ಕಿರುತೆರೆಗೆ ತಾಜಾ ಮುಖವಾಗಿ ಪರಿಚಯವಾಗಿರುವ ಗಗನಾ ಜೀ ಕನ್ನಡದ ಮಹಾನಟಿ ರಿಯಾಲಿಟಿ ಶೋ ಮೂಲಕ ಜನಪ್ರಿಯರಾದರು. ಈ ನಂತರ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋದಲ್ಲೂ ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಇತ್ತೀಚೆಗೆ ಮುಕ್ತಾಯವಾದ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ರಿಯಾಲಿಟಿ ಶೋದಲ್ಲಿ ಡ್ರೋನ್ ಪ್ರತಾಪ್ ಗೆ ಮೆಂಟರ್ ಆಗಿ ಕಾಣಿಸಿಕೊಂಡಿದ್ದರು.
ಈ ಎಲ್ಲಾ ಅನುಭವಗಳ ನಂತರ, ಗಗನಾ ಈಗ ಹೊಸ ಧಾರಾವಾಹಿ ರಾಜಕುಮಾರಿಯಲ್ಲಿ ನಾಯಕಿಯಾಗಿ ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಜೀ ಪಿಚ್ಚರ್ ಈ ಧಾರಾವಾಹಿಯ ಪ್ರೋಮೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿದ್ದು, ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ.
ಪ್ರೋಮೋದಲ್ಲಿ ಗಗನಾ ಹಳ್ಳಿ ಹುಡುಗಿ ರೂಪದಲ್ಲಿ ಸೈಕಲ್ ಸವಾರಿ ಮಾಡುತ್ತಿರುವುದು ಮತ್ತು ನಗುಮುಖದಲ್ಲಿ ಕಾಣುತ್ತಿರುವುದು ಗಮನ ಸೆಳೆದಿದೆ. ಕಥಾಹಂದರವು ಕೂಡ ಗಗನಾ ಅವರ ಪಾತ್ರದ ಸುತ್ತ ಸಾಗುತ್ತದೆ.
ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಶೋದಲ್ಲಿ ಗಗನಾ-ಡ್ರೋನ್ ಪ್ರತಾಪ್ ಜೋಡಿ ಮೆಂಟರ್ ಗಳಾಗಿ ಜನಪ್ರಿಯರಾದರು. ಇವರಿಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಮತ್ತು ಸಂಭಾಷಣೆಗಳು ಪ್ರೇಕ್ಷಕರಿಗೆ ಮನರಂಜನೆ ನೀಡಿದವು. ಈ ಶೋದಲ್ಲಿ 10 ಬ್ಯಾಚುಲರ್ಸ್ ಮತ್ತು ಹತ್ತು ಸುಂದರಿಯರು ಭಾಗವಹಿಸಿದ್ದರು. ಫೈನಲ್‌ನಲ್ಲಿ ಸುನೀಲ್ ಮತ್ತು ಅಮ್ರಿತಾ ರಾಜ್ ವಿನ್ನರ್ ಆಗಿ ಹೊರಹೊಮ್ಮಿದರು, ಗಗನಾ-ಡ್ರೋನ್ ಪ್ರತಾಪ್ ಜೋಡಿ ಎರಡನೇ ಸ್ಥಾನ ಪಡೆದರು.
ಕೂಲಿ ಸಿನಿಮಾ ರಿಲೀಸ್ ಬೆನ್ನಲ್ಲೇ ರಚಿತಾ ರಾಮ್ ಅಚ್ಚರಿಯ ಪೋಸ್ಟ್..ರಜನಿ ಫೋಟೋ ಗ್ಯಾಲರಿಯಲ್ಲಿ ಅಡಗಿಸಿಟ್ರಾ?
ಚಿತ್ರದುರ್ಗ ಮೂಲದ ಗಗನಾ, ಕಿರುತೆರೆಗೆ ಬರುವ ಮೊದಲು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಹಾನಟಿ ಶೋ ಮೂಲಕ ಅವರು ಜನರ ಹೃದಯವನ್ನು ಗೆದ್ದರು. ಇದೀಗ ರಾಜಕುಮಾರಿಯಲ್ಲಿ ನಾಯಕಿಯಾಗಿ ತಮ್ಮ ಪ್ರತಿಭೆಯನ್ನು ಮತ್ತೊಂದು ಬಾರಿ ತೋರಲು ಸಜ್ಜಾಗಿದ್ದಾರೆ.