ಬೆಂಗಳೂರು: ಇತ್ತೀಚೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಎಂದು ಮೀಸಲಿಟ್ಟಿ ಜಾಗದಲ್ಲಿದ್ದ ಸಮಾಧಿಯನ್ನು ನೆಲಸಮ ಮಾಡಿದ್ದರು ಈ ಕುರಿತಂತೆ ಹಲವು ಮಾಹಿತಿಯನ್ನು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ದ್ ಸಭೆಯಲ್ಲಿ ಅಭಿಮಾನಿಗಳ ಮುಂದಿಟ್ಟಿದ್ದಾರೆ.
ಬೆಂಗಳೂರಿನ ಜಯನಗರದ ನಿವಾಸದಲ್ಲಿ ಸಭೆ-
- ಅಭಿಮಾನಿಗಳು ಮತ್ತು ಮಾಧ್ಯಮಗಳ ಎದುರಿಗೆ ಚರ್ಚೆ ಹಮ್ಮಿಕೊಂಡಿರೋ ನಟ ಅನಿರುದ್ದ್.
- ವಿಷ್ಣು ಕುಟುಂಬ ಮತ್ತು ಅಭಿಮಾನಿಗಳ ನಡುವೆ ಮಾತುಕತೆ.
- ಹೈಕೋರ್ಟ್ ಆದೇಶದ ಮೇರೆಗೆ ಸಮಾಧಿ ತೆರವು. ಕೋರ್ಟ್ ಆದೇಶವಿರುವುದರಿಂದ ಪ್ರತಿಭಟನೆಗೆ ಅವಕಾಶವಿಲ್ಲ. ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಸಭೆ.Fflirtygo Men Graphic Print Cotton T-Shirt & Short Set for Men/Boys
- ಅಭಿಮಾನಿಗಳನ್ನು ಉದ್ದೇಶಿಸಿ ಅನಿರುಧ್ ಮಾತು.
- ನೀವೆಲ್ಲರೂ ನಮ್ಮ ಸಿಂಹಗಳು.. ಸಿಂಹಿಣಿಯರು ಎಂದ ಅನಿರುಧ್.
- ಅಭಿಮಾನ್ ಸ್ಟುಡಿಯೋದಲ್ಲಿ ನಡೆದ ಘಟನೆ ಖಂಡನೀಯ.. ನಮಗೆಲ್ಲರಿಗೂ ದುಃಖ ಆಗಿದೆ.
- ಹಿಂದೆ ಸಮಾಧಿ ಇದ್ದ ಜಾಗದಲ್ಲಿ ವಿಷ್ಣುವರ್ಧನ್ ಅಸ್ಥಿ ಇತ್ತು
- ಅಲ್ಲಿ ಒಂದು ಚೆಂಬು ಇಡಲಾಗಿತ್ತು ಅಂತ ಹೇಳಲಾಗ್ತಿತ್ತು. ಆದ್ರೆ ಅಲ್ಲಿ ಅಂತದ್ದು ಏನೂ ಇರ್ಲಿಲ್ಲ.
- ನಾವು ಅನೇಕ ಸಲ ಮಾಡಿದ ಕೆಲಸಗಳನ್ನು ಹೇಳಿಕೊಂಡಿಲ್ಲ. ನಾವು ಇವತ್ತು ಹೇಳಿಕೊಳ್ಳುವ ಅನಿವಾರ್ಯತೆ ಬಂದಿದೆ.
- ಚಾಮುಂಡಿ ತಾಯಾಣೆ ಅಂತ ಹಾಡೇ ಇದೆ, ಅದಕ್ಕೇ ಅವರು ಆ ಜಾಗದಲ್ಲಿ(ಮೈಸೂರಿನಲ್ಲಿ) ಇರಬೇಕು ಅಂತ ಆಸೆ ಪಟ್ಟಿರಬೇಕು.
- ನಾವು ಭೇಟಿ ಮಾಡಿದ ಮುಖ್ಯಮಂತ್ರಿಗಳ ಲೆಕ್ಕ ಇಲ್ಲ, ನಾವು ಅಲೆದ ಸರ್ಕಾರಿ ಕಚೇರಿಗಳಿಗೆ ಲೆಕ್ಕ ಇಲ್ಲ. ನಮ್ಮವರಿಗೋಸ್ಕರ ಎಲ್ಲವನ್ನೂ ಹೇಳಿಕೊಂಡು ಓಡಾಡ್ಬೇಕಾ? ಅಪವಾದ ಬಂದಾಗ ಎಲ್ಲವನ್ನೂ ಹೇಳಿಕೊಳ್ಳಬೇಕು. ಇದು ವ್ಯಾಪಾರೀಕರಣ ಅಂತ ಆರೋಪ ಮಾಡ್ತಾರೆ. ಇದರಿಂದ ನನಗೆ ಹತ್ತು ಲಕ್ಷ ಬರ್ತಿದೆ ಅಂತಾರೆ. ಹೇಗೆ ಬರುತ್ತೆ? ಸರ್ಕಾರಿ ಭೂಮಿ ಅದು. ನಮ್ಮ ವೈಯಕ್ತಿಕ ಕುಟುಂಬಕ್ಕೆ ಒಂದು ರೂಪಾಯಿ ಬರಲ್ಲ.
- ನಾವು ಚಾಮರಾಜಪೇಟೆಯ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆಗೆ ಪ್ಲಾನ್ ಮಾಡಿದ್ವಿ.
- ಆದ್ರೆ ಕುಮಾರಸ್ವಾಮಿ ಅವರು ಅಲ್ಲಿ ಬೇಡ. ಅವರಿಗೆ ಸಕಲ ಗೌರವ ಸಿಗಬೇಕು ಎಂದು ಅಭಿಮಾನ್ ಸ್ಟೂಡಿಯೋದಲ್ಲಿ ಮಾಡುವಂತೆ ಸಲಹೆ ನೀಡಿದ್ರು.
- ಆಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ರು, ಅಂಬರೀಶ್ ಅಂಕಲ್ ಕೂಡ ಅಲ್ಲಿಯೇ ಇದ್ರೂ.. ಅಂತ್ಯಕ್ರಿಯೆ ಮಾಡಿದ ಕೆಲವು ದಿನಗಳ ಬಳಿಕ ಅಭಿಮಾನ್ ಸ್ಟೂಡಿಯೋ ಜಾಗ ಕೋರ್ಟ್ ನಲ್ಲಿ ಇದೆ ಎಂದು ತಿಳಿಯಿತು.
- ಗೀತಾ ಬಾಲಿ ಅವರು 10 ಎಕ್ಕರೆ ಜಾಗದ ಮೇಲೆ ಕೇಸ್ ಹಾಕಿದ್ರು. ಸರ್ಕಾರ ವಿಷ್ಣುವರ್ಧನ್ ಟ್ರಸ್ಟ್ ಅಭಿವೃದ್ಧಿಗೆ 10 ಕೋಟಿ ಹಣ ನೀಡಿತ್ತು. ನಾನು, ಅಮ್ಮ ಇಬ್ಬರೂ ಆ ಟ್ರಸ್ಟ್ ಲಿ ಇದ್ದೀವಿ.
- ಗೀತಾ ಬಾಲಿ ಅವರನ್ನೂ ಸಾಕಷ್ಟು ಬಾರಿ ಕೇಳಿಕೊಂಡಿದ್ದೇವೆ. ಆದ್ರೆ ಜಾಗದ ಸಮಸ್ಯೆ ಬಗೆಹರಿಯಲಿಲ್ಲ. ಅಮ್ಮವ್ರು ವಿಷ್ಣುವರ್ಧನ್ ಅವರ ಅಸ್ಥಿಯನ್ನ ಅಭಿಮಾನ್ ಸ್ಟೂಡಿಯೋ ಜಾಗದಲ್ಲಿ ಸುರಕ್ಷಿತವಾಗಿ ಇಟ್ಟಿದ್ರು. ಮಂಟಪದ ಕೆಳಗಡೆ ಏನೂ ಇರಲಿಲ್ಲ. ಅವರಿಗೆ ಅಗ್ನಿ ಸ್ಪರ್ಷ ಆಗಿತ್ತು.
- ಅಮ್ಮವ್ರು ಎರೆಡು ವರ್ಷ ಕಾದರೂ ಕೂಡ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಗೊತ್ತಾಯ್ತು.
- ಅದಕ್ಕೆ ಒಂದು ಚೊಂಬಲ್ಲಿ ಅಸ್ತಿ ಉಳಿಸಿಕೊಂಡು ಮಿಕ್ಕಿದ್ದನ್ನ ನದಿಗೆ ಬಿಡಲಾಯ್ತು. ಒಂದು ಚೊಂಬಲ್ಲಿಟ್ಟಿದ್ದ ಅಸ್ತಿ ಈಗ ಮೈಸೂರಿನ ಸ್ಮಾರಕದ ಅಪ್ಪಾವ್ರ ಪುತ್ಥಳಿ ಕೆಳಗಿದೆ. ಅನಂತ್ ಕುಮಾರ ಅವರ ಪ್ರಯತ್ನದಿಂದ ಅಭಿಮಾನ್ ಸ್ಟೂಡಿಯೋ ದ ರಸ್ತೆಗಳು ಆಗಿದೆ.also read:ದಿಯಾ ಸಿನಿಮಾ ನಿರ್ಮಾಪಕ ಕೃಷ್ಣಚೈತನ್ಯ ವಿರುದ್ಧ ಎಫ್‌ಐಆರ್: ಕಾರಣ ಹೀಗಿದೆ
- ಯಾವತ್ತೂ ನಾವು ಮಾಡಿದ್ವಿ, ನಾವು ಮಾಡಿದ್ವಿ ಅಂತಾ ನಾವು ಎಲ್ಲೂ ಹೇಳಿಕೊಂಡಿಲ್ಲ.
- ಚಾಮುಂಡಿ ತಾಯಿಯ ಪಾಧ ಹತ್ತಿರವೇ ಇರಲು ಭಯಸಿದ್ರೇನೋ ಈಗ ಹಾಗೆ ಆಗಿದೆ. ಅಪವಾದ ಆರೋಪ ಬಂದಾಗ ಮಾತ್ರ ಎಲ್ಲಾ ಹೇಳಬೇಕಾಗುತ್ತದೆ ಎಂದಿದ್ದಾರೆ.