Skip to main content
ವಿಡಿಯೋ
crime

ಮನೆ ಪಕ್ಕ ನಿಲ್ಲಿಸಿದ ಬೈಕಿಗೆ ಬೆಂಕಿ: ಡಿಜೆ(ದೇವಜೀವನಹಳ್ಳಿ) ಹಳ್ಳಿಯಲ್ಲಿ ಘಟನೆ: ನಿಮ್ಮ ಬೈಕ್ ಹುಷಾರ್!

By Gireesh Vasishta
ಮನೆ ಪಕ್ಕ ನಿಲ್ಲಿಸಿದ ಬೈಕಿಗೆ ಬೆಂಕಿ: ಡಿಜೆ(ದೇವಜೀವನಹಳ್ಳಿ) ಹಳ್ಳಿಯಲ್ಲಿ ಘಟನೆ: ನಿಮ್ಮ ಬೈಕ್ ಹುಷಾರ್!

ಗೋಪಿ ಎಂಬುವರಿಗೆ ಸೇರಿದ್ದ ಬೈಕನ್ನು ಮನೆ ಪಕ್ಕ ನಿಲ್ಲಿಸಿದ್ದರು. 12ನೇ ತಾರೀಖಿನ ರಾತ್ರಿ ಸುಮಾರು 2.41ರ ಸುಮಾರಿಗೆ ಆರೋಪಿಗಳು ಇವರ ಮನೆಯ ಮುಂದಕ್ಕೆ ಬಂದು ನಿಂತಿದ್ದು, ಬೈಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಬೆಂಗಳೂರು:  ಬೆಂಗಳೂರಿನಲ್ಲಿ ಪುಂಡ- ಪೋಕರಿಗಳ ಹಾವಳಿ ಹೆಚ್ಚಾಗಿದೆ, ಅದ್ಯಾವ ನಶೆಯಲ್ಲಿ ಇರುತ್ತಾರೋ ಅಥವಾ ಕುಡಿದ ಮತ್ತಿನಲ್ಲಿ ಮಾಡಬಾರದ ಕೆಲಸ ಮಾಡಿ ಸ್ಥಳದಿಂದ ನಾಪತ್ತೆ ಆಗುತ್ತಾರೊ ಗೊತ್ತಿಲ್ಲ, ಇದೇ ರೀತಿಯ ಘಟನೆ ಡಿಜೆ ಹಳ್ಳಿಯ ಬಳಿ ಇರುವ ವಿಶ್ವೇಶ್ವರಯ್ಯ ನಗರದಲ್ಲಿ ನಡೆದಿದೆ.YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal

ಗೋಪಿ ಎಂಬುವರಿಗೆ ಸೇರಿದ್ದ ಬೈಕನ್ನು ಮನೆ ಪಕ್ಕ ನಿಲ್ಲಿಸಿದ್ದರು.  12ನೇ ತಾರೀಖಿನ  ರಾತ್ರಿ ಸುಮಾರು 2.41ರ ಸುಮಾರಿಗೆ ಆರೋಪಿಗಳು ಇವರ ಮನೆಯ ಮುಂದಕ್ಕೆ ಬಂದು ನಿಂತಿದ್ದು, ಬೈಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ ,ಸಿಸಿಟಿವಿಯಲ್ಲಿ ಬೈಕ್ ಗೆ ಬೆಂಕಿ ಹಾಕುವ ದೃಶ್ಯ ಸೆರೆ ಸಿಕ್ಕಿದ್ದು, ಬೈಕ್‌ನ ಮಾಲೀಕರು ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆ, ಆರೋಪಿಗಳಿಗಾಗಿ ಡಿಜೆ. ಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ.Also read:ಸಿದ್ದರಾಮಯ್ಯ ಆಪ್ತ ಶಾಸಕ ಕೆ ಎನ್. ರಾಜಣ್ಣ ಸಚಿವ ಸ್ಥಾನದಿಂದ ಅಮಾನತು ವಿಚಾರ: ಪೆಟ್ರೋಲ್‌ ಸುರಿದುಕೊಂಡು ಮಧುಗಿರಿಯಲ್ಲಿ ಬೆಂಬಲಿಗರಿಂದ ಭಾರಿ ಹೈಡ್ರಾಮ!


 ಬೇರೊಬ್ಬ ವ್ಯಕ್ತಿಯ ಜೊತೆ ಮಾತನಾಡಿರುವ ಬೈಕ್‌ನ ಮಾಲೀಕ ಗೋಪಿ ಪೊಲೀಸರ ಮೇಲೆ ಆರೋಪಿಸಿದ್ದಾರೆ, ಕಂಪ್ಲೇಂಟ್ ನೀಡಿದ್ದು ಪೊಲೀಸರು FIR ಹಾಕುವುದರಲ್ಲಿ ವಿಳಂಬ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ ಮನೆ ಪಕ್ಕ ಬೈಕ್‌ಗಳನ್ನು ನಿಲ್ಲಿಸುವ ಮುಂಚೆ ಯೋಚಿಸಿ ನಿಲ್ಲಿಸಿ, ಪುಂಡ ಪೋಕರಿಗಳ ಹಾವಳಿ ಬೆಂಗಳೂರಿನಲ್ಲಿ ಹೆಚ್ಚಾಗಿರುವುದರಿಂದ ನಿಮ್ಮ ಬೈಕ್ಗಳ ಬಗ್ಗೆ ಗಮನವಿರಲಿ.