Skip to main content
ವಿಡಿಯೋ
general

ದಿಯಾ ಸಿನಿಮಾ ನಿರ್ಮಾಪಕ ಕೃಷ್ಣಚೈತನ್ಯ ವಿರುದ್ಧ ಎಫ್‌ಐಆರ್: ಕಾರಣ ಹೀಗಿದೆ

By Gireesh Vasishta
ದಿಯಾ ಸಿನಿಮಾ ನಿರ್ಮಾಪಕ ಕೃಷ್ಣಚೈತನ್ಯ ವಿರುದ್ಧ ಎಫ್‌ಐಆರ್: ಕಾರಣ ಹೀಗಿದೆ

ಈ ಕುರಿತಂತೆ ಅರೋಪದಾರರು ರಾಜ್ಯಪಾಲರು, ಸಿ.ಎಂ, ಗೃಹಸಚಿವರು, ಕಂದಾಯ ಸಚಿವರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಮುಖ್ಯಕಾರ್ಯದರ್ಶಿ, ಲೋಕಾಯುಕ್ತ, ಐಜಿ ರಿಜಿಸ್ಟೇಷನ್, ಕಂದಾಯ ಇಲಾಖೆ ಕಾರ್ಯದರ್ಶಿ, ಡಿಜಿಐಜಿಪಿ, ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ದಿಯಾ ಸಿನಿಮಾದ ಯಶಸ್ವೀ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಕೃಷ್ಣಚೈತನ್ಯ ಅವರು ಈಗ ಗಂಭೀರ ಆರೋಪಗಳ ಕಾರಣದಿಂದ ವಿವಾದಕ್ಕೆ ಸಿಲುಕಿದ್ದಾರೆ. ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಜಮೀನು ಅತಿಕ್ರಮಣ, ಅವಾಚ್ಯ ಶಬ್ದಗಳಿಂದ ನಿಂದನೆ, ಮತ್ತು ಜೀವ ಬೆದರಿಕೆ ಆರೋಪಗಳ ಮೇಲೆ ಎಫ್ಐಆರ್ ದಾಖಲಾಗಿದೆ.Vogaan Men's T-Shirt and Shorts Set | Top & Shorts Night Suits Set | Night Wear for Men

ದೂರಿನ ವಿವರ:

ರಾಮಮೂರ್ತಿ ಎಂಬ ರೈತ ದಾಖಲಿಸಿದ ದೂರಿನ ಪ್ರಕಾರ, ಕೃಷ್ಣಚೈತನ್ಯ ಮತ್ತು ಸೈನಪ್ಸಿ ಕಂಪನಿಯ ಎಂ.ಡಿ. ಸಚಿನ್ ನಾರಾಯಣ್ ಅವರು ಕಸವನಹಳ್ಳಿಯ ಸರ್ವೆ ನಂ. 52 3.25 ಗುಂಟೆ ಜಮೀನಿನ ಸಂಬಂಧದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅತಿಕ್ರಮಣಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜಮೀನನ್ನು ರಾಮಮೂರ್ತಿ 2005 ರಲ್ಲಿ ಖರೀದಿಸಿದ್ದು, ಶಶಿಕಲಾ ಕೋದಂಡಚಾರಿ ಎಂಬವರಿಗೆ ನರ್ಸರಿ ಮಾಡಲು ಭೋಗ್ಯಕ್ಕೆ ನೀಡಿದ್ದರು. ಆಗಸ್ಟ್ 13, 2025 ರಂದು ಕೃಷ್ಣಚೈತನ್ಯ ಮತ್ತು ಸಹಚರರು ಜಮೀನಿನ ಬಳಿ ಬಂದು ನಕಲಿ ದಾಖಲೆಗಳನ್ನು ತೋರಿಸಿ, ಶಶಿಕಲಾ ಕೋದಂಡಚಾರಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.also read:ಬಕೆಟ್ ನೀರು ಮುಟ್ಟಿದ್ದಕ್ಕೆ ಅಮ್ಮ-ಪುಟ್ಟ ಹುಡುಗನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ: ವಿಕೆಟ್, ಬ್ಯಾಟ್ನಿಂದ ಹಿಗ್ಗಾಮುಗ್ಗಾ ಹಲ್ಲೆ.

- ಕಳೆದ ಆಗಸ್ಟ್ 13 ಬೆಳಗ್ಗೆ ರಾಮಮೂರ್ತಿ ಜಮೀನಿನ ಬಳಿ ಬಂದಿರೋ ನಿರ್ಮಾಪಕ ಕೃಷ್ಣಚೈತನ್ಯ & ಸಹಚರರು.

- ನಕಲಿ ದಾಖಲೆ ಸೃಷ್ಟಿಸಿಕೊಂಡು ರೈತ ರಾಮಮೂರ್ತಿ ಜಮೀನಿನ ಬಳಿ ಬಂದಿರೋ ಆರೋಪ.

- ಈ ವೇಳೆ ಜಮೀನಿನಲ್ಲಿದ್ದ ಶಶಿಕಲಾ ಕೋದಂಡಚಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಜೀವಬೆದರಿಕೆ ಹಾಕಿರೋ ಆರೋಪ.

- ಕೃಷ್ಣಚೈತನ್ಯ ಹಾಗೂ ಸಚಿನ್ ನಾರಾಯಣ್ ರಿಗೆ ಕಂದಾಯ ಅಧಿಕಾರಿಗಳು, ಸಬ್ ರಿಜಿಸ್ಟ್ರಾರ್ ಗಳು‌ ಸೇರಿ ಬಿಬಿಎಂಪಿ ಅಧಿಕಾರಿಗಳು
ಅಕ್ರಮಕ್ಕೆ ಸಹಕರಿಸ್ತಿದ್ದಾರೆಂದು ದೂರು.

ಈ ಕುರಿತಂತೆ ಅರೋಪದಾರರು ರಾಜ್ಯಪಾಲರು, ಸಿ.ಎಂ, ಗೃಹಸಚಿವರು, ಕಂದಾಯ ಸಚಿವರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಮುಖ್ಯಕಾರ್ಯದರ್ಶಿ, ಲೋಕಾಯುಕ್ತ, ಐಜಿ ರಿಜಿಸ್ಟೇಷನ್, ಕಂದಾಯ ಇಲಾಖೆ ಕಾರ್ಯದರ್ಶಿ, ಡಿಜಿಐಜಿಪಿ, ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.