Skip to main content
ವಿಡಿಯೋ
general

ಬೆಂಗಳೂರಿನ ವಿಲ್ಸ್‌ನ್‌ ಗಾರ್ಡ್‌ನ್‌ ಬಳಿಯ ಚಿನ್ನಯ್ಯನಪಾಳ್ಯದಲ್ಲಿನ ನಿಗೂಢ ಸ್ಫೋಟಕ್ಕೆ ಕಾರಣ ತಿಳಿಸಿದ ಪೊಲೀಸ್‌ ಆಯುಕ್ತರು, ಹೀಗಿದೆ ಮಾಹಿತಿ

By Gireesh Vasishta
ಬೆಂಗಳೂರಿನ ವಿಲ್ಸ್‌ನ್‌ ಗಾರ್ಡ್‌ನ್‌ ಬಳಿಯ ಚಿನ್ನಯ್ಯನಪಾಳ್ಯದಲ್ಲಿನ  ನಿಗೂಢ ಸ್ಫೋಟಕ್ಕೆ ಕಾರಣ ತಿಳಿಸಿದ ಪೊಲೀಸ್‌ ಆಯುಕ್ತರು, ಹೀಗಿದೆ ಮಾಹಿತಿ

ಈ ಘಟನೆಯಲ್ಲಿ ಯಾವುದೇ ಸ್ಪೋಟಕ ಬಳಕೆಯಾಗಿಲ್ಲ ಮತ್ತು ಸಿಲಿಂಡರ್ ಸ್ಪೋಟದಿಂದಲೇ ಈ ಘಟನೆ ಜರುಗಿದೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿರುವುದಾಗಿ ತಿಳಿದು ಬಂದಿದೆ. ಹಾಗೂ ಘಟನೆಯಲ್ಲಿ ಯಾವುದೇ IED - improvised explosive device ಬಳಕೆ ಆಗಿಲ್ಲ, ಪೊಲೀಸರು, ಸೋಕೋ ಹಾಗೂ ಎಫ್ ಎಸ್ ಎಲ್ ಸಿಬ್ಬಂದಿಗಳ ಪರಿಶೀಲನಾ ಅಭಿಪ್ರಾಯದ ಮೇಲೆ ನಿರ್ಧಾರವನ್ನು ಮಾಡಲಾಗಿದೆ.

ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಲ್ಸನ್ ಗಾರ್ಡನ್ ಬಳಿಯ ಚಿನ್ನಯ್ಯನಪಾಳ್ಯದಲ್ಲಿ ನಿಗೂಢ ಸ್ಫೋಟವೊಂದು ಸಂಭವಿಸಿತ್ತು, ಅದರ ಬಗ್ಗೆ ಸದ್ಯ ಸ್ವಲ್ಪ  ಮಟ್ಟದ ಮಾಹಿತಿ ಲಭ್ಯವಾಗಿದೆ. ಘಟನೆ ಇಂದು ಬೆಳಿಗ್ಗೆ (ಆಗಸ್ಟ್ 15, 2025) ಸುಮಾರು 7.30 ರಿಂದ 8 ಗಂಟೆಯ ನಡುವೆ ಸಂಭವಿಸಿದ್ದು, ಭಾರೀ ಸ್ಫೋಟದ ಶಬ್ದವಾಗಿದ್ದು , ಒಂದು ಮಗು ಮೃತಪಟ್ಟಿದೆ.Levi's Men's Slim Fit Mid Rise 511 Mid-Rise Jeans

ಮೃತರ ವಿವರ: ಮೃತಪಟ್ಟ ಬಾಲಕನನ್ನು ಮುಬಾರಕ್ ಎಂದು ಗುರುತಿಸಲಾಗಿದೆ. ಆತ ತೀವ್ರ ಗಾಯಗೊಂಡು, ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಫೋಟದಿಂದ 8 ಮಂದಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯಲ್ಲಿ ಯಾವುದೇ ಸ್ಪೋಟಕ ಬಳಕೆಯಾಗಿಲ್ಲ ಮತ್ತು ಸಿಲಿಂಡರ್ ಸ್ಪೋಟದಿಂದಲೇ ಘಟನೆ ಜರುಗಿದೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿರುವುದಾಗಿ ತಿಳಿದು ಬಂದಿದೆ. ಹಾಗೂ ಘಟನೆಯಲ್ಲಿ ಯಾವುದೇ IED - improvised explosive device ಬಳಕೆ ಆಗಿಲ್ಲ, ಪೊಲೀಸರು, ಸೋಕೋ ಹಾಗೂ ಎಫ್ ಎಸ್ ಎಲ್ ಸಿಬ್ಬಂದಿಗಳ ಪರಿಶೀಲನಾ ಅಭಿಪ್ರಾಯದ ಮೇಲೆ ನಿರ್ಧಾರವನ್ನು ಮಾಡಲಾಗಿದೆ.

ಆದರೆ ಘಟನೆ ನಡೆದ ಮನೆಯಲ್ಲಿ ಹೆಚ್ಚು ಸಿಲಿಂಡರ್ ಸಿಕ್ಕಿಲ್ಲ ಆದರೆ ಅಕ್ಕಪಕ್ಕದ ಮನೆಯಲ್ಲಿ ಒಟ್ಟು ಒಂಬತ್ತು ಸಿಲಿಂಡರ್ ಸಿಕ್ಕಿರುವುದಾಗಿ ವರದಿಯಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮೇಶ್  ಬಾನೋತ್‌ ಹೇಳಿಕೆ ನೀಡಿದ್ದಾರೆ.

- ಘಟನೆ ನಡೆದ ಸ್ಥಳದಲ್ಲಿ ಅವಶೇಷಗಳನ್ನು ತೆರವು ಮಾಡಲಾಗಿದೆ, ಸ್ಥಳದಲ್ಲಿ ಏನಾದರೂ ಸ್ಫೋಟಕ ಸಿಗುತ್ತದೆಯೇ ಎಂಬ ಪರಿಶೀಲನೆ ನಡೆಸಲಾಗಿತ್ತು. ಗ್ಯಾಸ್ ಲೀಕ್ ಆಗಿ ಮನೆಯಲ್ಲಿದ್ದ ಹಾಸಿಗೆ ಮತ್ತು ಇನ್ನಿತರ ಬಟ್ಟೆಗಳು ಬೆಂಕಿಗೆ ಆಹುತಿಯಾಗಿದ್ದು ಸಿಲಿಂಡರ್ ಲೀಕ್ ಆಗಿರುವುದೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.Also read: ಮಲಗುವ ಜಮಖಾನಕ್ಕಾಗಿ ಸ್ನೇಹಿತರ ಗಲಾಟೆ,ಕೊಲೆಯಲ್ಲಿ ಅಂತ್ಯ..

ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇತ್ತು ಎಂದು ಹೇಳಿದ್ದಾರೆ, ಅದು ಸಿಕ್ಕಿಲ್ಲ ಅದನ್ನ ವೆರಿಫೈ ಮಾಡ್ತಾ ಇದ್ದೇವೆ. ಆ ಸಿಲಿಂಡರ್ ಯಾರು ಸಪ್ಲೈ ಮಾಡಿದ್ದರು ಎಂಬ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಆ ಮನೆಯಲ್ಲಿದ್ದ ಮಹಿಳೆ ಮತ್ತು ಆಕೆಯ ಮಗಳಿಗೆ ಸುಟ್ಟ ಗಾಯಗಳಾಗಿವೆ, ಹಲವು ಇಲಾಖೆಯ ಪರಿಣಿತರನ್ನ ಕರೆಸಿ ಅಭಿಪ್ರಾಯ ಪಡೆದಿದ್ದೇವೆ. ಘಟನೆಯಲ್ಲಿ ಸ್ಟೋಟಕ ವಸ್ತುಗಳ, ಕುರುಹುಗಳು ಸಿಕ್ಕಿಲ್ಲ. ಸ್ಥಳದಲ್ಲಿ ಒಟ್ಟು 9 ಸಿಲಿಂಡರ್‌ಗಳು ಸಿಕ್ಕಿವೆ, ಅಕ್ಕ ಪಕ್ಕದ ಮನೆಯ ಸಿಲಿಂಡರ್ ಕೂಡ ಪಡೆದಿದ್ದೇವೆ ಎಂದು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ.