ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಲ್ಲಿ ಸುಂಕನೀತಿ ಜಗ್ಗಾಟದ ವಾರ್ ನಡೆಸಿದ್ದಾರೆ. ಈ ಮಧ್ಯೆಯೇ ಮುಂದಿನ ತಿಂಗಳು ನಮ್ಮ ಪ್ರಧಾನಿಯವರು ಯುನೈಟೆಡ್ ನೇಷನ್ಸ್ ಜೆನರಲ್ ಅಸೆಂಬ್ಲಿ(ಯುಎನ್‌ಜಿಎ) ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಹಾಜರಾಗಲಿದ್ದಾರೆ. ಈ ಮೂಲಕ ಎರಡು ದೇಶಗಳ ವ್ಯಾಪಾರ ಸಂಬಂಧಗಳ ಕುರಿತು ಉಭಯ ನಾಯಕರು ಚರ್ಚಿಸಲಿದ್ದು, ಮುಖ್ಯವಾಗಿ ಡೊನಾಲ್ಡ್ ಟ್ರಂಪ್ ಅವರಲ್ಲಿ ದೇಶಿಯ ವ್ಯವಹಾರ ಸಮಸ್ಯೆಗಳ ಕುರಿತು ಸಭೆ ನಡೆಸಲು ಯೋಜನೆ ರೂಪಿಸಲಾಗಿದೆ.
ಮೋದಿ ಹಾಗೂ ಟ್ರಂಪ್ ಸ್ನೇಹ ಸಂಬಂಧದ ನಡುವಲ್ಲಿಯೂ ಭಾರತ ಹಾಗೂ ಅಮೆರಿಕಾ ನಡುವಿನ ವ್ಯಾಪಾರ ಸಂಬಂಧಗಳು ಹದಗೆಟ್ಟಿರುವ ಸ್ಥಿತಿ ಬಗ್ಗೆ ಈ ಭೇಟಿ ಅದನ್ನು ಪುನರ್ನಿರ್ಮಿಸುವಲ್ಲಿ ನಿರ್ಣಾಯಕವೆನಿಸಲಿದೆ.ಮನೆ ಪಕ್ಕ ನಿಲ್ಲಿಸಿದ ಬೈಕಿಗೆ ಬೆಂಕಿ: ಡಿಜೆ(ದೇವಜೀವನಹಳ್ಳಿ) ಹಳ್ಳಿಯಲ್ಲಿ ಘಟನೆ: ನಿಮ್ಮ ಬೈಕ್ ಹುಷಾರ್! ಸೆಪ್ಟಂಬರ್‌ನಲ್ಲಿ ಯುಎನ್‌ಜಿಎ ಶೃಂಗಸಭೆ ನ್ಯೂಯಾರ್ಕ್ ನಗರದಲ್ಲಿ ನಡೆಯಲಿದ್ದು, ವಿದೇಶಿ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಅದಾಗಿಯೂ ಅವರ ಭೇಟಿ ಅಧಿಕೃತವಲ್ಲವೆನ್ನಲಾದರೆ ಈ ಸಮಸ್ಯೆ ಬಗೆಹರಿಸುವ ಗುರಿಯು ಮುಕ್ಕಾಗುವುದು.
ಭಾರತದ ಉತ್ಪನ್ನಗಳ ಮೇಲೆ 50 % ಸುಂಕದ ಅರ್ಧದಷ್ಟು ಈ ತಿಂಗಳಿನ 7 ರಿಂದ ಜಾರಿಯಾಗಿ, ಉಳಿದದ್ದು ಆಗಸ್ಟ್‌ನ 27ರಿಂದ ಜಾರಿಯಾಗಲಿದೆ. ಈ ಬಗ್ಗೆ ಎರಡು ದೇಶಗಳ ವ್ಯವಹಾರ ಸಮಸ್ಯೆಗಳ ಕುರಿತು ತೀವ್ರ ಚರ್ಚೆಗೆ ಒಳಪಟ್ಟಿದ್ದ ಮಾತುಕತೆಗಳು ನಡೆದಿದ್ದವು. ಈ ಹಿಂದೆ, ನರೇಂದ್ರ ಮೋದಿಯವರು, ಶ್ವೇತಭವನಕ್ಕೆ ಭೇಟಿಕೊಟ್ಟಿದ್ದರು. ಅದಾದ ಬಳಿಕ ಈ ಇಬ್ಬರು ನಾಯಕರುಗಳ ಭೇಟಿ ಇದಾಗಲಿದೆ.