ನಟ ದರ್ಶನ್ ಅವರ ಪರವಾಗಿ ವಿಜಯಲಕ್ಷ್ಮಿ ದರ್ಶನ್ ಅವರು ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ್ದಾರೆ. ಇತ್ತೀಚಿನ ಘಟನೆಗಳ ಹಿನ್ನೆಲೆದಲ್ಲಿ ಈ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ವಿಜಯಲಕ್ಷ್ಮಿ ಅವರು ತಮ್ಮ ಸಂದೇಶದಲ್ಲಿ, “ನನ್ನ ಸುಖದಲ್ಲಿ ಭಾಗಿಯಾಗಿ, ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತ ಅಭಿಮಾನಿಗಳ ಪ್ರೀತಿ–ಅಭಿಮಾನಕ್ಕೆ ನಾನು ಸದಾ ಕೃತಜ್ಞೆ. ನಾನು ಎಲ್ಲೆ ಇದ್ದರೂ ನಿಮ್ಮ ಶ್ರೇಯಸ್ಸೇ ನನ್ನ ಹಾರೈಕೆ” ಎಂದು ತಿಳಿಸಿದ್ದಾರೆ.
ಅವರು ಇನ್ನೂ ಹೇಳಿದ್ದು, ನಿರ್ದೇಶಕರು ಮತ್ತು ನಿರ್ಮಾಪಕರ ವಿಶ್ವಾಸ ಕಾಪಾಡುವುದು ತಾನು ಮಾಡಬೇಕಾದ ಮುಖ್ಯ ಕರ್ತವ್ಯ. ವಿಶೇಷವಾಗಿ ದರ್ಶನ್ ನಟನೆಯ “ದಿ ಡೆವಿಲ್” ಚಿತ್ರದ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯಬೇಕು ಎಂಬುದು ಅವರ ಆಶಯ. ಚಿತ್ರದ ಪ್ರಗತಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ದರ್ಶನ್ ಸಪ್ಪೆಮೋರೆ, ಪವಿತ್ರಾ ಗೌಡ ಲವ್ಲಿ ಸ್ಮೈಲ್ ಫೋಟೋ ವೈರಲ್! ಅಸಲಿಗೆ ಪೋಸ್ ಕೊಟ್ಟಿದ್ದೆಲ್ಲಿ?
ಸಿನಿಮಾವನ್ನು ಕೇವಲ ಮನರಂಜನೆಯ ದೃಷ್ಟಿಯಿಂದಲೇ ನೋಡಬೇಕೆಂದು ವಿಜಯಲಕ್ಷ್ಮಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಜೊತೆಗೆ, “ನನ್ನ ಮೇಲೆ ನಂಬಿಕೆ ಇಟ್ಟು ನಿಂತಿರುವ ಅಭಿಮಾನಿಗಳ ಪ್ರೀತಿ ನನಗೆ ಶಕ್ತಿ ನೀಡುತ್ತದೆ” ಎಂದು ಧನ್ಯವಾದ ವ್ಯಕ್ತಪಡಿಸಿದ್ದಾರೆ.
ವಿಜಯಲಕ್ಷ್ಮಿ ಅವರ ಈ ಸಂದೇಶ ಈಗ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ದರ್ಶನ್ ಅಭಿನಯದ “ದಿ ಡೆವಿಲ್” ಚಿತ್ರದ ಬಿಡುಗಡೆಗೆ ಯಾವುದೇ ಅಡಚಣೆ ಬಾರದಂತೆ ನೋಡಿಕೊಳ್ಳಲು ಎಲ್ಲರೂ ಬೆಂಬಲಿಸಬೇಕೆಂಬ ಮನವಿ ವ್ಯಕ್ತವಾಗಿದೆ.