Skip to main content
ವಿಡಿಯೋ
general

ಉಡುಪಿ ಶ್ರೀಕೃಷ್ಣಮಠದಲ್ಲಿ ನಿರ್ಮಲಾ ಸೀತಾರಾಮನ್–ಸುಧಾಮೂರ್ತಿ ಭಕ್ತಿ ಸೇವೆ: ಬೆಳ್ಳಿ ಪಾತ್ರೆ ಸ್ವಚ್ಛ, ಹೊಸ್ತಿಲಿಗೆ ಪೂಜೆ..!

By Sushmitha R
ಉಡುಪಿ ಶ್ರೀಕೃಷ್ಣಮಠದಲ್ಲಿ ನಿರ್ಮಲಾ ಸೀತಾರಾಮನ್–ಸುಧಾಮೂರ್ತಿ ಭಕ್ತಿ ಸೇವೆ: ಬೆಳ್ಳಿ ಪಾತ್ರೆ ಸ್ವಚ್ಛ, ಹೊಸ್ತಿಲಿಗೆ ಪೂಜೆ..!

ಆಗಸ್ಟ್ 9ರಂದು ಶ್ರೀಕೃಷ್ಣಮಠದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸುಧಾಮೂರ್ತಿ ದೇವರ ಪೂಜೆಯಲ್ಲಿ ಭಾಗವಹಿಸಿ, ಬೆಳ್ಳಿ ಪಾತ್ರೆಗಳ ಸ್ವಚ್ಛತೆ ಹಾಗೂ ಹೋಸ್ತಿಲು ಪೂಜೆ ಮಾಡುತ್ತ ದೇಶದ ಮನಸೆಳೆಯುವ ಸೇವೆ ನೆರವೇರಿಸಿದರು.

ಶ್ರೀಕೃಷ್ಣಮಠದಲ್ಲಿ ಶನಿವಾರ (ಆಗಸ್ಟ್ 9) ನಡೆದ ಒಂದು ವಿಶೇಷ ಕಾರ್ಯಕ್ರಮ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಶನಿವಾರ ಶ್ರೀಕೃಷ್ಣಮಠದಲ್ಲಿ ಶ್ರೀಮತಿ ಸುಧಾಮೂರ್ತಿ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದೇವರ ಪೂಜೆಯಲ್ಲಿ ಭಾಗವಹಿಸಿ ವಿವಿಧ ಸೇವೆಗಳನ್ನು ನೆರವೇರಿಸಿದ್ದು ದೇಶದ ಗಮನ ಸೆಳೆದಿದೆ.

ಅಷ್ಟೇ ಅಲ್ಲ ಶ್ರೀಮತಿ ಸುಧಾಮೂರ್ತಿ ಹಾಗೂ ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಪೂಜ್ಯ ಶ್ರೀ ಸ್ವಾಮಿಗಳ ವಿಶಿಷ್ಟ ಅಭಿಮಾನಿಗಳೊಂದಿಗೆ ಸೇರಿ ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ವಿಶ್ವ ಗೀತ ಪಾರ್ಯಾಯದಲ್ಲಿ ಭಾಗವಹಿಸಿ, ಪ್ರತಿದಿನ ಶ್ರೀ ಕೃಷ್ಣ ಪೂಜೆಗೆ ಬಳಸುವ ಬೆಳ್ಳಿ ಪಾತ್ರೆಗಳನ್ನು ಶ್ರದ್ಧೆಯಿಂದ ಸ್ವಚ್ಛಗೊಳಿಸುವ ಸೇವೆ ಹಾಗೂ ಹೋಸ್ತಿಲು ಪೂಜೆಯನ್ನು ನೆರವೇರಿಸಿದರು.

Sonata Wedding Edit Quartz Multifunction Black Dial Stainless Steel Strap Watch for Men

ಚಂದ್ರಶಾಲೆಯಲ್ಲಿ ಸುಧಾಮೂರ್ತಿ ಹಾಗೂ ನಿರ್ಮಲಾ ಸೀತಾರಾಮನ್ ಅವರು ಹೊಸ್ತಿಲು ಬರೆದು, ದ್ವಾದಶ ಸ್ತೋತ್ರಗಳ ಹಾಡು ಹಾಡಿ ದೇವರಿಗೆ ಅರ್ಪಣೆ ಸಲ್ಲಿಸಿದರು. ಮಹಾದ್ವಾರ ಮತ್ತು ಸಿಂಹಾಸನ ಬಾಗಿಲಲ್ಲಿ ದಿಲ್ಲಿಯಿಂದ ಬಂದ ಹೊಸ್ತಿಲುಗಳನ್ನು ಬರೆದು, ಲಕ್ಷ್ಮೀ ಪೂಜೆಯನ್ನು ನೆರವೇರಿಸಿದರು.

ಇದನ್ನು ಓದಿ :ಕೊಡವೂರು ಶ್ರೀ ಶಂಕರನಾರಾಯಣ ದೇವರಲ್ಲಿ ಮೀನುಗಾರಿಕೆ ಯಶಸ್ಸು ಕೋರಿ ವಿಶೇಷ ಪೂಜೆ

ಇವರು ಇಬ್ಬರೂ ದೇವರ ಸೇವೆಯಲ್ಲಿ ಪಾತ್ರೆ ತೊಳೆಯುವ ಹಿತಕರ ಕೆಲಸ ಮಾಡಿದ್ದಾರೆ. ಶ್ರೀಮಠದಿಂದ ಬಾಗಿನ ವಸ್ತುಗಳನ್ನು ನೀಡಲಾಯಿತು. ಸರ್ವಜ್ಞ ಪೀಠದಲ್ಲಿ ವಿಶೇಷ ಪ್ರಸಾದ ವಿತರಿಸಲಾಯಿತು. ಸಚಿವರು ಮನೆಯಿಂದ ತಂದ ಅವಲಕ್ಕಿ ಸಲ್ಲಿಸಿ ದೇವರಿಗೆ ಪೂಜೆ ಸಲ್ಲಿಸಿದರು.