ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫೋನ್ ಕರೆ ಮಾಡಿ, ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆದ ಇತ್ತೀಚಿನ ಭೇಟಿಯ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.ಜಿಎಸ್‌ಟಿ 2.0 ಸುಧಾರಣೆ: ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ತೆರಿಗೆ ಹಂತಗಳ ಭವಿಷ್ಯ!
ಇದಕ್ಕೆ ಪ್ರಧಾನಿ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಮೋದಿ ತಮ್ಮ ಟ್ವೀಟ್‌ನಲ್ಲಿ, ನನ್ನ ಸ್ನೇಹಿತ ಅಧ್ಯಕ್ಷ ಪುಟಿನ್ ಅವರ ಫೋನ್ ಕರೆ ಮತ್ತು ಅಲಾಸ್ಕಾದಲ್ಲಿ ಅಧ್ಯಕ್ಷ ಟ್ರಂಪ್ ಅವರೊಂದಿಗೆ ನಡೆದ ಭೇಟಿಯ ಕುರಿತಾಗಿ ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
The Tie Hub Fedora Hat for Men
ಪ್ರಧಾನಿ ಮೋದಿ ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಬರುವಂತೆ ಭಾರತ ನಿರಂತರವಾಗಿ ಕರೆ ನೀಡುತ್ತಿದ್ದು, ಈ ಪ್ರಯತ್ನಗಳಲ್ಲಿ ಸಹಕರಿಸಲು ಸಿದ್ಧರಿದ್ದಾರೆ. ಅವರು ಹೇಳಿದರು, ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತ ನಿರಂತರವಾಗಿ ಕರೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಸುದೀರ್ಘ ಸಂವಾದವನ್ನು ನಾನು ಎದುರು ನೋಡುತ್ತಿದ್ದೇನೆ.ಅಕ್ರಮ ಶವ ಹೂತಿಟ್ಟ ಪ್ರಕರಣ FSL ವರದಿ ಬರಲಿ, ಬಂದಮೇಲೆ ಬೇರೆ ಕಥೆ: ಸದನದಲ್ಲಿ ಗೃಹ ಸಚಿವರ ಖಡಕ್ ಹೇಳಿಕೆ ಹೀಗಿತ್ತು!
ಅಲಾಸ್ಕಾದಲ್ಲಿ ಆಗಸ್ಟ್ 15ರಂದು ನಡೆದ ಅಧ್ಯಕ್ಷ ಟ್ರಂಪ್ ಮತ್ತು ಅಧ್ಯಕ್ಷ ಪುಟಿನ್ ಭೇಟಿಯಲ್ಲಿ, ಉಕ್ರೇನ್ ಸಂಘರ್ಷದ ಕುರಿತು ಕದನ ವಿರಾಮದ ಸಾಧ್ಯತೆಯನ್ನು ಚರ್ಚಿಸಲಾಗಿದೆ. ಈ ಸಂವಾದವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸಾಧನೆಯತ್ತ ಒಂದು ಮಹತ್ವದ ಹೆಜ್ಜೆ ಎಂದು ವಿಶ್ಲೇಷಕರನು ಹೇಳಿದ್ದಾರೆ.