ಧರ್ಮಸ್ಥಳ- ಧಾರ್ಮಿಕ ಕೇಂದ್ರವಾದ ಧರ್ಮಸ್ಥಳ ಈಗ ಸಾಕಷ್ಟು ಸುದ್ದಿಯಲ್ಲಿದೆ ಅದಕ್ಕೆ ಕಾರಣ ಈ ಹಿಂದೆ ಸೌಜನ್ಯ ಪ್ರಕರಣವಾಗಿದ್ದರೆ, ಈಗ ಅನಾಮದೇಯ ವ್ಯಕ್ತಿ ತೋರಿಸಿದ ಹಾಗೂ ನಾನು ಇಲ್ಲಿ ಶವಗಳನ್ನು ಅಕ್ರಮವಾಗಿ ಹೂತಿದ್ದೆ ಎಂಬ ವಿಚಾರವಾಗಿ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದ ರಾಜ್ಯದ ಜನತೆ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾತುರರಾಗಿದ್ದರು.
ಸುಮಾರು 15 ಸ್ಥಳಗಳಲ್ಲಿ ಶವ ಉತ್ಕನನ ಕಾರ್ಯ ಮುಗಿದಿದ್ದು ಹೇಳಿಕೊಳ್ಳುವಂತಹ ಯಾವುದೇ ಅಕ್ರಮ ಅಸ್ತಿಪಂಜರಗಳು ಪತ್ತೆಯಾಗಿಲ್ಲ. ಆರರ ಸಮಾಧಿಯಲ್ಲಿ ಒಂದು ಅಸ್ತಿಪಂಜರವನ್ನು ಬಿಟ್ಟರೆ, ಹೀಗಾಗಿ ಕರ್ನಾಟಕ ಬಿಜೆಪಿ ಮತ್ತು ಶಾಸಕರು ಮತ್ತು ಇನ್ನಿತರ ಕಾರ್ಯಕರ್ತರು ಸುಮಾರು 400 ವಾಹನದಲ್ಲಿ ಧರ್ಮಸ್ಥಳ ಛಲೋ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹೀಗಾಗಿ ಈ ಕಾರ್ಯಕ್ರಮ ಕಾಂಗ್ರೆಸ್ ನ ಪಾಲಿಗೆ ಮಗ್ಗಲು ಮುಳ್ಳಾಗಿದೆ.
ಧರ್ಮಸ್ಥಳ ಕೇಸ್‌ಗೆ ಸಂಬಂಧಿಸಿದಂತೆ ಕ್ರೆಡಿಟ್ ವಾರು ಜೋರಾಗಿ ನಡೆಯುತ್ತಿದೆ, ಈ ಹಿನ್ನೆಲೆಯಲ್ಲಿ ಈ ಹಿಂದಿನ ಧರ್ಮಸ್ಥಳದ ವ್ಯಕ್ತಿಯಾದ ಮಹೇಶ್ ತಿಮ್ಮರೂಡಿ ಮಾನ್ಯ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಿದ್ದ ಆ ಒಂದು ಮಾತು ಭಾರಿ ಚರ್ಚೆಗೆ ಗ್ರಾಸವಾಗಿದೆ, ಆ ವಿಡಿಯೋದಲ್ಲಿ ಆತ ಹೇಳಿದ್ದು “ಮುಖ್ಯಮಂತ್ರಿಗಳು ಸಹ 24 ಕೊಲೆಗಳನ್ನು ಮಾಡಿದ್ದಾರೆ ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಮಾತನಾಡಿದ್ದಾರೆ” ಆ ವಿಚಾರವನ್ನು ಎತ್ತಿಕೊಂಡು ಮತ್ತೊಬ್ಬ ಶಾಸಕರು ಇದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಗಮನವನ್ನು ಸೆಳೆದರು ಮತ್ತು ಶವ ಉತ್ಖನನ ಕಾರ್ಯದಲ್ಲಿ ಇಲ್ಲಿಯವರೆಗಿನ ತನಿಖೆಯ ಮಾಹಿತಿಯನ್ನು ರಾಜ್ಯದ ಮುಂದಿಡಬೇಕೆಂದು ಗೃಹ ಸಚಿವ ಪರಮೇಶ್ವರ ಅವರನ್ನು ಬಿಜೆಪಿಯ ಶಾಸಕರು ಒತ್ತಾಯಿಸಿದರು.Fflirtygo Men Graphic Print Cotton T-Shirt & Short Set for Men/Boys
ಹೀಗಾಗಿ ಇವತ್ತಿನ ಸದನದಲ್ಲಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ "ನಿಮಗೆ ಎಷ್ಟು ಜವಾಬ್ದಾರಿ ಇದೆಯೋ ನಮಗೂ ಅಷ್ಟೇ ಜವಾಬ್ದಾರಿ ಇದೆ, ನೀವೇನು ಧರ್ಮಸ್ಥಳವನ್ನು ಗುತ್ತಿಗೆಗೆ ಪಡೆದುಕೊಂಡಿಲ್ಲ ಹೀಗಾಗಿ ನಾವು ಸಹ ಸ್ಪಷ್ಟ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಮತ್ತು ಮಹೇಶ್ ತಿಮ್ಮರುಡಿ ಬಗ್ಗೆ ಮಾತನಾಡಿದ ಅವರು ಆ ವ್ಯಕ್ತಿಯನ್ನು ದೊಡ್ಡ ಮನುಷ್ಯನಾಗಿ ಮಾಡುವುದು ಬೇಡ ಏಕೆಂದರೆ, ಈಗಾಗಲೇ ಹಲವಾರು ಕೇಸ್ಗಳು ಆತನ ಮೇಲಿದೆ ಸಮಯ ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ "ಎಂದರು ಇವತ್ತಿನ ಸದನದಲ್ಲಿ ಮಧ್ಯಾಹ್ನದವರೆಗೂ ಕೇಸ್‌ನ ಬಗ್ಗೆ ಮಾಹಿತಿಯನ್ನು ಗೃಹ ಸಚಿವ ಪರಮೇಶ್ವರ್ ನೀಡಿಲ್ಲ ಸಂಜೆಯೊಳಗೆ ಕೇಸ್ನ ಬಗ್ಗೆ ಮಾಹಿತಿಯನ್ನು ನೀಡುತ್ತಾರೆಯೇ ಎಂದು ಕಾದು ನೋಡಬೇಕಿದೆ.ALSO READ:ಯತೀಶ್ ಜೊತೆ ಬ್ರೇಕಪ್, ಚಂದನ್ ಜೊತೆ ಪ್ಯಾಚಪ್: ನಂತರ ಆಗಿದ್ದೆ ಅಟ್ಯಾಕ್, ಯಾರಿಗೆ? ಇಲ್ಲಿದೆ ಮಾಹಿತಿ
ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಮಹೇಶ್ ತಿಮ್ಮರೂಡಿ ಆ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದು ಅದನ್ನು ಒಬ್ಬ ಶಾಸಕರು ಹಿಂದಿನ ಕಾರ್ಯಕ್ರಮದಲ್ಲಿ ಹೇಳಿದ್ದರು ಅದನ್ನೇ ನಾನು ಪುನರುಚ್ಚರಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.