Skip to main content
ವಿಡಿಯೋ
1/3
politics

ಅಕ್ರಮ ಶವ ಹೂತಿಟ್ಟ ಪ್ರಕರಣ FSL ವರದಿ ಬರಲಿ, ಬಂದಮೇಲೆ ಬೇರೆ ಕಥೆ: ಸದನದಲ್ಲಿ ಗೃಹ ಸಚಿವರ ಖಡಕ್‌ ಹೇಳಿಕೆ ಹೀಗಿತ್ತು!

By Gireesh Vasishta
ಅಕ್ರಮ ಶವ ಹೂತಿಟ್ಟ ಪ್ರಕರಣ FSL ವರದಿ ಬರಲಿ, ಬಂದಮೇಲೆ ಬೇರೆ ಕಥೆ: ಸದನದಲ್ಲಿ ಗೃಹ ಸಚಿವರ  ಖಡಕ್‌ ಹೇಳಿಕೆ ಹೀಗಿತ್ತು!

-19-7-2025 ರಂದು ಎಸ್ ಐಟಿ ರಚನೆ ಆಗಿರುತ್ತದೆ. ಎಸ್ ಐಟಿ ತಂಡದ ಎಲ್ಲ ಪೊಲೀಸ್ ತನಿಖಾ ಅಧಿಕಾರಿಗಳ ಹೆಸರನ್ನ ಸದನದಲ್ಲಿ ಗೃಹ ಸಚಿವರು ಓದಿ ಹೇಳಿದರು. ಎಸ್ ಐಟಿ ಧರ್ಮಸ್ಥಳ ಪೊಲೀಸ್ ಠಾಣೆಯಿಂದ ಕೇಸ್ನ್ನ ತನ್ನ‌ವಶಕ್ಕೆ ಪಡೆದು ತನಿಖೆ ಆರಂಭಿಸುತ್ತದೆ.

ಬೆಂಗಳೂರು: ಆಕ್ರಮ ಶವಗಳನ್ನು ಹೂತಿಟ್ಟಿರುವುದರ ಬಗ್ಗೆ ಮುಸುಕುದಾರಿ ವ್ಯಕ್ತಿ ತನಿಖೆ ನಡೆಸಲು 03-07-2025 ರಂದು ಒಂದು ದೂರನ್ನು ದಾಖಲು ಮಾಡಿರುತ್ತಾನೆ. ಮುಸುಕುದಾರಿ ದೂರನ್ನ ಓದಿ ಸದನಕ್ಕೆ ಹೇಳಿದ ಗೃಹ ಸಚಿವ ಪರಮೇಶ್ವರ್, ನಂತರ 4-7-25 ಕ್ಕೆ ದೂರು ಆಧರಿಸಿ ಎಫ್ ಐಆರ್ ದಾಖಲು ಮಾಡಲಾಗುತ್ತದೆ.

- ದೂರಿನ ಎಲ್ಲ ಅಂಶಗಳನ್ನ ಎಫ್ ಐ ಆರ್ ನಲ್ಲಿ ಉಲ್ಲೇಖ ಮಾಡಲಾಗಿದೆ.

- ನೂರಾರು ಶವಗಳನ್ನ ಹೂತಿರುವುದಾಗಿ ದೂರು ನೀಡಿರುತ್ತಾನೆ.

- ಮ್ಯಾಜಿಸ್ಟ್ರೇಟ್ ಮುಂದೆ ಸೆಕ್ಷನ್ 164 ಸಿಪಿಆರ್ - 183 ಬಿಎನ್ಎಸ್ ಪ್ರಕಾರ ಹೇಳಿಕೆಯನ್ನ ದಾಖಲು ಮಾಡಿಕೊಳ್ಳಲಾಗುತ್ತದೆ.

- ರಾಜ್ಯ ಮಹಿಳಾ ಆಯೋಗದ ಅಧ್ಯಕಷರಾದ ನಾಗಲಕ್ಷ್ಮೀ ಬಾಯಿ ಸಿಎಂಗೆ ಪತ್ರ ಬರೆದಿರುತ್ತಾರೆ. ಎಸ್ ಐಟಿ ರಚಿಸುವಂತೆ ಒತ್ತಾಯ ಮಾಡಿ ಪತ್ರ ಬರೆದಿರುತ್ತಾರೆ.

- ಕಳೆದ 20 ವರ್ಷಗಳಿಂದ ಅಸ್ವಾಭಾವಿಕವಾಗಿ ಸಾವನ್ನಪ್ಪಿರುವ ಬಗ್ಗೆ ಎಸ್ ಐ ಟಿ ರಚಿಸುವಂತೆ ಮಹಿಳಾ ಆಯೋಗ ಕೋರಿರುತ್ತದೆ.

- ಇದನ್ನ ಕುರಿತು ಸಿಎಂ - ಗೃಹ ಸಚಿವರು ಚರ್ಚಿಸಿ ಎಸ್ಐಟಿ ರಚನೆ ಮಾಡಿರುತ್ತಾರೆ.

-19-7-2025 ರಂದು ಎಸ್ ಐಟಿ ರಚನೆ ಆಗಿರುತ್ತದೆ. ಎಸ್ ಐಟಿ ತಂಡದ ಎಲ್ಲ ಪೊಲೀಸ್ ತನಿಖಾ ಅಧಿಕಾರಿಗಳ ಹೆಸರನ್ನ ಸದನದಲ್ಲಿ ಗೃಹ ಸಚಿವರು ಓದಿ ಹೇಳಿದರು. ಎಸ್ ಐಟಿ ಧರ್ಮಸ್ಥಳ ಪೊಲೀಸ್ ಠಾಣೆಯಿಂದ ಕೇಸ್ನ್ನ ತನ್ನವಶಕ್ಕೆ ಪಡೆದು ತನಿಖೆ ಆರಂಭಿಸುತ್ತದೆ.also read:ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ಮೇಜರ್ ಸರ್ಜರಿ: 5 ಹಿರಿಯ ಅಧಿಕಾರಿಗಳು ಟ್ರಾನ್ಸ್‌ಫರ್‌: ಕಾರಣ ಭಾರೀ ಭ್ರಷ್ಟಾಚಾರ!

- 164ರ ಪ್ರಕಾರ ಎಸ್ ಐಟಿಯೂ ಹೇಳಿಕೆಯನ್ನ ಮುಸುಕುಧಾರಿಯಿಂದ ಹೇಳಿಸಿ ದಾಖಲು ಮಾಡಿಕೊಂಡಿದ್ದಾರೆ. ಧರ್ಮಸ್ಥಳ ಯಾವ ಯಾವ ಸ್ಥಳದಲ್ಲಿ ಹೆಣಗಳನ್ನಹೂತು ಹಾಕಲಾಗಿದೆ ಎಂದು ಮಾರ್ಕ್ ಮಾಡಿಕೊಂಡಿರುತ್ತಾರೆ. ಉಪ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಅಸ್ಥಿಪಂಜರ ಹುಡುಕಾಟ ನಡೆಯುತ್ತದೆ.

- ಎರಡು ಜಾಗಗಳಲ್ಲಿ ವಸ್ತು ಸಿಕ್ಕಿದೆ, ಮತ್ತು ಒಂದು ಜಾಗದಲ್ಲಿ ಅಸ್ಥಿಪಂಜರ ಸಿಕ್ಕಿದೆ. ಸ್ಯಾಂಪಲ್ ಎಲ್ಲವನ್ನೂ ಎಫ್ ಎಸ್ ಎಲ್ ಗೆ ಕಳುಹಿಸಲಾಗಿದೆ.also read:ಯತೀಶ್ ಜೊತೆ ಬ್ರೇಕಪ್‌, ಚಂದನ್ ಜೊತೆ ಪ್ಯಾಚಪ್‌: ನಂತರ ಆಗಿದ್ದೆ ಅಟ್ಯಾಕ್‌, ಯಾರಿಗೆ? ಇಲ್ಲಿದೆ ಮಾಹಿತಿ

ಧರ್ಮಸ್ಥಳ- ಅಲ್ಲಿ ಸಿಕ್ಕ ಎಲ್ಲಾ ಸ್ಯಾಂಪಲ್‌ಗಳನ್ನು FSLಗೆ ಕಳುಹಿಸಲಾಗಿದೆ, ಮತ್ತೊಂದು ಜಾಗದಲ್ಲಿ ಕೆಲವೊಂದು ಮೂಳೆ ಸಿಕ್ಕಿದೆ. ಅದನ್ನ‌‌ ಪರಿಶೀಲನೆ ನಡೆಸಲು ನೀಡಲಾಗಿದೆ.

-ಈಗ ಸಿಕ್ಕಿರುವ ಅಸ್ಥಿಪಂಜರದ ಜಾಗದಲ್ಲೂ ತನಿಖೆಯೂ ವೈಜ್ಞಾನಿಕವಾಗಿ ನಡೆಯಬೇಕಿದೆ, ಹೀಗಾಗಿ ತನಿಖೆ ಇನ್ನ್ಮುಂದೆ ನಡೆಯಬೇಕಿದೆ.

-ಅನಾಮಿಕ ಕೊಟ್ಟಿರುವ ತಲೆ ಬುರುಡೆಯ ವರದಿ FSLನಿಂದ ವರದಿ ಬರಬೇಕಿದೆ.
 


ಅನಾಮಿಕ ದಿನ ಬರುವುದು ಮತ್ತೆ ವಾಪಾಸ್ ಹೋಗುವುದು ಮಾಡುತ್ತಿದ್ದಾನೆ, ನಿತ್ಯ ಅವನು ಬಂದು ಮನೆಗೆ ಹೋಗಲು ಹೇಗೆ ಬಿಟ್ಟಿದ್ದಾರೆ ಎಂದು ವಿಪಕ್ಷದ ಪ್ರಶ್ನೆಗೆ ಉತ್ತರ ನೀಡಿದ ಅವರು.

-ಸಾಕ್ಷಿ ಕಾಯ್ದೆ ಪ್ರಕಾರ  ಸಾಕ್ಷಿ  ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂರ್ಪಕಿಸಿದ್ದಾರೆ, ಪ್ರಿನ್ಸಿಪಲ್ ಡಿಸ್ಟ್ರಿಕ್ ಕೋರ್ಟ್ ಸಮಿತಿಯಿಂದ ಈ ಆದೇಶ ಬಂದಿದೆ.

- ಇವರ ಆದೇಶದ ಪ್ರಕಾರ ಅನಾಮಿಕನಿಗೆ ಸುರಕ್ಷತೆ ಅವರ ಕುಟುಂಬಕ್ಕೂ ರಕ್ಷಣೆ ನೀಡಬೇಕು.

- ಅನಾಮಿಕನನ್ನ ಕೋರ್ಟ್ ಸಾಕ್ಷಿದಾರನೆಂದು ಗುರುತಿಸಿದೆ, ಹೀಗಾಗಿ ಮಾಹಿತಿ ಕೊಟ್ಟವರ ಮನೆಗೂ ಭದ್ರತೆ ನೀಡಬೇಕಾಗಿದೆ.

- ಪೊಲೀಸ್ ಸ್ಟೇಷನ್ , ನ್ಯಾಯಾಲಯಕ್ಕಾಗಿ ಬರುವಾಗ ಭದ್ರತೆ ಕೊಡಬೇಕಾಗಿದೆ, 60 ದಿನದವರೆಗೂ ಈ ಆದೇಶವನ್ನ ಪಾಲಿಸುವುದಾಗಿದೆ.

- ಅನಾಮಿಕನನ್ನ ಬಂಧಿಸಲು ಹಾಗೂ ಪೊಲೀಸ್ ವಶಕ್ಕೆ ಪಡೆಯಲು ಆಗಲ್ಲ.

ಪಾರದರ್ಶಕ ತನಿಖೆ ನಡೆಯುತ್ತಿದೆ, ಯಾರ ಒತ್ತಡಕ್ಕೂ ಮಣಿಯದೇ ತನಿಖೆ ನಡೆಯುತ್ತಿದೆ, ಅವನು ಹೇಳಿದ ಕಡೆಯೂ ಅಗೆಯಲಾಗುತ್ತಿದೆ. ಹಾಗಂತ ಇಡೀ ಧರ್ಮಸ್ಥಳ ಅಗೆಯಲು ಆಗಲ್ಲ, ಮುಂದೆ ತೋರಿಸಿದ ಕಡೆ ಅಗೆಯಬೇಕಾ ? ಬೇಡವಾ ಎನ್ನುವುದು ಎಸ್ ಐ ಟಿ ತೀರ್ಮಾನ ಮಾಡುತ್ತದೆ.

- ಎಫ್ ಎಸ್ ಎಲ್ ರಿಪೋರ್ಟ್ ಜೊತೆಗೆ ಕೆಮಿಕಲ್ ಅನಾಲಿಸಿಸ್ ಆಗಬೇಕಿದೆ, ಡಿಎನ್ ಎ ಹ್ಯೂಮನ್ ಎಂದು ಬರದಿದ್ದರೆ ಆಗ ಬೇರೆಯೇ ವಿಚಾರ ಆಗಲಿದೆ. ಸದ್ಯ ಎಫ್ಎಸ್ಎಲ್ ರಿಪೋರ್ಟ್ ಬರುವವರೆಗೂ ಅಗೆಯುವ ಕಾರ್ಯಕ್ಕೆ ಬ್ರೇಕ್ ನೀಡಾಲಾಗಿದೆ. ತನಿಖೆ ಮುಗಿಯುವವರೆಗೂ ಯಾರು ಏನು ಹೇಳಲು ಆಗಲ್ಲ, ತನಿಖೆ ಆಗಿದೇ ಅಂತಾ ಹೇಳಲು ಆಗಲ್ಲ.‌ಆಗಿಲ್ಲ ಎಂದು ಹೇಳಲು ಆಗಲ್ಲ.

ಧರ್ಮದ ಹೆಸರಲ್ಲಿ ನೋಡುವುದು ಬೇಡ, ಧರ್ಮಸ್ಥಳ ವಿಚಾರದಲ್ಲಿ ಸತ್ಯ ಹೊರಗೆ ಬರಲಿ, ಕಾನೂನು ಫೈನಲ್ ಎಲ್ಲರು ಅದರ ಮುಂದೆ ಸಮಾನರು. ತನಿಖೆಗೆ ಟೈಮ್ ಲೈನ್ ಇಲ್ಲ, ಎಲ್ಲರು ತನಿಖೆಗೆ ಸಹಕರಿಸಿ, ಯಾರನ್ನು ರಕ್ಷಣೆ ಮಾಡಲ್ಲ - ದೂಷಣೆ ಮಾಡಲ್ಲ, ದೇಶದಲ್ಲಿ ದೊಡ್ಡ ಸಂಸ್ಥೆಗಳನ್ನು ಹೊಂದಿರುವ  ವೀರೇಂದ್ರ ಹೆಗ್ಡೆ ಅವರ ಮೇಲೆ ಈ ರೀತಿ ಆಗಿರುವುದಕ್ಕೆ ಸತ್ಯ ಹೊರಗೆ ಬರಬೇಕಿದೆ, ತನಿಖೆ ಮುಚ್ಚಿಡುವ ಅಗತ್ಯ ಸರ್ಕಾರಕ್ಕೆ ಇಲ್ಲ ಎಂದಿದ್ದಾರೆ.