ಕಾಡಾನೆ ದಾಳಿಗಳಿಂದ ಕಂಗೆಟ್ಟಿರುವ ದಕ್ಷಿಣ ಕನ್ನಡ ಭಾಗದ ಜನರು.! ಜಿಲ್ಲೆಯ ಪುತ್ತೂರು, ಸುಳ್ಯ, ಕಡಬ ಮತ್ತು ಬೆಳ್ತಂಗಡಿ ಪ್ರದೇಶಗಳಲ್ಲಿ ಕಾಡಾನೆಗಳು ನಾಡಿಗೆ ನುಗ್ಗುವ, ಬೆಳೆ ಹಾನಿ ಮಾಡುವ ಪ್ರಕರಣಗಳು ಹೆಚ್ಚುತ್ತಲೆ ಇವೆ. ನಿಯಂತ್ರಣಕ್ಕೆ ಅರಣ್ಯ ಇಲಾಖೆ ಏನೂ ಕ್ರಮ ಕೈಗೊಳ್ಳದ ಕಾರಣ ಕಾಡಾನೆಗಳ ಹಾವಳಿಯಿಂದ ಕೃಷಿಕರು ತಮ್ಮ ಜೀವ, ಕೃಷಿ, ಮತ್ತು ಆಸ್ತಿಯನ್ನು ಕಳೆದುಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಅಲ್ಲಿನ ಕೃಷಿಕರು ಸೇರಿದಂತೆ ಸಾರ್ವಜನಿಕರ ಪರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾಗಿರುವ ಕಿಶೋರ್ ಕುಮಾರ್ ಪುತ್ತೂರು ಅವರು, ಮಾನ್ಯ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿ, ವಿವಿಧ ಬೇಡಿಕೆಗಳನ್ನು ವಿಧಾನ ಪರಿಷತ್ ಕಲಾಪದಲ್ಲಿ ಪ್ರಸ್ತಾಪಿಸಿ, ಸರ್ಕಾರದ ಮುಂದಿಟ್ಟಿದ್ದಾರೆ.
ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳು ಇಂತಿವೆ -
ಜಿಲ್ಲೆಯಲ್ಲಿ ಆನೆ ಶಿಬಿರವನ್ನು ಪ್ರಾರಂಭಿಸುವ ಬಗ್ಗೆ:
ಆನೆಗಳನ್ನು ಸೆರೆ ಹಿಡಿಯುವ ಸಂದರ್ಭ ಬಂದಾಗ ದುಬಾರೆ, ಹುಣಸೂರು ಬಳಿಯ ಮತ್ತಿಗೋಡು, ಸಕ್ರೆಬೈಲು (ಶಿವಮೊಗ್ಗ ) ಆನೆ ಶಿಬಿರದ ಆನೆಗಳನ್ನು ಅವಲಂಬಿಸಬೇಕಾಗಿದೆ. ಅಲ್ಲಿ ಸಂಪರ್ಕ ಸಾಧಿಸಿ ಅಗತ್ಯ ಸಿದ್ಧತೆ ಮಾಡಿಕೊಂಡು ಇಲ್ಲಿಗೆ ತಂಡ ಬರುವವರೆಗೆ ಕನಿಷ್ಠ ಎರಡು ದಿನ ಬೇಕಾಗುತ್ತದೆ. ಇಲ್ಲಿ ಸಾಕಾನೆಗಳನ್ನು ಪಳಗಿಸಿದರೆ ವಿಳಂಬವಿಲ್ಲದೆ ಕಾರ್ಯಾಚರಣೆ ನಡೆಸಬಹುದು ಮತ್ತು ಪ್ರವಾಸೋದ್ಯಮಕ್ಕೂ ಚಿಕ್ಕ ಮೊತ್ತದ ಬಜೆಟ್‌ನಲ್ಲಿ ಇದ್ದರೆ ಅನುಕೂಲವಾಗುವುದು.
ಆನೆ ನಿಗ್ರಹ ಪಡೆ (ETF) ರಚಿಸುವುದು
ಕಾಡಿನಿಂದ ನಾಡಿಗೆ ಬರುವ ಆನೆಗಳನ್ನು ಹಿಮ್ಮೆಟ್ಟಿಸಲು ಅಥವಾ ಸೆರೆಹಿಡಿಯಲು ಇರುವ ಒಂದು ವಿಶೇಷ ತಂಡವನ್ನು, ನುರಿತ ತರಬೇತಿ ಪಡೆದ ಸಿಬ್ಬಂದಿ ಮತ್ತು ಆನೆಗಳನ್ನು ನಿರ್ವಹಿಸಲು ಬೇಕಾದ ಉಪಕರಣಗಳನ್ನು; ಆನೆಗಳು ಊರುಗಳ ಕಡೆ ಬಂದರೆ, ಅವುಗಳನ್ನು ಹಿಂತಿರುಗಿಸಲು ಅಥವಾ ಸೆರೆಹಿಡಿಯಲು ಈ ಪಡೆಗಳನ್ನು ರಚಿಸುವುದು ಮುಖ್ಯವಾಗಿದೆ.
ರೇಡಿಯೋ ಕಾಲರ್ ಅಳವಡಿಕೆ
ಆನೆಗಳ ಚಲನವಲನಗಳನ್ನು ನಿರಂತರವಾಗಿ ಪತ್ತೆಹಚ್ಚಲು ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಬೇಕು. ಇದರಿಂದ ಕಾಡಾನೆಗಳು ನಾಡಿಗೆ ಬರುವುದನ್ನು ಮೊದಲೇ ಗುರುತಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು, ಆನೆಗಳಿಗೆ ರೇಡಿಯೋ ಕಾಲರ್ ಐಡಿ ಅಳವಡಿಸುವುದರಿಂದ ಅವುಗಳ ಇರುವಿಕೆಯನ್ನು ಪತ್ತೆ ಮಾಡುವುದು. ಹೊಟ್ಟೆಗೆ ಹಿಟ್ಟಿಲ್ಲದ ಬಿಬಿಎಂಪಿಗೆ ಜುಟ್ಟಿಗೆ ಮಲ್ಲಿಗೆ: ನಮ್ಮ ಕ್ಲಿನಿಕ್‌ಗೆ LED ಟಿವಿ ಖರೀದಿಗೆ ಮುಂದಾದ ಪಾಲಿಕೆ
ಸೌರ ಬೇಲಿಗೆ ಶೇ. 100 ರಷ್ಟು ಸಹಾಯಧನ
ಕಾಡಂಚಿನ ನಿವಾಸಿಗಳ ಕೃಷಿ ಜಮೀನಿಗೆ ಮತ್ತು ಜನವಸತಿ ಪ್ರದೇಶಗಳಿಗೆ ಸೋಲಾರ್ ಬೇಲಿ ಅಳವಡಿಸಲು ಈಗ ನೀಡಲಾಗುತ್ತಿರುವ ಶೇಕಡ 50ರಷ್ಟು ಸಬ್ಸಿಡಿ ಮೊತ್ತವನ್ನು ಶೇ 100 ರಷ್ಟು ಹೆಚ್ಚಿಸಬೇಕು. ಕಾಡಿನಲ್ಲಿ ಬೆತ್ತ ಬೆಳೆಯುವುದನ್ನು ನಿಷೇಧಿಸಬೇಕು, ಬೆತ್ತ ಬೆಳೆಯುವುದರಿಂದ ಕಾಡು ನಾಶವಾಗುತ್ತಿದೆ ಮತ್ತು ಇತರ ಕಾಡು ಪ್ರಾಣಿಗಳು ಕಾಡಿನಲ್ಲಿ ಆಹಾರ ಇಲ್ಲದೆ ನಾಡಿಗೆ ನುಗ್ಗುತ್ತಿದೆ. ಹಂದಿ, ಕಾಟಿ ಮುಂತಾದ ಇತರ ಕಾಡು ಪ್ರಾಣಿಗಳ ಹಾವಳಿ ಕೂಡ ಹೆಚ್ಚಾಗಿದೆ.
ಇದರೊಟ್ಟಿಗೆ, ಈ ಬಗ್ಗೆ ಎಚ್ಚರಿಕೆ ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು. ಆತ್ಮರಕ್ಷಣೆಗಾಗಿ ಕೋವಿ ಲೈಸೆನ್ಸ್ ಪಡೆಯುವ ಮತ್ತು ನವೀಕರಿಸುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಸ್ಥಳೀಯರು ಮತ್ತು ರೈತಬಾಂಧವರ ಮುಖೇನ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಒತ್ತಾಯಿಸಿದ್ದಾರೆ.