ವೈಯಾಲಿಕಾವಲ್(ಬೆಂಗಳೂರು): ಸಾಧಾರಣವಾಗಿ ಪ್ರೀತಿ ಪ್ರೇಮದಲ್ಲಿ ಇಬ್ಬರು ಚೆನ್ನಾಗಿದ್ದಾಗ ಎಲ್ಲವೂ ಚೆನ್ನಾಗಿರುತ್ತದೆ, ಆದರೆ ಈ ಅನುಮಾನದ ಭೂತ ಇಬ್ಬರಲ್ಲಿ ಒಬ್ಬರ ಮನಸ್ಸಿಗೆ ಬಂದರೆ ಪ್ರೀತಿಗಿಂತ ಪಜೀತಿಯೇ ಹೆಚ್ಚು. ಇಲ್ಲಿಯೂ ಇದೇ ರೀತಿಯ ವೈಮನಸ್ಸು ಇಬ್ಬರು ಪ್ರೇಮಿಗಳ ನಡುವೆ ಉಂಟಾಗಿ ಆಗಬಾರದೇ ಆಗಿದೆ.Levi's Men's Slim Fit Mid Rise 511 Mid-Rise Jeans
ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಒಂದರಲ್ಲಿ ಯುವತಿಯ ಮಾಜಿ ಲವ್ವರ್ ಯುವತಿಯ ಹೊಸ ಬಾಯ್ ಫ್ರೆಂಡ್ ಗೆ ಚಾಕು ಇರಿದಿದ್ದ ಘಟನೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿಯನ್ನು ಕಲೆಹಾಕಿದ್ದು ಯುವತಿಯ ಹಳೆ ಪ್ರಿಯಕರನಾದ ಯತೀಶ್, ಯುವತಿಯ ಹೊಸ ಪ್ರಿಯಕರನಾದ ಚಂದನ್ ಎಂಬಾತನಿಗೆ ಚಾಕು ಇರಿದು ಹಲ್ಲೆ ಮಾಡಿದ್ದ.also read:ಧರ್ಮಸ್ಥಳ ಬಗ್ಗೆ ಅವಹೇಳನಕಾರಿ ವೀಡಿಯೋ ಮಾಡಿ ಹರಿಬಿಟ್ಟವರಿಗೆ SIT ನೋಟಿಸ್
ಇದಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದ ಪೊಲೀಸರು ಕೆಲವೊಂದು ಮಾಹಿತಿಯನ್ನು ನೀಡಿದ್ದಾರೆ. ಹಿಂದೆ ಪ್ರೀತಿಸುತ್ತಿದ್ದ ಹುಡುಗಿ ಯತೀಶ್ನೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದಾಳೆ ನಂತರ ಚಂದನ್ ಎಂಬಾತನೊಂದಿಗೆ ಗೆಳೆತನವನ್ನು ಮುಂದುವರಿಸಿದ್ದಾಳೆ. ಇದರಿಂದ ಮನನೊಂದ ಯತೀಶ್, ಚಂದನ್ ಅವರನ್ನು ಸ್ಥಳಕ್ಕೆ ಕರೆಸಿ ಕೆಲಸ ಸಮಯ ಅವಾಚ್ಯ ಪದಗಳಿಂದ ಬೈದು ನಂತರ ಚಾಕು ಚುಚ್ಚಿ ಸ್ತಳದಿಂದ ಚಂದನ್ ಸೇರಿ ಇನ್ನೂ ಇಬ್ಬರು ಎಸ್ಕೇಪ್ ಆಗಿದ್ದಾರೆ. ಸದ್ಯ ಆರೋಪಿಗಳನ್ನ ಬಂದಿಸಿ ತನಿಖೆ ಮುಂದುವರಿಸಿರುವ ಪೊಲೀಸರು.