Skip to main content
ವಿಡಿಯೋ
crime

ಚಿತ್ರದುರ್ಗದಲ್ಲಿ 20 ವರ್ಷದ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ: ಆರೋಪಿಯೊಬ್ಬ ಬಂಧನ, ತನಿಖೆ ಮುಂದುವರಿಕೆ..!

By Vinutha U
ಚಿತ್ರದುರ್ಗದಲ್ಲಿ 20 ವರ್ಷದ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ: ಆರೋಪಿಯೊಬ್ಬ ಬಂಧನ, ತನಿಖೆ ಮುಂದುವರಿಕೆ..!

ಒಬ್ಬ ಆರೋಪಿ ಚೇತನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆತ ತನ್ನ ಗೆಳತಿಯಾದ ವರ್ಷಿತಾಳನ್ನು ಒಂದು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಆಕೆಯ ಮದುವೆಯ ಒತ್ತಾಯದಿಂದ ಚೇತನ್ ಆಕೆಯನ್ನು ಕೊಂದು ಶವವನ್ನು ಸುಟ್ಟಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಚಿತ್ರದುರ್ಗ:  20 ವರ್ಷದ ಉತಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಬಳಿ ಗೊನೂರಿನಲ್ಲಿ ನಡೆದಿದೆ.

 

ಇತ್ತೀಚಿನ ದಿನಗಳಲ್ಲಿ ಕೊಲೆ, ಅತ್ಯಾಚಾರ, ದರೋಡೆ ಇನ್ನು ಮುಂತಾದ ಕೃತ್ಯಗಳು ನಡೆಯುತ್ತಿರುವುದನ್ನು ನೋಡಬಹುದು, ಆದರೆ ಪ್ರೀತಿಸಿ ಮದುವೆಯಾಗುತ್ತೀನಿ ಎಂದು ಹೇಳಿ ನಂಬಿಸಿ ಕೊನೆಗೆ ಆಕೆಯ ಸಾವಿಗೆ ಯಮರಾಜರಾಗಿಬಿಡುತ್ತಾರೆ. ಕೆಟ್ಟುಹೋಗಿರುವ ಪ್ರಪಂಚದಲ್ಲಿ ಯಾರು ಯಾರನ್ನು ಕೂಡ ನಂಬುವ ಹಾಗಿಲ್ಲ, ನಮ್ಮ ಜೊತೆ ಕೊನೆಯವರೆಗೂ ಇರುತ್ತೇನೆ ಎಂಬುವರೇ ನಮ್ಮನ್ನು ಕೊನೆಗೆ ಹಳ್ಳಕ್ಕೆ ತಳ್ಳುವುದು, ಅದನ್ನು ತಿಳಿದುಕೊಳ್ಳುವ ತನಕ ನಮ್ಮ ಸಮಾಜ ಯಾವುದೇ ಕಾರಣಕ್ಕೂ ಸರಿ ಹೋಗುವುದಿಲ್ಲ. ಅದೇ ರೀತಿಯ ಒಂದು ಘಟನೆಯನ್ನು ನೋಡಬಹುದು.

 

 

ಆಗಸ್ಟ್ 14, 2025 ರಂದು 20 ವರ್ಷದ ಬಿಎ ವಿದ್ಯಾರ್ಥಿನಿ ವರ್ಷಿತಾ ಎಂಬಾಕೆಯ ಸುಟ್ಟ ಶವ ಕಂಡುಬಂದಿದೆ. ವರ್ಷಿತಾ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದು, ಎಸ್ಸಿ/ಎಸ್ಟಿ ವಿದ್ಯಾರ್ಥಿನಿಯರ ವಸತಿಗೃಹದಲ್ಲಿ ವಾಸಿಸುತ್ತಿದ್ದಳು. ಆಗಸ್ಟ್ 14 ರಂದು ರಜೆ ಪತ್ರ ಸಲ್ಲಿಸಿ ವಸತಿಗೃಹದಿಂದ ಹೊರಟಿದ್ದವಳು, ಮಾರನೇಯ ದಿನಹೆಣವಾಗಿ ಪತ್ತೆಯಾಗಿದ್ದಾಳೆ. ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ವರ್ಷಿತಾ ತಿಪ್ಪೇಸ್ವಾಮಿ ಕೊಲೆ ಪ್ರಕರಣವು ತಾಯಿ ಜ್ಯೋತಿ ತಿಪ್ಪೇಸ್ವಾಮಿ ಅವರಿಗೆ ತೀವ್ರವಾದ ದುಃಖ ಮತ್ತು ಆಘಾತವನ್ನು ಉಂಟುಮಾಡಿದೆ. ಜ್ಯೋತಿ ತಿಪ್ಪೇಸ್ವಾಮಿ ಅವರು ತಮ್ಮ ಒಬ್ಬಳೇ ಮಗಳಾದ ವರ್ಷಿತಾಳನ್ನು ಪ್ರೀತಿಯಿಂದ ಸಾಕಿದ್ದರು, ಆದರೆ ಯಾವುದೋ ನಡೆಯಬಾರದ ಗಟನೆಯಿಂದ ತಮ್ಮ ಮಗಳನನ್ನು ಕಳೆದುಕೊಂಡಿದ್ದು, ಆಕೆಯ ಕೊಲೆಗೆ ಕಾರಣರಾದವರಿಗೆ ಗಲ್ಲಿಗೇರಿಸುವ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

 

ವರ್ಷಿತಾಳನ್ನು ಕೊಲೆಗೈಯುವ ಮೊದಲು ದೈಹಿಕವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ  ಎಂದು ಜ್ಯೋತಿ ಹೇಳಿದ್ದಾರೆ. ವರ್ಷಿತಾ ಚಿತ್ರದುರ್ಗದ ಒಂದು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು ಮತ್ತು ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದಳು. ಜ್ಯೋತಿ ಅವರಿಗೆ ಹಾಸ್ಟೆಲ್ನಲ್ಲಿರುವ ಇತರ ವಿದ್ಯಾರ್ಥಿಗಳಿಂದ ದೊರೆತ ಮಾಹಿತಿಯ ಪ್ರಕಾರ, ಚೇತನ್ ಎಂಬಾತನು ವರ್ಷಿತಾಳನ್ನು ಭೇಟಿಯಾಗಲು ಹಾಸ್ಟೆಲ್ಗೆ ಬಂದಿದ್ದನು. ಆದರೆ, ಕೊಲೆಯು ಕೇವಲ ಒಬ್ಬನಿಂದ ನಡೆದಿಲ್ಲ ಎಂದು ಜ್ಯೋತಿ ಅನುಮಾನ ವ್ಯಕ್ತ ಪಡಿಸಿದ್ದಾರೆ.

 

ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ಪ್ರೀತಿಯ ಜಡ್ಜ್ ಫ್ರಾಂಕ್ ಕ್ಯಾಪ್ರಿಯೋ ಕ್ಯಾನ್ಸರ್‌ನಿಂದ ನಿಧನ..!

ಕೊಲೆಯ ಹಿಂದಿನ ನಿಖರ ಕಾರಣಗಳು ಮತ್ತು ಆರೋಪಿಗಳ ಸಂಖ್ಯೆಯ ಬಗ್ಗೆ ಇನ್ನೂ ಸ್ಪಷ್ಟತೆ ದೊರೆತಿಲ್ಲ, ಆದರೆ ಪ್ರಕರಣವು ಚಿತ್ರದುರ್ಗದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜ್ಯೋತಿ ತಿಪ್ಪೇಸ್ವಾಮಿ ಅವರು ಕಾಲೇಜು ಮತ್ತು ಹಾಸ್ಟೆಲ್ ಆಡಳಿತವು ವಿದ್ಯಾರ್ಥಿಗಳ ರಕ್ಷಣೆಗೆ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಘಟನೆಯಿಂದಾಗಿ ಯುವತಿಯರ ಸುರಕ್ಷತೆಯ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದೆ. ಪೊಲೀಸ್ ತನಿಖೆ ಇನ್ನೂ ನಡೆಯುತ್ತಿದ್ದು, ಆರೋಪಿಗಳನ್ನು ಗುರುತಿಸಿ ಕಾನೂನಿನ ಮುಂದೆ ತರುವ ಪ್ರಯತ್ನಗಳು ನಡೆಸುತ್ತಿದ್ದಾರೆ. ದುರಂತ ಘಟನೆಯಿಂದ ಜ್ಯೋತಿ ಅವರ ಕುಟುಂಬವು ತೀವ್ರ ಮಾನಸಿಕ ಆಘಾತಕ್ಕೊಳಗಾಗಿದೆ. ಸಾರ್ವಜನಿಕರು ಮತ್ತು ಸ್ಥಳೀಯ ಸಮುದಾಯವು ಕೊಲೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ತಕ್ಷಣದ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಆಕೆಯ ತಂದೆ-ತಾಯಿ ತಿಪ್ಪೇಸ್ವಾಮಿ ಮತ್ತು ಜ್ಯೋತಿ ಕಾಣೆಯಾದ ಬಗ್ಗೆ ದೂರು ದಾಖಲಿಸಲು ಬಂದಾಗ ಶವ ಪತ್ತೆಯಾದ ಸುದ್ದಿ ತಿಳಿದು ಆಘಾತಕ್ಕೊಳಗಾದರು. ಪೊಲೀಸರು ಘಟನೆಯನ್ನು ಅತ್ಯಾಚಾರ ಮತ್ತು ಕೊಲೆ ಎಂದು ಶಂಕಿಸಿದ್ದು, ಶವವನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಲಾಗಿದೆ ಎಂದು ಭಾವಿಸಿದ್ದಾರೆ. ಚಿತ್ರದುರ್ಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ದಿನಕರ್ ಮತ್ತು ಪಿಐ ಮುದ್ದು ರಾಜ್ ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ. ಫೊರೆನ್ಸಿಕ್ ತಂಡವು ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಸಮುದಾಯದ ಸಹಕಾರದೊಂದಿಗೆ ಆರೋಪಿಗಳನ್ನು ಪತ್ತೆಹಚ್ಚಲು ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

Bata Women's Block Heel Sandal

ಒಬ್ಬ ಆರೋಪಿ ಚೇತನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆತ ತನ್ನ ಗೆಳತಿಯಾದ ವರ್ಷಿತಾಳನ್ನು ಒಂದು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಆಕೆಯ ಮದುವೆಯ ಒತ್ತಾಯದಿಂದ ಚೇತನ್ ಆಕೆಯನ್ನು ಕೊಂದು ಶವವನ್ನು ಸುಟ್ಟಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.