Skip to main content
ವಿಡಿಯೋ
general

ಕೃಷ್ಣ ಜನ್ಮಾಷ್ಟಮಿಯಂದೇ ಮಹಾ ದುರಂತ. ಸಿಲಿಂಡರ್ ಸ್ಫೋಟದಿಂದ ಬೆಂಗಳೂರಿನ ನಗರತ್ ಪೇಟೆಯಲ್ಲಿ ಐವರು ಬಲಿ! ಮಾಹಿತಿ ಇಲ್ಲಿದೆ.

By Gireesh Vasishta
ಕೃಷ್ಣ ಜನ್ಮಾಷ್ಟಮಿಯಂದೇ ಮಹಾ ದುರಂತ. ಸಿಲಿಂಡರ್ ಸ್ಫೋಟದಿಂದ ಬೆಂಗಳೂರಿನ ನಗರತ್ ಪೇಟೆಯಲ್ಲಿ ಐವರು ಬಲಿ! ಮಾಹಿತಿ ಇಲ್ಲಿದೆ.

ಕೃಷ್ಣ ಜನ್ಮಾಷ್ಟಮಿಯಂದೇ ರಾಜಧಾನಿ ಬೆಂಗಳೂರಿನಲ್ಲಿ ಮಹಾ ಅವಘಡ ಸಂಭವಿಸಿದೆ. ನಗರತ್ ಪೇಟೆಯಲ್ಲಿರುವ ಕಮರ್ಷಿಯಲ್ ಬಿಲ್ಡಿಂಗ್‌ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಅವಘಡದಲ್ಲಿ ಐವರು ಕೊನೆಯುಸಿರೆಳೆದಿದ್ದಾರೆ. ಅಲ್ಲದೇ ಗೃಹೋಪಯೋಗಿ ಅಲಂಕಾರಿಕ ವಸ್ತುಗಳು ಬೆಂಕಿಗಾಹುತಿಯಾಗಿವೆ.

ರಾಜಧಾನಿ ಬೆಂಗಳೂರಿನ ನಗರತ್ ಪೇಟೆಯ ಕಮರ್ಷಿಯಲ್ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ ಐವರು ಜೀವ ಕಳೆದುಕೊಂಡಿದ್ದಾರೆ. ಸಿಲಿಂಡರ್ ಸ್ಫೋಟವೇ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಟ್ಟಿದೆ.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women

ಕೃಷ್ಣ ಜನ್ಮಾಷ್ಟಮಿಯಂದೇ ರಾಜಧಾನಿ ಬೆಂಗಳೂರಿನಲ್ಲಿ ಮಹಾ ಅವಘಡ ಸಂಭವಿಸಿದೆ. ನಗರತ್ ಪೇಟೆಯಲ್ಲಿರುವ ಕಮರ್ಷಿಯಲ್ ಬಿಲ್ಡಿಂಗ್‌ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಅವಘಡದಲ್ಲಿ ಐವರು ಕೊನೆಯುಸಿರೆಳೆದಿದ್ದಾರೆ. ಅಲ್ಲದೇ ಗೃಹೋಪಯೋಗಿ ಅಲಂಕಾರಿಕ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಈ ಮಹಾ ದುರಂತ ಸಿಲಿಂಡರ್ ಸ್ಫೋಟದಿಂದ ಸಂಭವಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಅಗ್ನಿ ಅವಘಡದಿಂದ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಬೆಂಕಿ ನಂದಿಸಲು ಮೂರು ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಇನ್ನೂ ಕೆಲವರು ಈ ಘಟನೆಯು ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ನಡೆಯಿತು ಎಂದಿದ್ದಾರೆ.

ಅಂದರೆ ನಗರತ್ ಪೇಟೆಯಲ್ಲಿರುವ ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ,  ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದ ಬೆಂಕಿ ಆವರಿಸಿದೆ ಎಂದು ಹೇಳುತ್ತಿದ್ದಾರೆ. ಒಟ್ಟು 5 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ಭಾಗವಹಿಸಿದ್ದವು. ಈ ಘಟನೆ ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.also read: SIT ಗುಂಡಿ ಶೋಧ ಕಾರ್ಯ ಮುಕ್ತಾಯ ವಿಚಾರ: ಆ ಅನಾಮಿಕ ಹುಚ್ಚನಾ ಅಂತಾ ನೋಡಬೇಕಿತ್ತು: R. ಆಶೋಕ್‌ ಕಿಡಿ!

ಸಿಲಿಂಡರ್ ಸ್ಫೋಟವಾಗುವ ಹೊತ್ತಿಗೆ ಮನೆಯೊಳಗೆ ಮೂರು ಅಥವಾ ಐದು ಮಂದಿ ಇದ್ದರು ಎಂಬ ಮಾಹಿತಿ ದೊರೆತಿದೆ. ಒಟ್ಟಾರೆ ಕೃಷ್ಣ ಜನ್ಮಾಷ್ಟಮಿ ದಿನವೇ ಈ ಅವಘಡ ಸಂಭವಿಸಿದ್ದು, ನಿಜಕ್ಕೂ ಸಹಿಸಲಾರದ ದುರಂತ ಎನ್ನಬಹುದು.