Skip to main content
ವಿಡಿಯೋ
general

ಕೊಡವೂರು ಶ್ರೀ ಶಂಕರನಾರಾಯಣ ದೇವರಲ್ಲಿ ಮೀನುಗಾರಿಕೆ ಯಶಸ್ಸು ಕೋರಿ ವಿಶೇಷ ಪೂಜೆ

By Shravanthi R
ಕೊಡವೂರು ಶ್ರೀ ಶಂಕರನಾರಾಯಣ ದೇವರಲ್ಲಿ ಮೀನುಗಾರಿಕೆ ಯಶಸ್ಸು ಕೋರಿ ವಿಶೇಷ ಪೂಜೆ

ಸಂಪ್ರದಾಯಿಕ ಪದ್ದತಿಯಂತೆ ಪೀಳಿಗೆಗಳಿಂದ ಬಳುವಳಿಯಾಗಿ ಬಂದಿರುವುದು ಒಂದೆಡೆಯಾದರೆ, ಮನೋಭಾವದ ದೃಷ್ಟಿಯಿಂದ ಭಯ ಕಡಿಮೆಮಾಡಿ, ಆತ್ಮವಿಶ್ವಾಸ ಹೆಚ್ಚಿಸುವ ಧಾರ್ಮಿಕ ನಂಬಿಕೆ ಹಾಗೂ ಮನೋಬಲದ ಸಂಯೋಜನೆ ಇದಾಗಿದೆ.

ಸಮುದ್ರ ಮೀನುಗಾರರಿಗೆ ಜೀವನವನ್ನು ನೀಡಿದೆ. ʻಕಡಲೊಡೆಯ ನಿನ್ನ ಘಳಿಗೆ ಬಿಡಲಾಗದುʼ ಎನ್ನುವ ಹಾಡಿನ ಸಾಲುಗಳು ನಿಜಕ್ಕೂ, ಜೀವನಕ್ಕೂ ಸಮುದ್ರದೇವನಿಗೂ ಕಲ್ಪಿಸಿರುವ ಅವಿನಾಭಾವ ಸಂಬಂಧದ ಕುರಿತಾಗಿದೆ. ಸಂಪ್ರದಾಯಿಕ ಪದ್ದತಿಯಂತೆ ಪೀಳಿಗೆಗಳಿಂದ ಬಳುವಳಿಯಾಗಿ ಬಂದಿರುವುದು ಒಂದೆಡೆಯಾದರೆ, ಮನೋಭಾವದ ದೃಷ್ಟಿಯಿಂದ ಭಯ ಕಡಿಮೆಮಾಡಿ, ಆತ್ಮವಿಶ್ವಾಸ ಹೆಚ್ಚಿಸುವ ಧಾರ್ಮಿಕ ನಂಬಿಕೆ ಹಾಗೂ ಮನೋಬಲದ ಸಂಯೋಜನೆ ಇದಾಗಿದೆ. 

ಕರಾವಳಿ ಕಾಂಗ್ರೆಸ್ ವತಿಯಿಂದ ಇಂದು ಬೆಳಿಗ್ಗೆ 8 ಗಂಟೆಯಲ್ಲಿ, ಕೊಡವೂರು ಶ್ರೀ ಶಂಕರನಾರಾಯಣ ದೇಗುಲದಲ್ಲಿ ಈ ವರ್ಷದ ಮೀನುಗಾರಿಕೆಗೆ ಯಾವುದೇ ರೀತಿಯಲ್ಲಿ ಪ್ರಕೃತಿ ವಿಕೋಪ ಉಂಟಾಗದೆ, ಹೇರಳವಾಗಿ ಮತ್ಸ್ಯ ಸಂಪತ್ತು ಕರುಣಿಸಿ, ಸಮೃದ್ಧ ಮೀನುಗಾರಿಕೆ ನಡೆದು ಅದಕ್ಕೆ ಹೊಂದಿಕೊಂಡು ಇರುವ ಇತರ ಎಲ್ಲಾ ಉದ್ಯಮಗಳು ಅಭಿವೃದ್ಧಿಯಾಗಲಿ ಎಂದು ಕೋರಿಕೊಳ್ಳಲಾಗಿ, ಜಗದೊಡೆಯ ಮಹಾತೋಭರ ಶ್ರೀ ಶಂಕರನಾರಾಯಣ ದೇವರಲ್ಲಿ ಭಕ್ತಿ ಪೂರ್ವಕವಾಗಿ ಸೇವೆ ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು.

GOBOULT W20 Truly Wireless in Ear Earbuds with 40H Playtime, Zen™ ENC Mic, 45ms Low Latency, 13mm Bass Drivers, Type-C Fast Charging, Touch Controls, IPX5 Ear Buds TWS (Space Black)

ಈ ಸಂದರ್ಭದಲ್ಲಿ ಶ್ರೀ ರಾಮಪ್ಪ ಸಾಲ್ಯಾನ್, ಪದ್ಮನಾಭ ಕಾಂಚನ್, ರಾಮದಾಸ್ ಕರ್ಕೇರ , ಗಣೇಶ್ ಕುಂದರ್, ಸುರೇಶ್ ಕಾಂಚನ್ , ಆನಂದ ಕಾಂಚನ್, ಕರುಣಾಕರ್ ಕಾಂಚನ್, ತರುಣ್ ಪಡುಕರೆ, ವಿಲಾಸ್ ತೊಟ್ಟಂ, ಸೂರಜ್ ಕಲ್ಮಾಡಿ , ಕೃಷ್ಣ ಮೆಂಡನ್, ಪ್ರವೀಣ್ ಕೊಡವೂರ್, ಶೇಖರ್ ತಿಂಗಳಾಯ, ರಮೇಶ್ ತಿಂಗಳಾಯ, ರಮೇಶ್ ಟಿ ಕರ್ಕೇರ, ಭಾಸ್ಕರ್ ಕುಂದರ್,  ಪರುಷೋತ್ತಮ್, ದಿನೇಶ್ ಕಡೆಕಾರ್ , ವಿಜಯ ಕಿದಿಯೂರು ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಕೊಡವೂರ್, ಸದಸ್ಯರಾದ ಗುರುರಾಜ್, ಯಶೋಧರ್ ಸಾಲ್ಯಾನ್, ರಾಜ ಶೇರಿಗಾರ್ ಮುಂತಾದವರು ಉಪಸ್ಥಿತರಿದ್ದರು. ಕರ್ನಾಟಕದಲ್ಲಿ ರೈತರಿಗೆ ಸಿಗುತ್ತಿಲ್ಲ ಬೇಕಾದಷ್ಟು ಗೊಬ್ಬರ, ಕೃಷಿ ಸಚಿವರೆ ಉತ್ತರ ಕೊಡಿ.! ತಪ್ಪು ಯಾರದ್ದು.?