ರ್‍ಯಾಗಿಂಗ್ನಿಂದ ಮನನೊಂದು ಬಿಎ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ. ಅಂಜಲಿ ಮುಂಡಾಸ್ (ವಯಸ್ಸು 21) ಎಂಬ ಈ ಯುವತಿ, ಕಾಲೇಜಿನಲ್ಲಿ ಸಹಪಾಠಿಗಳಿಂದ ರ್ಯಾಗಿಂಗ್ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅಂಜಲಿ, ಆತ್ಮಹತ್ಯೆಗಿಂತ ಮುನ್ನ ಒಂದು ಡೆತ್ ನೋಟ್ ಬರೆದಿದ್ದು, ಆ ಪತ್ರದಲ್ಲಿ ತನ್ನ ಸಾವಿಗೆ ಕಾರಣರಾದ ಮೂವರ ಹೆಸರು ಹಾಗೂ ಅವರ ಮೊಬೈಲ್ ಸಂಖ್ಯೆಗಳನ್ನು ವಿವರವಾಗಿ ಉಲ್ಲೇಖವಾಗಿದೆ. ಈ ಮೂವರು ಸಹಪಾಠಿಗಳು ವರ್ಷಾ ಜಮ್ಮನಕಟ್ಟಿ, ಪ್ರದೀಪ್ ಅಳಗುಂದಿ ಮತ್ತು ಇನ್ನೊಬ್ಬರು. ಅಂಜಲಿ ಅವರಿಂದ ಮಾನಸಿಕ ಹಿಂಸೆ, ಒತ್ತಡ ಮತ್ತು ಅವಮಾನ ಎದುರಿಸಬೇಕಾಯಿತು ಎಂದು ಡೆತ್ ನೋಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಇವರನ್ನು ಸುಮ್ಮನೆ ಬಿಡಬೇಡಿ, ಗುಡ್ ಬೈ ಎಂದು ತನ್ನ ಕೊನೆಯ ಸಂದೇಶದಲ್ಲೂ ತಿಳಿಸಿದ್ದಾಳೆ.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+
ಈ ಘಟನೆಯ ಬಗ್ಗೆ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಕ್ಷಣ ತನಿಖೆಗೆ ಕೈಹಾಕಿ, ರ್ಯಾಗಿಂಗ್ ಮತ್ತು ಮಾನಸಿಕ ಹಿಂಸೆಗೆ ಸಂಬಂಧಿಸಿದ ಎಲ್ಲಾ ವಾಸ್ತವಗಳನ್ನು ಪತ್ತೆ ಮಾಡುತ್ತಿದ್ದಾರೆ.also read: ಪ್ರೋಟೀನ್ ತತ್ವಗಳು ಮತ್ತು ತಪ್ಪು ಕಲ್ಪನೆಗಳು: ನಿಮಗೆ ವಾಸ್ತವವಾಗಿ ಪ್ರೋಟೀನ್ ಎಷ್ಟು ಬೇಕು? ಸಸ್ಯಾಧಾರಿತ ಪ್ರೋಟೀನ್ ಮೂಲಗಳಾವುವು.?
ವಿದ್ಯಾರ್ಥಿಗಳ ಭದ್ರತೆ ಮತ್ತು ಮಾನಸಿಕ ಆರೋಗ್ಯವು ಶಿಕ್ಷಣ ಸಂಸ್ಥೆಗಳ ಮೊದಲ ಆದ್ಯತೆ ಆಗಬೇಕು. ರ್ಯಾಗಿಂಗ್ ಅಥವಾ ಯಾವುದೇ ರೀತಿಯ ಹಿಂಸಾತ್ಮಕ ನಡೆ ವಿದ್ಯಾರ್ಥಿಗಳ ಜೀವನದಲ್ಲಿ ಅಪಾರ ಹಾನಿಯನ್ನು ಉಂಟುಮಾಡಬಹುದು ಎಂಬುದು ಈ ಘಟನೆ ಸ್ಪಷ್ಟಪಡಿಸಿದೆ.