧ್ಯತೆ ಇದೆ.
ಹೂಡಿಕೆ ಸಮಯವೇಕೆ?
ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿರುವುದರಿಂದ ಖರೀದಿಗೆ ಒಳ್ಳೆಯ ಅವಕಾಶ. ಆದರೆ, ಜಾಗತಿಕ ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸಿ ಸಮಚಿತ್ತವಾಗಿ ಹೂಡಿಕೆ ಮಾಡಿ.