ಸುಪ್ರೀಂ ಕೋರ್ಟ್(new delli): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸಹಿತ 7 ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್, ಇದೇ ವೇಳೆ ಹೈಕೋರ್ಟ್‌ನ ಜಾಮೀನು ಮಂಜೂರು ಆದೇಶದಲ್ಲಿನ ಹಲವು ಹುಳುಕುಗಳನ್ನು ಎತ್ತಿ ತೋರಿದೆ.
ತೀರ್ಪು ಪ್ರಕಟಿಸಿದ ನ್ಯಾ. ಪಾರ್ದಿವಾಲಾ ಮತ್ತು ನ್ಯಾ. ಆರ್ ಮಹದೇವನ್ ಅವರಿದ್ದ ಪೀಠವು, ತನ್ನ ಆದೇಶದ ವೇಳೆ ಜಾಮೀನು ಮಂಜೂರು ಮತ್ತು ರದ್ದತಿಗೆ ಸಂಬಂಧಿಸಿದ ಎಲ್ಲಾ ವಾದವನ್ನು ನಾವು ಪರಿಗಣಿಸಿದ್ದೇವೆ. ಹೈಕೋರ್ಟ್‌ನ ಆದೇಶವು ವಿಕ್ಷಿಪ್ತ ದೋಷಗಳಿಂದ ಕೂಡಿದೆ ಎಂದಿತು.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women
ಆದೇಶವನ್ನು ಓದಿದ ನ್ಯಾ. ಮಹದೇವನ್ ಅವರು, "ಹೈಕೋರ್ಟ್‌ನ ಆದೇಶವು ಗಂಭೀರ ವೈರುಧ್ಯಗಳಿಂದ ಕೂಡಿದೆ. ಜಾಮೀನು ನೀಡಲು ಹೈಕೋರ್ಟ್ ಆದೇಶದಲ್ಲಿ ವಿಶೇಷ ಅಥವಾ ಸಕಾರಣಗಳನ್ನು ನೀಡಲಾಗಿಲ್ಲ. ನ್ಯಾಯಾಲಯವು ಯಾಂತ್ರಿಕವಾಗಿ ತನ್ನ ಅಧಿಕಾರ ಬಳಕೆ ಮಾಡಿದೆ. ಕಾನೂನಾತ್ಮಕವಾಗಿ ಬಹುಮುಖ್ಯವಾದ ವಾಸ್ತವಾಂಶಗಳನ್ನು ಕೈಬಿಟ್ಟಿದೆ. ಹೈಕೋರ್ಟ್ ಜಾಮೀನು ನೀಡುವಾಗ ವಿಚಾರಣಾ ಹಂತದಲ್ಲಿರುವ ಪ್ರಕರಣದ ಸಾಕ್ಷ್ಯಗಳನ್ನು ಇದನ್ನು ಓದಿ:ದಾಸ ದರ್ಶನ್ ಜಾಮೀನು ರದ್ದು - ಮುಂದೇನು ?ಬಹುಮುಖ್ಯವಾಗಿ ಪರಿಗಣಿಸಿದೆ.
ಹೇಳಿಕೆಯಲ್ಲಿನ ವೈರುಧ್ಯ, ವಿಳಂಬ ಮುಂತಾದ ವಿಚಾರಣಾ ನ್ಯಾಯಾಲಯವು ಪಾಟೀ(ಸಾಕ್ಷಿಯ) ಸವಾಲಿನ ಸಂದರ್ಭದಲ್ಲಿ ನಿರ್ಧರಿಸಬೇಕಿರುವ ಅಂಶಗಳನ್ನು ಹೈಕೋರ್ಟ್ ಪರಿಗಣಿಸಿದೆ. ಸಾಕ್ಷಿಗಳ ಪ್ರಾಮಾಣಿಕತೆ ಮತ್ತು ನಂಬಲರ್ಹತೆಯನ್ನು ನಿರ್ಧರಿಸಬೇಕಿರುವುದು ವಿಚಾರಣಾ ನ್ಯಾಯಾಲಯ ಮಾತ್ರ ಎಂದು ನ್ಯಾಯಾಲಯ ಹೇಳಿದೆ.