Skip to main content
ವಿಡಿಯೋ
business

ಮಹೀಂದ್ರಾ ಕಾರ್‌ ಕ್ರೇಜ್‌: ಸಂಚಲನ ಸೃಷ್ಟಿಸಿದ ಮಹೀಂದ್ರಾ BE 6 ಬ್ಯಾಟ್‌ಮನ್ ಎಡಿಶನ್.!

By Shravanthi R
ಮಹೀಂದ್ರಾ ಕಾರ್‌ ಕ್ರೇಜ್‌: ಸಂಚಲನ ಸೃಷ್ಟಿಸಿದ ಮಹೀಂದ್ರಾ BE 6 ಬ್ಯಾಟ್‌ಮನ್ ಎಡಿಶನ್.!

ವಿಶೇಷವಾಗಿ, 300 ಕಾರು ಮಾತ್ರ ಲಭ್ಯವಿರುವ ಈ ಕಾರಿಗೆ ಬೇಡಿಕೆ ಹೆಚ್ಚಾಗಿದೆ. ಇದು ಕಾರುಪ್ರಿಯರ ಗಮನ ಸೆಳೆದಿದೆ ಜೊತೆಗೆ, ಕಾರಿನ ವಿನ್ಯಾಸ, ಬಣ್ಣ ಹಾಗೂ ವಿಭಿನ್ನ ಫೀಚರ್ಸ್‌ನಿಂದ ಆಕರ್ಷಿತವಾಗಿರುವ ಈ ಕಾರು ಎಲ್ಲೆಡೆ ಸದ್ದುಮಾಡುತ್ತಲಿದೆ.

ಕಳೆದ ವಾರದಿಂದ ಭಾರತದ ಆಟೋಮೊಬೈಲ್‌ ಕ್ಷೇತ್ರದಲ್ಲಿ ಟಾಪ್ ಕಾರುಗಳ ಸುದ್ದಿ ಮನೆಮಾತಾಗಿದೆ. ಅದನ್ನು ಅವಲೋಕಿಸಿದರೆ, ಸ್ವಾತಂತ್ರ್ಯ ದಿನದಂದು ಮಹೀಂದ್ರಾ ಸಂಚಲನ ಮೂಡಿಸಿದೆ. ಮಹೀಂದ್ರಾ ತನ್ನ ನಾಲ್ಕು ಹೊಸ ಕಾರು ಬ್ರಾಂಡ್‌ ಕಾನ್ಸೆಪ್ಟ್‌ಗಳ ಭರ್ಜರಿ ಅನಾವರಣದೊಂದಿಗೆ ಸುದ್ದಿಯ ಕೇಂದ್ರಬಿಂದುವಾಗಿದೆ. ತನ್ನ BE 6 ಎಲೆಕ್ಟ್ರಿಕ್‌ ಕಾರಿನ ಬ್ಯಾಟ್‌ಮನ್‌ ಎಡಿಶನ್‌ ಡಿಸೈನ್‌ಗೆ ಕಾರುಪ್ರಿಯರು ಮನಸೋತಿದ್ದಾರೆ.

ವಿಶೇಷವಾಗಿ, 300 ಕಾರು ಮಾತ್ರ ಲಭ್ಯವಿರುವ ಈ ಕಾರಿಗೆ ಬೇಡಿಕೆ ಹೆಚ್ಚಾಗಿದೆ. ಇದು ಕಾರುಪ್ರಿಯರ ಗಮನ ಸೆಳೆದಿದೆ ಜೊತೆಗೆ, ಕಾರಿನ ವಿನ್ಯಾಸ, ಬಣ್ಣ ಹಾಗೂ ವಿಭಿನ್ನ ಫೀಚರ್ಸ್‌ನಿಂದ ಆಕರ್ಷಿತವಾಗಿರುವ ಈ ಕಾರು ಎಲ್ಲೆಡೆ ಸದ್ದುಮಾಡುತ್ತಲಿದೆ. ಇದರೊಟ್ಟಿಗೆ, ಹಲವು ಸೀಮಿತ ಆವೃತ್ತಿಯ ವಾಹನಗಳು ಮುಂಬರುವ ಉತ್ಸವ ಸೀಸನ್‌ನ ಮಾರಾಟವನ್ನು ಗುರಿಯಾಗಿಟ್ಟುಕೊಂಡು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. 


Philips Hue Bridge for Philips Hue Smart Lights (Compatible with Amazon Alexa, Apple HomeKit, and The Google Assistant),White,1 Count (Pack of 1),929001180606

ಟೆಸ್ಲಾ, ಭಾರತದಲ್ಲಿ ತನ್ನ ಎರಡನೇ ಶೋರೂಮ್ ತೆರೆದರೆ, ಒಂದು ಹ್ಯಾಚ್‌ಬ್ಯಾಕ್ ಕಾರು ಕೆಲವು ಅಗತ್ಯವಾದ ಫೀಚರ್ ಅಪ್‌ಡೇಟ್‌ಗಳೊಂದಿಗೆ ಗಮನ ಸೆಳೆದಿದೆ. ಇದೇ ವೇಳೆ, ಮಹೀಂದ್ರಾ ತನ್ನ ಭವಿಷ್ಯದ ದೃಷ್ಟಿಕೋನದಿಂದ ನಾಲ್ಕು ಹೊಸ ವಿಚಾರಗಳ ಭರ್ಜರಿ ಅನಾವರಣ ಆಗಸ್ಟ್ 15 ರಂದು, ಮಹೀಂದ್ರಾ ತನ್ನ ಆವೃತ್ತಿಯ ವಾಹನಗಳಾದ ವಿಷನ್ ಎಸ್, ವಿಷನ್ ಟಿ, ವಿಷನ್ ಎಕ್ಸ್, ಮತ್ತು ವಿಷನ್ ಎಸ್‌ಎಕ್ಸ್‌ಟಿಯನ್ನು ಪರಿಚಯಿಸಿದೆ.  ದೇಶವ್ಯಾಪಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಮಲ್ಲಿಕಾರ್ಜುನ್ ಖರ್ಗೆಯಿಂದ ಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು