Skip to main content
ವಿಡಿಯೋ
1/2
general

ಎರೆಡು ಯುದ್ಧ ನೌಕೆಗಳು ಸೇನೆ ಸೇರಲು ವಿಶಾಕಪಟ್ಟಂನಲ್ಲಿ ಸಜ್ಜು…!!

By Pavitra Ganapathi Baradavalli
ಎರೆಡು ಯುದ್ಧ ನೌಕೆಗಳು ಸೇನೆ ಸೇರಲು ವಿಶಾಕಪಟ್ಟಂನಲ್ಲಿ ಸಜ್ಜು…!!

ದಿನನಿತ್ಯ (DAILY LIFE) ಜೀವನದಲ್ಲಿ ಒಂದಲ್ಲಾ ಒಂದು ಬೆಳವಣಿಗೆಗಳು (DEVELOPMENTS) ನಡೆಯುತ್ತಲೇ ಇರುತ್ತವೆ ಹಾಗೇ ನಮ್ಮ ಭಾರತ (INDIA) ದೇಶವೂ ಸಹಿತ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರದಿಂದ ಬೆಳವಣಿಗೆ ಹೊಂದಿದ ರಾಷ್ಟ್ರದತ್ತ ದಾಪುಗಾಲು ಇಡುತ್ತಿದೆ. ಅದಕ್ಕೆ ಸಂಕೇತವೆಂಬಂತೆ ಈಗ ಭಾರತದಲ್ಲಿಯೇ ಎಲ್ಲಾ ಕ್ಷಿಪಣಿಗಳು ಹಡಗುಗಳ (SHIPS) ನಿರ್ಮಾಣ ಕಾರ್ಯ ಆರಂಭವಾಗುತ್ತಲಿದೆ.

ವಿಶಾಖಪಟ್ಟಣ: ದಿನನಿತ್ಯ (DAILY LIFE) ಜೀವನದಲ್ಲಿ ಒಂದಲ್ಲಾ ಒಂದು ಬೆಳವಣಿಗೆಗಳು (DEVELOPMENTS) ನಡೆಯುತ್ತಲೇ ಇರುತ್ತವೆ ಹಾಗೇ ನಮ್ಮ ಭಾರತ (INDIA) ದೇಶವೂ ಸಹಿತ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರದಿಂದ ಬೆಳವಣಿಗೆ ಹೊಂದಿದ ರಾಷ್ಟ್ರದತ್ತ ದಾಪುಗಾಲು ಇಡುತ್ತಿದೆ. ಅದಕ್ಕೆ ಸಂಕೇತವೆಂಬಂತೆ ಈಗ ಭಾರತದಲ್ಲಿಯೇ ಎಲ್ಲಾ ಕ್ಷಿಪಣಿಗಳು ಹಡಗುಗಳ (SHIPS) ನಿರ್ಮಾಣ ಕಾರ್ಯ ಆರಂಭವಾಗುತ್ತಲಿದೆ.


ಅದೇ ಮಾದರಿಯಲ್ಲಿ ಭಾರತೀಯ ನೌಕಾಪಡೆಯು ಅಭಿವೃದ್ಧಿಪಡಿಸಿರುವ ಎರೆಡು ಅತ್ಯಾಧುನಿಕ ಯುದ್ಧನೌಕೆಗಳು (Battleship) ಉದಯಗಿರಿ (F35) ಹಾಗೂ ಹಿಮಗಿರಿ (F34) ಸೇನೆ ಸೇರಲು ಸಿದ್ಧವಾಗಿದ್ದು, ಆಗಷ್ಟ್‌ 26 ರಿಂದ ಕಡಲಿಗಿಳಿತಯಲು ಪೂರ್ಣ ಪ್ರಮಾಣದ ತಯಾರಿ ನಡೆಸುತ್ತಿವೆ ಎಂದು ಪೂರ್ವ ನೌಕಾ ಕಮಾಂಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ಎರೆಡು ಹಡಗುಗಳನ್ನು ಮುಂಬೈನಲ್ಲಿರುವ ಮಡಗಾಂವ್‌ ಡಾಕ್‌ ಹಡಗು ನಿರ್ಮಾಣ ಸಂಸ್ಥೆ (MDL) ಅಭಿವೃದ್ಧಿಪಡಿಸಿದ್ದು, ಈ ಪ್ರಾಜೆಕ್ಟ್‌ 17 ಎ ರಹಸ್ಯ ಕಾರ್ಯಾಚರಣೆ ಸಾಮರ್ಥ್ಯದ ಯುದ್ಧನೌಕೆಯು ಇದರ ಎರಡನೇ ಯೋಜನೆಯಾಗಿದೆ ಎಂಬುದು ತಿಳಿದುಬಂದಿದೆ.


ಹಿಮಗಿರಿ ಯುದ್ಧನೌಕೆಯನ್ನು ಕೋಲ್ಕತ್ತದಲ್ಲಿರುವ ಗಾರ್ಡನ್ ರೀಚ್ ಹಡಗು ನಿರ್ಮಾಣ ಮತ್ತು ಎಂಜಿನಿಯರ್ಸ್ ಸಂಸ್ಥೆ (GRSE) ನಿರ್ಮಿಸಿದೆ. ಈ ಪಿ17ಎ ಯೋಜನೆಯು ಇದರ ಮೊದಲ ಪ್ರಯತ್ನವಾಗಿದೆ.

ಇದೇ ಮೊದಲ ಬಾರಿಗೆ ಎರಡು ಪ್ರತ್ಯೇಕ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಎರೆಡು ಪ್ರತ್ಯೇಕ ಹಡಗುಗಳು ಅಂದರೆ ಯುದ್ಧನೌಕೆಗಳು ವಿಶಾಕಪಟ್ಟಣದಲ್ಲಿ ಏಕಕಾಲಕ್ಕೆ ನೌಕಾಪಡೆಯನ್ನು ಸೇರುತ್ತಿವೆ.

ಇದನ್ನೂ ಓದಿ: ಮೈಸೂರು : ದಸರಾ ಆನೆಗಳ ತೂಕ ಪರೀಕ್ಷೆ: 5.465 ಕೆಜಿ ತೂಗಿ ಹೆಚ್ಚು ತೂಕ ಹೊಂದಿದ ಆನೆ ಎಂದು ಮೊದಲ ಸ್ಥಾನ ಗಿಟ್ಟಿಸಿಕೊಂಡ ಭೀಮಾ

ಇನ್ನೂ ಈ ಎರೆಡು ನೌಕೆಗಳ ಸಾಮರ್ಥ್ಯದ ಬಗ್ಗೆ ಗಮನಹರಿಸುವುದಾದರೆ..

ಹಾಲಿ ಇರುವ ಶಿವಾಲಿಕ್‌ ಯುದ್ಧನೌಕೆಗೆ ಹೋಲಿಸಿದರೆ ಹಿಮಗಿರಿಯ ಶೇಕಡಾ 5ರಷ್ಟು ದೊಡ್ಡದಾಗಿದ್ದು, 6700 ಟನ್‌ ತೂಕವನ್ನು ಹೊಂದಿದೆ. ರೆಡಾರ್‌ಗಳಿಗೆ ಗೋಚರಿಸದಂತೆ ಶತ್ರುಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಹಾಗೇ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ನೌಕಾಸೇನಾ ಪಡೆ ತಿಳಿಸಿದೆ.

Amazon Brand - Symbol Men's Cotton Rich Striped Polo Tshirts | Collar Tshirts | Half Sleeves - Regular Fit (Available in Plus Size and Combo Pack of 2)

ಡೀಸೆಲ್‌ ಅಥವಾ ಅನಿಲ (CODOG) ಎರಡನ್ನೂ ಬಳಸುವ ಪ್ರೊಪೆಲರ್ ಇದರದ್ದು. ಇದನ್ನು ಸಂಯೋಜಿತ ವೇದಿಕೆ ನಿರ್ವಹಣಾ ವ್ಯವಸ್ಥೆ ಮೂಲಕ ನಿರ್ವಹಿಸಲಾಗುತ್ತದೆ.

ಸೂಪರ್‌ಸಾನಿಕ್‌ ಖಂಡಾಂತರ ಕ್ಷಿಪಣಿ, ಮಧ್ಯಮ ಶ್ರೇಣಿಯ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ, 76 ಮಿ.ಮೀ. ಎಂಆರ್ ಬಂದೂಕು ಹಾಗೂ 30 ಮಿ.ಮೀ. ಹಾಗೂ 12.7 ಮಿ.ಮೀ. ಬಂದೂಕುಗಳನ್ನೂ ಅಳವಡಿಸಲಾಗಿದೆ.

ಜತೆಗೆ, ಜಲಾಂತರ್ಗಾಮಿ ನಿರೋಧಕ ಹಾಗೂ ನೀರಿನೊಳಗೆ ಬಳಸುವ ಯಾವುದೇ ಶಸ್ತ್ರಾಸ್ತ್ರಗಳಿಂದ ರಕ್ಷಿಸಿಕೊಳ್ಳಬಲ್ಲ ಸಾಮರ್ಥ್ಯ ಇದರದ್ದಾಗಿದೆ.

ಕಡಲಿನಲ್ಲಿ ಈಗಾಗಲೇ ಕಠಿಣ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಯಂತ್ರೋಪಕರಣಗಳು, ಅಗ್ನಿಶಾಮಕ ವ್ಯವಸ್ಥೆ, ಹಾನಿ ನಿಯಂತ್ರಣ, ನೌಕಾ ನಿರ್ವಹಣೆ ಮತ್ತು ಸಂಪರ್ಕ ವ್ಯವಸ್ಥೆಗಳ ಕಾರ್ಯಕ್ಷಮತೆಯ ಪರೀಕ್ಷೆ ನಡೆಸಲಾಗಿದೆ.