Skip to main content
ವಿಡಿಯೋ
politics

ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಿನ್ನೆಲೆ..ಬೆಂಗಳೂರಿನ ಈ ಸ್ಥಳದಲ್ಲಿ ಸಂಚಾರ ಮಾರ್ಗ ಬದಲಾವಣೆ!

By Gireesh Vasishta
ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಿನ್ನೆಲೆ..ಬೆಂಗಳೂರಿನ ಈ ಸ್ಥಳದಲ್ಲಿ ಸಂಚಾರ ಮಾರ್ಗ ಬದಲಾವಣೆ!

ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣದವರೆಗೆ ಪಿಕ್ ಅಪ್ ಮತ್ತು ಡ್ರಾಪ್ ಮಾಡುವುದನ್ನು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಿಷೇಧಿಸಲಾಗಿದೆ. ಇಸ್ಕಾನ್ ದೇವಸ್ಥಾನಕ್ಕೆ ಸಾರ್ವಜನಿಕರನ್ನು ಕರೆತರುವ ಆಟೋ ಮತ್ತು ಕ್ಯಾಬ್‌ಗಳು ಮಹಾಲಕ್ಷ್ಮಿ ಮೆಟ್ರೋ ಅಥವಾ ಸೋಪ್ ಪ್ಯಾಕ್ಷರಿ ಸುತ್ತಲಿನ ಪ್ರದೇಶಗಳಲ್ಲಿ ಮಾತ್ರ ಪಿಕ್ ಅಪ್ ಮತ್ತು ಡ್ರಾಪ್ ಮಾಡಬಹುದಾಗಿದೆ.

 

ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಸಂದರ್ಭದಲ್ಲಿ ರಾಜಾಜಿನಗರದಲ್ಲಿ ಭಕ್ತರ ಸಂಚಾರ ಹೆಚ್ಚಾಗಲಿದೆ. ದೇವಾಲಯದ ಸುತ್ತಲೂ ಸಂಚಾರ ಸುಗಮವಾಗಿ ನಿರ್ವಹಿಸಲು ವಿಶೇಷ ಮಾರ್ಗ ಬದಲಾವಣೆ ಮಾಡಲಾಗಿದೆ.

 

ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಈ ಶನಿವಾರ ಮತ್ತು ಭಾನುವಾರ (ಆ. 16, 17) ರಾಜಾಜಿನಗರದಲ್ಲಿನ ಇಸ್ಕಾನ್ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಮತ್ತು ಗಣ್ಯರು ದೇವರ ದರ್ಶನಕ್ಕೆ ಬರುತ್ತಿದ್ದಾರೆ. ಅದರಿಂದ ದೇವಸ್ಥಾನ ಸುತ್ತಲೂ ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗುವ ನಿರೀಕ್ಷೆ ಇದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರವನ್ನು ಖಾತ್ರಿಪಡಿಸಲು ಬೆಂಗಳೂರು ಸಂಚಾರ ಇಲಾಖೆ ಕೆಲವು ಮಾರ್ಗಗಳಲ್ಲಿ ಬದಲಾವಣೆಗಳನ್ನು ಮಾಡಿದೆ.

 

ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸೋಪ್ ಪ್ಯಾಕ್ಷರಿ ಜಂಕ್ಷನ್‌ನಿಂದ ವಿಜಯನಗರ, ನಂದಿನಿಲೇಔಟ್, ಮಹಾಲಕ್ಷ್ಮಿಲೇಔಟ್ ಕಡೆಗೆ ಹೋಗುವ ವಾಹನಗಳು ಸೋಪ್ ಪ್ಯಾಕ್ಷರಿ ಜಂಕ್ಷನ್‌ನಲ್ಲಿ ಡಾ.ರಾಜ್ ಕುಮಾರ್ ರಸ್ತೆಯ ಮೂಲಕ ಮುಂದುವರಿಯಬೇಕು. 10ನೇ ಕ್ರಾಸ್‌ನಲ್ಲಿ ಅಥವಾ ಕೇತಮಾರನಹಳ್ಳಿ ಜಂಕ್ಷನ್‌ನಲ್ಲಿ ಬಲ ತಿರುವು ತಂದು 1ನೇ ಬ್ಲಾಕ್ ರಾಜಾಜಿನಗರ ಸಿಗ್ನಲ್ ಮೂಲಕ ಕಾರ್ಡ್ ರಸ್ತೆಗೆ ತಲುಪಬೇಕು.Handcuffs Backpacks Vegan Leather Casual Backpack Multipurpose Travelling Bags Daypacks For Men And Women

 

ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣದವರೆಗೆ ಪಿಕ್ ಅಪ್ ಮತ್ತು ಡ್ರಾಪ್ ಮಾಡುವುದನ್ನು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಿಷೇಧಿಸಲಾಗಿದೆ. ಇಸ್ಕಾನ್ ದೇವಸ್ಥಾನಕ್ಕೆ ಸಾರ್ವಜನಿಕರನ್ನು ಕರೆತರುವ ಆಟೋ ಮತ್ತು ಕ್ಯಾಬ್‌ಗಳು ಮಹಾಲಕ್ಷ್ಮಿ ಮೆಟ್ರೋ ಅಥವಾ ಸೋಪ್ ಪ್ಯಾಕ್ಷರಿ ಸುತ್ತಲಿನ ಪ್ರದೇಶಗಳಲ್ಲಿ ಮಾತ್ರ ಪಿಕ್ ಅಪ್ ಮತ್ತು ಡ್ರಾಪ್ ಮಾಡಬಹುದಾಗಿದೆ.ಬೆಂಗಳೂರಿನ ವಿಲ್ಸ್‌ನ್‌ ಗಾರ್ಡ್‌ನ್‌ ಬಳಿಯ ಚಿನ್ನಯ್ಯನಪಾಳ್ಯದಲ್ಲಿನ ನಿಗೂಢ ಸ್ಫೋಟಕ್ಕೆ ಕಾರಣ ತಿಳಿಸಿದ ಪೊಲೀಸ್‌ ಆಯುಕ್ತರು, ಹೀಗಿದೆ ಮಾಹಿತಿ

 

ಸ್ವಂತ ವಾಹನದಲ್ಲಿ ಬರುವ ಭಕ್ತರು ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣದಿಂದ ಸೋಪ್ ಪ್ಯಾಕ್ಷರಿ ಕಡೆಗೆ ಹೋಗುವ ರಸ್ತೆಯಲ್ಲಿ ಪಿಕ್ ಅಪ್ ಮತ್ತು ಡ್ರಾಪ್ ಮಾಡಬಹುದು. ತುಮಕೂರು ರಸ್ತೆ ಮಾರ್ಗದಲ್ಲಿ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್‌ಗಳು ಯಶವಂತಪುರ ಸರ್ಕಲ್ ಮೂಲಕ ಮಾರಮ್ಮ ಮಾರ್ಗೋಸಾ ರಸ್ತೆ ಮತ್ತು ಕೆ.ಸಿ.ಜಿ. ಸಿಗ್ನಲ್ ಮೂಲಕ ಲಿಂಕ್ ರಸ್ತೆಗೆ ಹೋಗಬೇಕು. ಸಾರ್ವಜನಿಕರು ಸಂಚಾರ ನಿಯಮಗಳನ್ನು ಅನುಸರಿಸಿ, ಸಮಯಕ್ಕೆ ಮೊದಲು ಸ್ಥಳಕ್ಕೆ ಆಗಮಿಸುವ ಮೂಲಕ ಹಬ್ಬದ ಉತ್ಸವವನ್ನು ಸುಗಮವಾಗಿ ಅನುಭವಿಸಬಹುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.